ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದ್ರಾಮಾಯಣವು [ಸರ್ಗ, ೩೩, ಈ ದೇಶವೆಲ್ಲವನ್ನೂ ನಿರ್ಜನವಾಗುವಂತೆ ಮಾಡಿ, ಹಾಳುಬಿದ್ದ ರಾಜ್ಯವನ್ನು ಭರತನವಶಕ್ಕೆ ಕೊಡಬೇಕೆಂದಿರುವಹಾಗಿದೆ ! ಹಾಗೆ ಯಾರಿಗೂ ಬೇಡದ ಶೂನ್ಯವಾದ ರಾಜ್ಯವನ್ನು ನನ್ನ ಮಗನು ಎಂದಿಗೂ ಒಪ್ಪ ವವನಲ್ಲ. ನಿನ್ನ ಹಾಳುರಾಜ್ಯವನ್ನು ನೀನೇ ಅನುಭವಿಸು!” ಎಂದಳು. ಹೀಗೆ ನಾಚಿಕೆಯಿಲ್ಲದೆ ಇದಿರಾಗಿ ನಿಂತು ಅತಿಕ್ರೂರವಾಕ್ಯಗಳನ್ನು ಹೇಳುತ್ತಿರುವ ಆ ಕೈಕೇಯಿಯ ನ್ನು ನೋಡಿ, ಪುನಃ ದಶರಥನು, ಎಲೆ ಕೇಡಾಳಿ ! ನಿನಗೆ ಈ ವಿಪ ರೀತಬುದ್ಧಿಯೂ ಹುಟ್ಟಿತೆ? ಸಣ್ಣ ಕರುವಿನಮೇಲೆ ಹೊರಬಾರದಷ್ಟು ಹೊರೆಗಳನ್ನು ಹೊರಿಸಿ, ಆ ಭಾರವನ್ನೇ ತಡೆಯಲಾರದೆ ತಪ್ಪಳಿಸುತ್ತಿರುವ ಆ ಕರುವನ್ನು ನಾನಾವಿಧದಲ್ಲಿ ಹಿಂಸಿಸಿ ಹೊಡೆದೋಡಿಸುವಂತೆ,ನೀನು ಮೊ ದಲೇ ನನ್ನ ಮೇಲೆ ಹೊರಬಾರದ ದುಃಖಭಾರವನ್ನು ಹೊರಿಸಿ, ಮೇಲೆಮೇಲೆ ಏನೂ ಪೀಡಿಸುತಿ ರುವಯಾ! ಎಲೆದುವೆ ! ಸೀನು ಮೊದಲೇ ಈ ಮಾತು ಗಳನ್ನು ಹೇಳಿರಬಾರದೆ? ನಾನು ರಾಮನೊಡನೆ ಸೈನ್ಯಾಯಸಮಸ್ತ ಪರಿವಾ ರಗಳನ್ನೂ ಕಳುಹಿಸುವುದಕ್ಕೆ ಪ್ರಯತ್ನ ಮಾಡಿದಮೇಲೆ, ಈಗ ನೀನು ಬೇಡ ವಂದು ಹೇಳುವೆಯಾ! ಮೊದಲೂ ಹೀಗೆಯೇ ರಾಮಾಭಿಷೇಕಕ್ಕಾಗಿ ನಾನು ಸಮಸ್ತ ಸನ್ನಾಹಗಳನ್ನೂ ಸಿದ್ಧಪಡಿಸಿಟ್ಟ ಮೇಲೆ, ಅದಕ್ಕೂ ನೀನು ಅಡ್ಡವಾಗಿ ಬಂದು ನಿರೋಧಿಸಿದೆ! ಆದರೆ ಆಗ ನಾನು ನಿನಗೆ ವರಪ್ರದಾನವೆಂಬ ನೆವದಿ ದ ಸಾಲಗಾರನಾಗಿದ್ದನು! ಅದಕ್ಕಾಗಿ ಮಾತಿಗೆ ಕಟ್ಟುಬಿದ್ದು ನಿನ್ನ ಕೋರಿಕೆ ಯನ್ನು ನಡೆಸಿಕೊಡುವುದಾಗಿ ಒಪ್ಪಿದೆನು,ಅದರಂತೆಯೇ ಈಗಲೂ ನೀನುಬೇ ರೆಬೇರೆ ನೆವಗಳನ್ನು ತಂದು ನನ್ನನ್ನು ನಿರ್ಬಂಧಿಸಿದಮಾತ್ರಕ್ಕೆ ನಾನು ಕೇಳುವೆ ನೆ?ಎಂದಿಗೂ ನಿನ್ನ ಕೋರಿಕೆಯನ್ನು ನಡೆಸಲಾರೆನು. ಈಗ ನಾನು ಸಮಸಪ ರಿವಾರಗಳನೂ ರಾಮನೊಡನೆ ಕಳುಹಿಸುವು ನಿಜವು, ನಿನ್ನ ಮಾತಿನಂತೆ 'ನಡೆಯತಕ್ಕವನಲ್ಲ” ಎಂದನು. ಹೀಗೆ ದಶರಥನು ಬಹುಕೋಪದಿಂದ ಹೇಳಿದ ಮಾತನ್ನು ಕೇಳಿ, ಕೈಕೇಯಿಯು ಅವನಿಗಿಂತಲೂ ಇಮ್ಮಡಿಯಾದ ಕೋಪ ವನ್ನು ತೋರಿಸುತ್ತಾಎಲೆ ರಾಜನೆ! ಇದೇನು ಹೀಗೆ ಹೇಳುವೆ?ನಿನ್ನ ವಂಶದ ಪೂಚಂತ್ರವನ್ನೇ ನೀನರಿಯೆಯಾ? ನಿಮ್ಮ ವಂಶಕ್ಕೆ ಹಿರಿಯನಾದ ಸಗರನು ಅಸಮಂಜನೆಂಬ ತನ್ನ ಜೇಷ್ಠ ಪುತ್ರನನ್ನು ಕಾಡಿಗೆ ಹೊರಡಿಸಿಬಿಟ್ಟುದನ್ನು ನೀನು ಕೇಳಿಲ್ಲವೇ?ಆತನೇನು ತನ್ನ ಸಮಸ್ತರಾಜ್ಯಸಂಪತ್ತುಗಳನ್ನೂ ತನ್ನ ಮಗ