ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೯೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸರ್ಗ. ೩೬] ಅಯೋಧ್ಯಾಕಾಂಡವು. se ನೊಡನೆ ಕಾಡಿಗೆ ಕಳುಹಿಸಿಕೊಟ್ಟನೆ? ಕಾಡಿಗೆ ಕಳುಹಿಸುವುದೆಂದರೆ ಸಮಸ್ತ ಸಂಪತ್ತುಗಳನ್ನೂ ಕೊಟ್ಟು ಕಳುಹಿಸಬೇಕೆಂಬುದಲ್ಲ ! ಜನಸಹಾಯ ಧನಸ ಹಾಯಗಳೊಂದೂ ಇಲ್ಲದೆ ದೇಶಭ್ರಷ್ಟನನ್ನಾಗಿ ಮಾಡಬೇಕೆಂಬುದೇ ವನ ವಾಸವು. ಆದುದರಿಂದ ರಾಮನು ನಿರ್ಧನನಾಗಿಯೇ ಕಾಡಿಗೆ ಹೋಗ ಬೇಕು.” ಎಂದಳು. ಇದನ್ನು ಕೇಳಿ ದಶರಥನು ಕೋಪವನ್ನೂ, ಸಂಕಟ ನನ್ನೂ ತಡೆಯಲಾರದೆ, ಯಾವುದೊಂದು ಪ್ರತ್ಯುತ್ತರವನ್ನೂ ನುಡಿಯು ಲಾರದೆ ಛೇ! ಪಾಪಿನಿಯೆ” ಎಂದು ಬಯ್ದು ಸುಮ್ಮನಾದನು. ಅಲ್ಲಿದ್ದ ಜನ ರೆಲ್ಲರೂ ನಾಚಿಕೆಯಿಂದ ತಲೆಯನ್ನು ತಗ್ಗಿಸಿಕೊಂಡು ಮೌನದಿಂದಿದ್ದರು. ಕೈಕೇಯಿಯಾದರೆ ಇದೊಂದನ್ನೂ ಲಕಮಾಡದೆ ನಿರ್ಭಯಳಾಗಿ ನಿಂ ತಿದ್ದಳು. ಇವೆಲ್ಲವನ್ನೂ ನೋಡುತ್ತಿದ್ದ ಸಿದ್ದಾರ್ಥನೆಂಬ ಹೆಸರುಳ್ಳ ಶುದ್ಧಾತ್ರ ನಾದ ವೃದ್ಧಮಂತ್ರಿಯೊಬ್ಬನು, ಬಹುಕೋಪಗೊಂಡು, ಆ ಕೈಕೇಯಿಯನ್ನು ಕುರಿತು ಈ ಎಲೆ ಕೈಕೇಯಿ! ಬಹಳ ಚೆನ್ನಾಯಿತು ! ಒಳ್ಳನಿದರ್ಶನವನ್ನು ಹೇಳಿದೆ ! ಲೋಕೋತ್ತರಗುಣವುಳ್ಳ ಈ ರಾಮನಿಗೆ ಮಹಾದುಷ್ಟನಾದ ಆ ಅಸಮಂಜನನ್ನು ಸರಿಗಟ್ಟುವೆಯಾ? ಆ ಅಸಮಂಜನು ಬೀದಿಬೀದಿಗಳಲ್ಲಿ ಆಡು ತಿದ್ದ ಮಕ್ಕಳನ್ನು ಎತ್ತಿಕೊಂಡುಹೋಗಿ ಸರಯೂನದಿಯಲ್ಲಿ ಹಾಕಿ ವಿನೋಹಿಸುತಿದ್ದನಲ್ಲವೆ? ಹೀಗೆ ಶಿಶುಹೂತುಕನಾದ ಆತನ ದೌಷ್ಯವನ್ನು ತಡೆಯ ಲಾರದೆ, ಪಟ್ಟಣವಾಸಿಗಳೆಲ್ಲರೂ ಒಟ್ಟುಗೂಡಿ, ಬಹುಕೋಪದಿಂದ ಸಗ ರನ ಬಳಿಗೆ ಬಂದು ಆತನನ್ನು ಕುರಿತು ಎಲೆ ರಾಜನೆ ? ನಿನ್ನ ಮಗನ ಬಾಥೆ ಯನ್ನು ನಾವು ತಡೆಯಲಾರೆವು. ಅವನೊಬ್ಬನನ್ನೇ ನೀನು ನಿನ್ನ ರಾಷ್ಟ್ರದಲ್ಲಿ ರಿಸಿಕೊಂಡು ನಮ್ಮೆಲ್ಲರನ್ನೂ ತೊರೆದುಬಿಡು! ಅಥವಾ ನಮ್ಮನ್ನು ಕ್ಷೇಮದಿಂ ದ ರಕ್ಷಿಸಬೇಕೆಂಬ ಆಸೆಯು ನಿನಗಿದ್ದರೆ, ನಿನ್ನ ಮಗನನ್ನು ಈಗಲೇ ಈ ದೇ ಶದಿಂದ ಹೊರಡಿಸು. ಹೀಗಿಲ್ಲದಿದ್ದರೆ ನಮಗೆ ಉಳಿಗಾಲವೇ ಇಲ್ಲ” ಎಂದರು. ಆಗ ಸಗರನು ಅವರ ಭಯಕ್ಕೆ ಕಾರಣವನ್ನು ವಿಚಾರಿಸಲು, ಅವರೆಲ್ಲರೂ ಕೂಡಿ, ರಾಜನನ್ನು ಕುರಿತು ಎಲೈ ರಾಜನೆ! ನಿನ್ನ ಮಗನಿಗೆ ಹುಚ್ಚು ಹಿಡಿದಿರು ವಂತಿದೆ ! ಬೀದಿಬೀದಿಗಳಲ್ಲಿ ಆಡುತ್ತಿರುವ ಮಕ್ಕಳನ್ನು ಹೊಳೆಯಲ್ಲಿ ಹಾಕಿ ವಿ ನೋದನೋಡುತ್ತಿರುವನು”ಎಂದರು.ಇದನ್ನು ಕೇಳಿ ರಾಜನು ಆ ಪ್ರಜೆಗಳ ಹಿ ತಕ್ಕಾಗಿ ದುಷ್ಟನಾದ ತನ್ನ ಮಗನನ್ನು ಕಾಡಿಗೆ ಕಳುಹಿಸಿದನು. ಆಗಲಾ