ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೯೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


4. ಸರ್ಗ, ೩೭] . ಅಯೋಧ್ಯಾಕಾಂಡವು. ಕರಗಲಿಲ್ಲವೆ? ನನ್ನನ್ನು ಕೆಡಿಸುವುದಲ್ಲದೆ ನಿನ್ನ ಶ್ರೇಯಸ್ಸನ್ನೂ ನೀನು ಕೆಡಿಸಿ ಕೊಳ್ಳತ್ತಿರುವೆಯಲ್ಲಾ ! ಕುಶ್ಚಿತವಾದ ಮಾರ್ಗಕ್ಕೆ ಪ್ರವರ್ತಿಸಿ ಹೀಗೇ ಕೆ ಕುಚೇಷ್ಟೆಯನ್ನಾರಂಭಿಸಿರುವೆ ? ಈ ನಿನ್ನ ವ್ಯಾಪಾರವು ಸಾಧುಗಳಿಗೆ ಸ ಮೃತವಾದುದಲ್ಲವೇ ಅಲ್ಲ. ನೀನು ನಿನ್ನ ಹಟವನ್ನು ಬಿಡದಿರುವುದೇ ನಿಜವಾದ ರೆ, ನಾನೂ ರಾಮನೊಡನೆಯೇ ಕಾಡಿಗೆ ಹೊರಟುಹೋಗುವೆನು ! ನನಗೆ 2 ನ್ನು ಮೇಲೆ ಈ ರಾಜ್ಯವೂಬೇಡ! ಈ ಹಣವೂ ಬೇಡ! ಈ ಸುಖವೂ ಬೇಡ!ನೀನೇ ಭರತನಿಗೆ ರಾಜ್ಯವನ್ನು ಕೊಟ್ಟು, ಅವನೊಡನೆ ಸ್ಟೇಚ್ಛೆಯಾಗಿ ರಾಜ್ಯಸುಖಗ ಳನ್ನನುಭವಿಸುತ್ತಿರು', ಎಂದನು. ಇಲ್ಲಿಗೆ ಮೂವತ್ತಾರನೆಯಸರ್ಗವು. ( ರಾಮಲಕ್ಷಣರೂ, ಸೀತೆಯ, ಕೈಕೇಯಿಯು ತರಿ ) + 3 ಸಿಕೊಟ್ಟ ನಾರುಬಟ್ಟೆಗಳನ್ನು ಧರಿಸಿದುದು ವಸಿ + * ( ಷ ನು ಕೈಕೇಯಿಯನ್ನು ನಿಂದಿಸಿದುದು.) ಸಿಬ್ಬಾರನು ಹೇಳುತಿದ್ಯ ಮಾತುಗಳನ್ನು ರಾಮನೂ ಕೇಳುತಿದನು. ದಶರಥನು ಕೈಕೇಯಿಗೆ ಹೇಳಿದ ವಾಕ್ಯಗಳನ್ನೂ ಕೇಳಿದನು. ಆಗ ವಿನಯ ದಿಂದ ದಶರಥನನ್ನು ನೋಡಿ, 'ಎಲೈ ಮಹಾರಾಜನೆ: ಈಗ ನಾನು ಸಮಸ್ತ ಭೋಗಗಳನ್ನೂ ಬಿಟ್ಟು ಕಾಡಿಗೆ ಹೋಗುತ್ತಿರುವೆನು. ಇನ್ನು ಮೇಲೆ ಅಲ್ಲಿಗಡ್ಡೆ ಗೆಣಸುಗಳನ್ನು ಅಗೆದು ತಿಂದು ಜೀವಿಸತಕ್ಕವನು. ಸರಸಂಗಪರಿತ್ಯಾಗವನ್ನು ಮಾಡಿ ವಿರಕ್ಕನಂತೆ ಕಾಲವನ್ನು ಕಳೆಯಬೇಕಾದ ನನಗೆ ಈ ಪರಿವಾರಗಳಿಂ ದೇನು? ಉತ್ತಮವಾದ ಆನೆಯನ್ನು ಪರರಿಗೆ ಕೊಟ್ಟು, ಅದರ ಹಗ್ಗಕ್ಕೆ ಹೊಕ ದಾಡುವರಂನನಗೆ ಇನ್ನು ಪರಿಜನರಿಂದಲೂ, ಸೇನೆಗಳಿಂದಲೂ ಪ್ರಯೋಜ ನವೇನು? ನೀನು ನನಗೆ ಕೊಡಬೇಕೆಂದಿರುವುದೆಲ್ಲವನ್ನೂ ಭರತನಿಗೇ ಕೊಡು ! ನನಗೆ ಈಗ ಮುಖ್ಯವಾಗಿ ಬೇಕಾದ ಪದಾರವು ನಾರುಮಡಿಯೊಂದೇ ಹೊರ ತು ಬೇರೊಂದೂ ಇಲ್ಲವು. ಅವುಗಳನ್ನು ತರಿಸಿಕೊಟ್ಟರೆ ಸಾಕು!ಒಂದೊಂದು ವೇಳೆ ಗಡ್ಡೆಗೆಣಸುಗಳನ್ನ ಗೆಯುವುದಕ್ಕಾಗಿ ಒಂದುಗುದಲಿಯೂ, ಅವುಗ. ಇನ್ನು ತುಂಬಿಡುವುದಕ್ಕಾಗಿ ಒಂದು ಪಟ್ಟಿಯೂ ಬೇಕಾಗಿಬರುವುದು, ಅವು ಗಳೆರಡನ್ನೂ ಕೊಡುವುದಾದರೆ, ನನಗೆ ಬೇಕಾದುದೆಲ್ಲವನ್ನೂ ಕೊಟ್ಟಂತೆಯೇ ಆಗುವುದು. ಅವುಗಳನ್ನು ಮಾತ್ರ ತರಿಸಿಕೊಡು ! ನಾನು ಇನ್ನು ಹದಿನಾಲ್ಕು ವರ್ಷಗಳವರೆಗೆ ಕಾಡಿನಲ್ಲಿರಬೇಕಾದುದರಿಂದ, ಈ ಸಾಮಗ್ರಿಗಳುಮಾತ್ರ ನ