ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೨ ಸರ್ಗ ೭೫ ] ಅಯೋಧ್ಯಾಕಾಂಡವು. ಪಟ್ಟಾಭಿಷೇಕಕ್ಕಾಗಿ ಅನುಮತಿಸು! ಈಗ ರಾಮನ ವನವಾಸವನ್ನು ಕುರಿತು ಬಹಳ ದುಖಿತರಾಗಿರುವ ಪ್ರಜೆಗಳೆಲ್ಲರನ್ನೂ ನೀನೇ ರಕ್ಷಿಸಿದಂತಾಗುವುದು. ಪಾಪಬುದ್ಧಿಯುಳ್ಳ ಯಾರೋ ನಿನಗೆ ಈ ದುರ್ಬೋಧನೆಯನ್ನು ಮಾಡಿರು ವಹಾಗಿದೆ!ಆ ಕಿರುಕುಳಗಳನ್ನು ಕೇಳಿಕೊಂಡು, ದೇವೇಂದ್ರನಂತೆ ಪ್ರಕಾಶಿಸು ತಿರುವ ಲೋಕನಾಥನಾದ ನಿನ್ನ ಪತಿಯನ್ನು ಕೆಟ್ಟದಾರಿಗೆಳೆಯಬೇಡ! ಹಿ ರಿಯಮಗನಿರುವಾಗ ಕಿರಿಯನಿಗೆ ಪಟ್ಟವನ್ನು ಕಟ್ಟಿದನೆಂಬ ಅಪವಾದವನ್ನು ಆತನಮೇಲೆ ಹೊರಿಸಬೇಡ! ಶ್ರೀಮಂತನಾದ ಈ ದಶರಥನು ಎಂದಿಗೂ ಪಾಪಕಾಧ್ಯಕ್ಕೆ ಪ್ರವರ್ತಿಸತಕ್ಕವನಲ್ಲ. ನಿನಗೆ ತಾನುಕೊಟ್ಟ * ಪ್ರತಿಜ್ಞೆಯ ನ್ಯೂ ಎಂದಿಗೂ ತಪ್ಪಿಸಲಾರನು. ಬೇರೆ ಯಾವವಿಧದಲ್ಲಿಯಾದರೂ ನಿನಗೆ ಆ ವರಗಳನ್ನು ಕೊಟ್ಟುಬಿಡುವನು. ರಾಮನು ಈತನಿಗೆ ಜೈಷಪುತ್ರನೆಂಬು ದುಮಾತ್ರವೇ ಅಲ್ಲದೆ, ಬಹಳ ಉದಾರಸ್ವಭಾವವುಳ್ಳವನು, ಕರನಿಷ್ಠನು. ತನ್ನ ರಾಜಧವನ್ನು ಚೆನ್ನಾಗಿ ಕಾಪಾಡಿಕೊಳ್ಳತಕ್ಕವನು.ಸಮಸ್ತಪ್ರಾಣಿ ಗಳನ್ನೂ ಕ್ಷೇಮದಿಂದ ಪೋಷಿಸತಕ್ಕವನು. ಮಹಾಬಲಾಡ್ಯನು. ರಾಜ್ಯನಿ ರ್ವಹಣಕ್ಕೆ ಬೇಕಾದ ಸಮಸ್ತಗುಣಗಳೂ ಆತನಲ್ಲಿ ತುಂಬಿರುವುವು. ಆದು ದರಿಂದ ಆತನಿಗೇ ಪಟ್ಟಾಭಿಷೇಕವು ನಡೆಯಲಿ! ಈಗ ನೀನು ಇದನ್ನು ತಪ್ಪಿಸಿ, ರಾಮನನ್ನು ಕಾಡಿಗೆ ಕಳುಹಿಸುವುದಾದರೆ, ಲೋಕದಲ್ಲಿ ದೊಡ್ಡ ಅಪವಾ ದಕ್ಕೆ ಗುರಿಯಾಗುವೆ. ರಾಮನೇ ರಾಜ್ಯವನ್ನಾಳುತ್ತಿರಲಿ! ಅದಕ್ಕಾಗಿ ನೀನು ಕಳವಳಿಸಬೇಡ ! ರಾಮನು ಕಾಡಿಗೆ ಹೋದರೆ ಈ ರಾಜ್ಯವನ್ನು ನಿರ್ವ ಹಿಸುವುದಕ್ಕೆ ಆತನಷ್ಟು ಸಮರ್ಥರಾದವರು ಬೇರೊಬ್ಬರೂ ಆಯೋಧ್ಯೆ ಯಲ್ಲಿಲ್ಲ. ರಾಮನು ಯೌವರಾಜ್ಯಕ್ಕೆ ಬಂದಮೇಲೆ, ಮಹಾಧನುರ್ಧರನಾ ದ ಈ ದಶರಥನು, ತನ್ನ ವಂಶದಲ್ಲಿ ಹಿರಿಯರು ನಡೆಸಿದ ಮಾರ್ಗವನ್ನನುಸ ರಿಸಿ ವಾನಪ್ರಸ್ಥಾಶ್ರಮವನ್ನು ಕೈಕೊಂಡು ವರ್ತಿಸಬಹುದು. ಇದೇ ರಾಜ

  • ಇಲ್ಲಿ 'ನಹಿ ಮಿಥ್ಯಾ ಪ್ರತಿಜ್ಞಾತಂ ಕರಿಷ್ಯತಿ ತವಾನp:” ಎಂದು ಮೂ ಲವು ದಶರಥನು ಕೇವಲವಿನೋದಾರವಾಗಿ ನಿನಗೆ ಪ್ರತಿಜ್ಞೆ ಮಾಡಿಕೊಟ್ಟಿರುವನೇ ಹೊರತು ನಿಜವಾದ ಅಭಿಪ್ರಾಯದಿಂದಲ್ಲ. ಆದುದರಿಂದ ಅದನ್ನು ನೆರೆವೇರಿಸಿಕೊಡಲಾ ರನು, ಎಂದು ಮಹೇಶ್ವರತೀರವ್ಯಾಖ್ಯಾನವು.