ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೮೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೫೨ ಸರ್ಗ, ೩೩.] ಅಯೋಧ್ಯಾಕಾಂಡವು. ಪಡಿಸಿ ಹೋಗಿಬರುವಂತೆಹೇಳು.ಉತ್ತಮವಾದ ಆಯುಧಧಾರಿಗಳೂ,ಪ್ರಮು ಖರಾದ ಪಟ್ಟಣವಾಸಿಗಳೂ, ಪದಾರ್ಥಸಮೃದ್ಧಿಯುಳ್ಳ ಬಂಡಿಗಳೂ, ಕಾಡಿ ನಲ್ಲಿ ಸುತ್ತಿ ಬಳಿಕೆಯುಳ್ಳ ಬೇಡರೂ, ಆತನ ಸಹಾಯಾರ್ಥವಾಗಿ ಹೋಗಿ ಬರಲಿ! ಹೀಗೆ ನಾವು ರಾಮನಿಗೆ ಸಮಸ್ತಸಹಾಯಸಂಪತ್ತುಗಳನ್ನೂ ಒದ ಗಿಸಿ ಕೊಟ್ಟರೆ, ಆತನು ಈ ರಾಜ್ಯದಲ್ಲಿದ್ದಂತೆಯೇ ಕಾಡಿನಲ್ಲಿಯೂ ಸುಖದಿಂದಿ ರಬಹುದು.ಆಗ ಆತನಿಗೆ ವನವಾಸಶ್ರಮವೇ ತೋರಲಾರದು. ಅಲ್ಲಲ್ಲಿ ಮೃಗ ಗಳನ್ನೂ , ಕಾಡಾನೆಗಳನ್ನೂ ಕೊಲ್ಲುತ್ತ, ಅಲ್ಲಲ್ಲಿ ಸಿಕ್ಕುವ ಜೇನನ್ನು ಕುಡಿಯು ತ್ಯ,ವಿಚಿತ್ರಗಳಾದ ನದಿಗಳನ್ನು ನೋಡುತ್ತ ವಿನೋದದಿಂದಿದ್ದು ಬಿಡುವನು. ಆಗ ಆತನ ಮನಸ್ಸಿಗೆ ಈ ರಾಜ್ಯವು ತಪ್ಪಿಹೋಯಿತೆಂಬ ಸ್ಮರಣೆಯೂಬಾರ ದು. ರಾಮನು ಇನ್ನು ಬಹುದಿವಸಗಳವರೆಗೆ ನಿರ್ಜನವಾದ ವನಪ್ರದೇಶದಲ್ಲಿ ವಾಸ ಮಾಡಬೇಕಾಗಿರುವುದರಿಂದ, ಆತನಿಗೆ ಕಾಲಕಾಲಕ್ಕೆ ಸರಿಯಾಗಿ ಧನ ಧಾನ್ಯಗಳು ಸಿಕ್ಕುವುದೇ ಕಷ್ಟವಾಗುವುದು. ಆದುದರಿಂದ ನಮ್ಮಲ್ಲಿ ಧಾ ನ್ಯದ ಕಣಜಗಳು ಏಷ್ಟುಂಟೋ, ನಮ್ಮಲ್ಲಿರುವ ಬೊಕ್ಕಸಗಳು ಯಾವುವು ಟೋ, ಅವೆಲ್ಲವನ್ನೂ ಆತನೊಡನೆಯೇ ಕಳುಹಿಸಿಕೊಡು.ರಾಮನು ಅಲ್ಲಲ್ಲಿನ ಪ ಣ್ಯಕ್ಷೇತ್ರಗಳಲ್ಲಿ ಯಾಗಗಳನ್ನು ಮಾಡುವುದಕ್ಕೂ, ಬ್ರಾಹ್ಮಣರಿಗೆ ಯಥೋ ಕವಾಗಿ ದಕ್ಷಿಣೆಗಳನ್ನು ಕೊಡುವುದಕ್ಕೂ, ಕಾಡಿನಲ್ಲಿ ತಪಸ್ವಿಗಳೊಡನೆ ಸುಖ ವಾಗಿ ವಾಸಮಾಡುವುದಕ್ಕೂ ಅನುಕೂಲಿಸುವಂತೆ ಮಾಡು.ಹೀಗಾದರೆ ಆತ ಲಾಗಿ ರಾಮನೂ ಕಾಡಿನಲ್ಲಿ ಸುಖದಿಂದಿರಬಹುದು.ಇತ್ತಲಾಗಿ ಮಹಾಬಾಹು ವಾದ ಭರತನೂ ಅಯೋಧ್ಯೆಯನ್ನು ಪಾಲಿಸುತ್ತ ರಾಜ್ಯಸುಖವನ್ನನುಭವಿಸ ಬಹುದು. ಆದುದರಿಂದ ಶ್ರೀಮಂತನಾದ ರಾಮನನ್ನು ಸಮಸ್ಯಸಂಭಾರಗ ಳೊಡನೆಯೇ ಕಾಡಿಗೆ ಪ್ರಯಾಣಮಾಡಿಸು.” ಎಂದನು. ಈಮಾತು ಕಿವಿಗೆ ಬಿದ್ದೊಡನೆ ಕೈಕೇಯಿಯ ಮುಖವು ಕಂಡಿತು. ಆಕೆಗೆ ಮನಸ್ಸಿನಲ್ಲಿ ಮಹಾ ಭಯವುಂಟಾಯಿತು. ಆಕೆಯ ಸ್ವರವೂ ಅಡಗಿಹೋಯಿತು. ಹೀಗೆ ಮಿತಿಮೀ ರಿದ ಭಯದಿಂದಲೂ, ಸಂಕಟದಿಂದಲೂ ಬಣ್ಣಗುಂದಿದ ಮುಖವುಳ್ಳವ ಳಾಗಿ ಆಕೆಯು, ಥಟ್ಟನೆ ರಾಜಸಿಗಿರಿರಾಗಿ ಬಂದು ನಿಂತು, ( ಎಲೆರಾಜನೆ ! ಓಹೋ?ಇದೊಂಪಾಯವನ್ನೆತ್ತಿದೆಯಾ? ಮೇಲಿನ ಹೆಪ್ಪನ್ನು ತೆಗೆದಿಟ್ಟು ಕೊಂಡು,ರುಚಿಯಿಲ್ಲದ ನಿಸ್ಸಾರವಾದ ಮದ್ಯವನ್ನು ಇತರರಿಗೆ ಕೊಡುವಂತೆ 34