ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೮೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸರ್ಗ, ೩೫.} ಅಯೋಧ್ಯಾಕಾಂಡನು. . ಕೊಳ್ಳದೆ ಥರಿಸಿರುವುದನ್ನು ನೋಡಿದರೆ ಅದಕ್ಕಿಂತಲೂ ಪರಮಾಶ್ಚರೈನಾ ಗಿದೆ. ವಸಿಷ್ಟಾದಿಗಳಾದ ಬ್ರಹ್ಮಋಷಿಗಳೆಲ್ಲರೂ ಈ ನಿನ್ನ ಕರಸ್ವಭಾ ವಕ್ಕೆ ಕೋಪಿಸಿ, ಇನ್ನೂ ನಿನ್ನನ್ನು ತಮ್ಮ ಶಾಪರೂಪವಾದ ವಾಗ್ಧಂಡದಿಂದ ಶಿಕ್ಷಿಸದಿರುವರಲ್ಲಾ! ಲೋಕೋತ್ತರಗುಣವಿಶಿಷ್ಟನಾದ ರಾಮನನ್ನು ಕಾ ಡಿಗೆಕಳುಹಿಸಬೇಕೆಂದು ಪ್ರಯತ್ನಿಸಿರುವ ಈ ನಿನ್ನ ಕರಸ್ವಭಾವಕ್ಕೆ ತಕ್ಕ ಶಿಕ್ಷೆಯನ್ನು ಇದುವರೆಗೆ ಯಾರೂ ಮಾಡದಿರುವುದು ನನಗೆ ಅತ್ಯಾಶ್ಚರ ವನ್ನುಂಟುಮಾಡುತ್ತಿದೆ ! ಚೆನ್ನಾಗಿ ಬೆಳೆದಿರತಕ್ಕ * ಮಾವಿನ ಮರವನ್ನು ಕೊಡಲಿಯಿಂದ ಕಡಿದು,ಆ ಸ್ಥಳದಲ್ಲಿ ಬೇವಿನಮರವನ್ನು ನಟ್ಟು, ಅದಕ್ಕೆ ಹಾ ಲೆರೆದು ಎಷ್ಟೇ ಪ್ರೀತಿಯಿಂದ ಪೋಷಿಸಿದರೂ ಅದು ರುಚಿಯಾದ ಹಣ್ಣನ್ನು ಕೊಡುವುದೆ ? ಇದು ನಿನಗೆ ಜನ್ಮ ಸಂಬಂಧವಾದ ಗುಣವಲ್ಲದೆ ಸ್ವಾಭಾವಿಕ ವಾದ ಗುಣವಲ್ಲ ! ದೊಡ್ಡ ವಂಶದಲ್ಲಿ ಹಟ್ಟಿದ್ದರೂ ನಿನ್ನ ತಾಯಿಗೆ ಯಾವ ದುಭಾವವಿತ್ತೋ, ಆ ಸ್ವಭಾವವೇ ನಿನಗೂ ಅನುಸರಿಸಿ ಬಂದಿರುವುದೆಂ ದು ನನಗೆ ತೋರುವುದು. ಬೇವಿನ ಹೂಗಳಲ್ಲಿ ಜೇನಿಲ್ಲವೆಂಬ ಲೋಕಪ್ರಸಿ ದ್ಧಿಯನ್ನು ಕೇಳಿಲ್ಲವೆ ? ನಿನ್ನ ಹೆತ್ತ ತಾಯಿಯು ನಡೆಸಿದ ಮಹಾಘೋರವಾ ದ ಪಾಪಕರವನ್ನು ನಾವೂ ಕೇಳಿಬಲ್ಲೆವು. ಅದನ್ನು ಹೇಳುವೆನು ಕೇಳು. ಪೂತ್ವದಲ್ಲಿ ವರಪ್ರದನಾದ ಬಬ್ಬ ಮಹಾತ್ಮನು ನಿನ್ನ ತಂದೆಗೆ ಸರೊತ್ತ ಮವಾದ ಒಂದು ವರವನ್ನು ಕೊಟ್ಟಿದ್ದನು. ಆ ವರದಿಂದ ನಿನ್ನ ತಂದೆಗೆ ಲೋಕದ ಜೀವಜಂತುಗಳಾಡಿಕೊಳ್ಳತಕ್ಕ ಮಾತುಗಳೆಲ್ಲವನ್ನೂ ಗ್ರಹಿಸತಕ್ಕ ಶಕ್ತಿಯುಂಟಾಗಿತ್ತು. ಇದರ ಬಲದಿಂದ ತಿರಂತುಗಳು ನುಡಿಯುತಿದ ಮಾತುಗಳೆಲ್ಲವನ್ನೂ ನಿನ್ನ ತಂದೆಯು ತಿಳಿದುಕೊಳ್ಳುತಿದ್ದನು. ಹೀಗಿರಲಿ ಒಂದಾನೊಂದು ಕಾಲದಲ್ಲಿ, ಮಹಾತೇಜಸ್ವಿಯಾದ ನಿನ್ನ ತಂದೆಯು ಮಲಗಿ ರುವಾಗ, ಆತನ ಹಾಸಿಗೆಯಕೆಳಗೆ ಬೃಂಭಗಳೆಂಬ ಒಂದುಜಾತಿಯ ಇರುವೆಗೆ ಳು ಮಾತಾಡುತ್ತಿದ್ದುವು. ಅದನ್ನು ಕೇಳಿ, ಅದರ ಭಾವವನ್ನು ತಿಳಿದ ನಿನ್ನ ತಂದೆ

  • ಈ ವಾಕ್ಯದಿಂದ 'ಸುಮಂತ್ರನು ದಶರಥನನ್ನೇ ಗೂಢವಾಗಿ ನಿಂದಿಸಿದುದಾಗಿ ತಿಳಿಯಬೇಕು.ರಾಮನನ್ನು ಉಡಿಗೆ ಕಳುಹಿಸಿ, ಕೈಕೇಯಿಯ ಅಭಿಮತವನ್ನು ಈ ಢಿಸಿಕೊಡುವುದರಿಂದ ಮತ್ತಷ್ಟು ಕಷ್ಟವೇಹೊರತು ಕ್ಷೇಮವಿಲ್ಲವೆಂದು ಗೂಢಾರವು