ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೯೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಶ್ರೀಮದ್ರಾಮಾಯಕನ (ಸರ್ಗ, ೩d, ದರೂ ಸಗರನು ತನ್ನ ಮಗನನ್ನು ಏಕಾಕಿಯನ್ನಾಗಿ ಮಾಡಿ ಕಳುಹಿಸಲಿಲ್ಲ, ಆತನಿಗೆ ವಾಹನಾದಿಗಳನ್ನು ಕೊಟ್ಟೆ ಕಳುಹಿಸಿದನು. ಮತ್ತು ಅವನ ಹೆಂಡ ತಿಯನ್ನೂ , ಪರಿಜನರನ್ನೂ, ಇನ್ನೂ ಕೆಲವು ಸಾಮಗ್ರಿಗಳನ್ನೂ ಅವನೊಡ ನ ಕಳುಹಿಸಿಕೊಟ್ಟು, ಯಾವಜೀವವೂ ಆತನನ್ನು ಪಟ್ಟಣಕ್ಕೆ ಬರಗೊಳಿ ಸದೆ ಕಾಡಿನಲ್ಲಿಯೇ ಇರುವಂತೆ ನಿಯಮಿಸಿ ಕಳುಹಿಸಿದನು. ಆ ಅಸಮಂಜ ನಾದರೋ ಕೈಯಲ್ಲಿ ಗುದ್ದಲಿಯನ್ನೂ ,ಪಟ್ಟಿಯನ್ನೂ ಹಿಡಿದು, ಪಾಪಾತ್ಮ ನಂತೆ ದಿಕ್ಕುಗೆಟ್ಟು ತಿರುಗುತ್ತಾ, ಗಿರಿದುರ್ಗಗಳಲ್ಲಿ ಗಡ್ಡೆಗೆಣಸುಗಳನ್ನು ಅಗೆ ದು ತಿಂದು ಕಾಲವನ್ನು ಕಳೆಯುತ್ತಿದ್ದನು. ಎಲೆ ಕೈಕೇಯಿ! ಧಾರಿ ಕನಾದ ಸಗ ರನು ಪ್ರಜೆಗಳ ಕ್ಷೇಮಕ್ಕಾಗಿಯೇ ದುಷ್ಟನಾದ ತನ್ನ ಮಗನನ್ನು ಕಾಡಿಗೆ ಹೊ ರಡಿಸಿದನೇಹೊರತು ಬೇರೆಯಲ್ಲ. ಈಗ ರಾಮನು ಮಾಡಿರುವ ಅಂತಹ ಪಾಪ ಕೃತ್ಯವೇನು ? ಈತನಲ್ಲಿ ನಾವು ಒಂದುದುರ್ಗಣವನ್ನಾದರೂ ಕಾಣೆವು. ಚಂದ್ರನಲ್ಲಿಯಾದರೂ ಸ್ವಲ್ಪಕಳಂಕವುಂಟು. ಸ್ವಲ್ಪವಾದರೂ ದೋಷ ವಿಲ್ಲದೆ, ನಿಷ್ಕಳಂಕನಾದ ಚಂದ್ರನಂತೆ ಲೋಕಾನಂದಕರನಾದ ರಾಮ ನಲ್ಲಿ ಯಾವ ತಪ್ಪನ್ನಾ ರೋಪಿಸಬಹುದು ? ಅಥವಾ ನಿನಗೆ ಅವನಲ್ಲಿ ಯಾ ವುದಾದರೂ ದೋಷವು ಕಂಡುಬಂದಿದ್ದರೆ ಅದನ್ನಾದರೂ ತಿಳಿಸು, ಅದ ನ್ನೇ ಒಂದುವ್ಯಾಜವನ್ನಾಗಿಟ್ಟುಕೊಂಡು ಈಕ್ಷಣವೇ ಅವನನ್ನು ಹೊರ ಡಿಸಿಬಿಡಬಹುದು ! ನಿರ್ದುಷ್ಯನಾಗಿ ಸನ್ಮಾರ್ಗದಲ್ಲಿಯೇ ನಿರತನಾಗಿರು ವವನನ್ನು ನಿಷ್ಕಾರಣವಾಗಿ ತೊರೆದುಬಿಡುವುದು ಧಮ್ಮ ವಿರುದ್ಧವು. ಹೀಗೆ ಅಧರಕ್ಕೆ ಪ್ರವರ್ತಿಸಿದರೆ, ದೇವೇಂದ್ರನಿಗಾದರೂ ತೇಜೋಹಾನಿಯುಂ ಕಾಗದಿರದು ! ಆದುದರಿಂದ, ಎಲೆ ದೇವಿ ! ರಾಮನ ವಿಷಯದಲ್ಲಿರುವ ಮಾ ತೃತ್ಯವನ್ನು ಇಷ್ಟಕ್ಕೇ ಬಿಟ್ಟುಬಿಡು ! ಆತನ ಶ್ರೇಯಸ್ಸಿಗೆ ವಿಫುತವನ್ನು ತರುವ ಪ್ರಯತ್ನವು ಧರವಲ್ಲ. ಅಥವಾ ಧರಾಧರ ವಿಚಾರವೂ ಹಾಗಿ ರಲಿ ! ನೀನು ಲೋಕಾಪವಾದಕ್ಕಾದರೂ ಅಂಜಬೇಡವೆ ? ” ಎಂದನು. ಸಿದ್ಧಾರನು ಹೇಳುತ್ತಿದ್ದ ಈ ಮಾತನ್ನು ಕೇಳಿ ದಶರಥನು, ದುಃಖದಿಂದ ಕ ಟ್ವಿಯಾಗಿ ಮಾತನ್ನೂ ಆಡಲಾರದೆ, ಬಹಳ ಕುಗ್ಗಿದ ಸ್ವರದಿಂದ, ಕೈಕೇಯಿ ಯನ್ನು ಕುರಿತು, ಎಲೆ ಪಾಪಿನಿ ! ಈಗಲೂ ನಿನಗೆ ಬುದ್ದಿ ಹುಟ್ಟಲಿಲ್ಲವೆ ? ಈತನ ಅಮೋಘುವಾದ ಬುದ್ಧಿವಾದವನ್ನು ಕೇಳಿಯೂ ನಿನಗೆ ಮನಸ್ಸು