ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮ ಶ್ರೀಮದ್ರಾಮಾಯಕನ .[ಸರ್ಗ, ೩೬, ಧರ್ಮವು! ಎಂದನು.” ಹೀಗೆ ನಯಭಯಗಳನ್ನು ತೋರ್ಪ್ಪಡಿಸುವ ಮಾತು ಗಳಿಂದ ಆ ರಾಜಸಭೆಯಲ್ಲಿ ಕೈಕೇಯಿಗೆ ತಕ್ಕ ಬುದ್ಧಿವಾದಗಳನ್ನು ಹೇಳಿ, ಪ ನಃಪುನಃ ಕೈಮುಗಿದು ಪ್ರಾಕ್ಟಿಸುತಿದ್ದನು. ಎಷ್ಟು ಹೇಳಿದರೇನು ? ಆಕೆಯ ಮನಸ್ಸು ಕದಲಲಿಲ್ಲ. ಆಕೆಯ ಹೃದಯದಲ್ಲಿ ಸ್ವಲ್ಪವಾದರೂ ಮರುಕವುಂ ವಾಗಲಿಲ್ಲ. ಆಕೆಯ ಮುಖದಲ್ಲಿರತಕ್ಕ ಕಾಧ್ಯವೂ ಸ್ವಲ್ಪವಾದರೂ ತಗ್ಗ ಲಿಲ್ಲ. ಇಲ್ಲಿಗೆ ಮೂವತ್ತೈದನೆಯಸರ್ಗವು. (ದಶರಥನು ರಾಮನೊಡನೆ ಚತುರಂಗಸೈನ್ಯಗಳ) ನ್ಯೂ ಕೊಟ್ಟು ಕಳಹಿಸುವುದಕ್ಕೆ ಪ್ರಯತ್ನಿಸಲು, ಡಿ ಕೈಕೇಯಿಯು ಅಡ್ಡಿ ಮಾಡಿದುದು. ಸಿದ್ಧಾರನು ( ಕೈಕೇಯಿಗೆ ಬುದ್ದಿವಾದಗಳನ್ನು ಹೇಳಿದುದು ) ಹೀಗೆ ಯಾರೇನುಹೇಳಿದರೂ ಕೈಕೇಯಿಯು ರಾಮನನ್ನು ಇಲ್ಲಿರಿಸುವು ದಕ್ಕೆ ಸಮ್ಮತಿಸದಿರುವುದನ್ನು ನೋಡಿ ದಶರಥನು, ತಾನು ಆಕೆಯಲ್ಲಿ ಮಾ ಶಿಗೆ ಸಿಕ್ಕಿಬಿದ್ದಿರುವುದರಿಂದ ಹಿಂದುಮುಂದುತೋರದೆ ಸಂಕಟಪಡುತ್ತ, ಸುಮಂತ್ರನನ್ನು ನೋಡಿ ಕಣ್ಣೀರುತುಂಬಿಕೊಂಡು, ದುಃಖದಿಂದ ಆಗಾಗ ನಿಟ್ಟುಸಿರು ಬಿಡುತ್ತ “ಎಲೈ ಸೂತನೆ: ಈಗ ನಾನು ರಾಮನನ್ನು ಕಾಡಿಗೆ ಕಳುಹಿಸದೆ ವಿಧಿಯಿಲ್ಲ. ಆದುದರಿಂದ ಈತನನ್ನು ಕಾಡಿನಲ್ಲಿ ಹಿಂಬಾಲಿಸಿಹೋ ಗುವುದಕ್ಕಾಗಿ ನಮ್ಮ ಚತುರಂಗಸೈನ್ಯಗಳನ್ನಾದರೂ ಸಿದ್ಧ ಪಡಿಸು.ಆಸೈನ್ಯ ಗಳೊಡನೆ ಅನೇಕರತ್ನಗಳನ್ನೂ , ಬೇಕಾದ ಪದಾರ್ಥಗಳನ್ನೂ ಸಿದ್ಧಪಡಿಸಿ ಡು! ಸಾವಕಾಶಮಾಡಬೇಡ!ಆತನ ವಿನೋದಾರ್ಥವಾಗಿ, ಮಾತಾಡುವುದರ ಲ್ಲಿಯೂಹಾಡುವುದರಲ್ಲಿಯೂ ಚತುರರಾದ ವೇಶ್ಯಾಸಿಯರನ್ನೂ, ಸೇನಾ ಸಮೇತನಾದ ಆ ರಾಮನಿಗೆ ಬೇಕಾದ ಪದಾರ್ಥಗಳನ್ನು ಆಗಾಗಲೇ ಒದಗಿಸಿ ಕೊಡುವುದಕ್ಕಾಗಿ ಧನಿಕರಾದ ವರಕರನ್ನೂ ಕಳುಹಿಸಿ ಕೊಡಬೇಕು. ಮತ್ತು ಇದುವರೆಗೆ ಇಲ್ಲಿ ಆತನನ್ನಾಶ್ರಯಿಸಿಕೊಂಡು ಜೀವಿಸುತ್ತಿದ್ದ ಅವನ ಅನುಚರ ರೂ,ಧನುರ್ವಿದ್ಯೆ ಮೊದಲಾದ ವೀರಕಾರಗಳಲ್ಲಿ ಆತನೊಡನೆ ಕಲೆತುವಿಹರಿ ಸುತಿದ್ದ ಆತನ ಪ್ರಿಯಮಿತ್ರರೂ, ಅವನೊಡನೆ ಹೋಗಿಬರಲಿ! ಅವರೆಲ್ಲರಿ ಗೂ ಸಮೃದ್ಧವಾಗಿ ಸುವರ್ಣರಜತವಾದಿಗಳನ್ನು ಕೊಟ್ಟು ಸಂತೋಷ