ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇy. ಶ್ರೀಮದ್ರಾಮಾಯನವ [ಸರ್ಗ. 14 ಗೆ ಅವಶ್ಯಕಗಳಾಗಿರುವವು” ಎಂದನು. ಇದನ್ನು ಕೇಳುತಿದ್ದ ಕೈಕೇಯಿಯು ಬ ಹಳಸಂಭ್ರಮದಿಂದ ತಾನೇ ಹೋಗಿ ನಾರುಬಟ್ಟೆಗಳನ್ನು ತಂದು ರಾಮನ ಮುಂದಿಟ್ಟು, ಅಲ್ಲಿದ್ದವರೆಲ್ಲರೂ ಕೇಳುತ್ತಿರುವಾಗಲೇ ನಾಚಿಕೆಯಿಲ್ಲದೆ ರಾಮನನ್ನು ಕುರಿತು ರಾಮಾ ! ನಾರುಮಡಿಗಳು ಸಿದ್ಧವಾಗಿರುವುವು. ಇವುಗಳನ್ನು ಧರಿಸು"ಎಂದಳು. ಆಗ ರಾಮನು ಆಕೆಯ ಸಮೀಪದಲ್ಲಿದ್ದ ನಾ ರುಮಡಿಗಳೆರಡನ್ನೂ ತಾನಾಗಿಯೇ ಕೈಗೆ ತೆಗೆದುಕೊಂಡು, ಮೊದಲು ತಾನು ಉಟ್ಟಿದ್ದ ದುಕೂಲವನ್ನು ತೆಗೆದುಹಾಕಿ, ತಾಪಸಯೋಗ್ಯವಾದ ಆ ವಲ್ಕಲ ಗಳನ್ನು ಕಟ್ಟಿಕೊಂಡನು. ಲಕ್ಷಣನೂ ಹಾಗಯೇ ಉಟ್ಟಿದ್ದ ಬಟ್ಟೆಯನ್ನು ತೆಗೆದು ಹಾಕಿ, ತಾಪಸಯೋಗ್ಯವಾದ ಆ ಬಟ್ಟೆಗಳನ್ನು ತೆಗೆದುಕೊಂಡು ದಶ ರಧನಮುಂದೆಯೇ ಅವುಗಳನ್ನು ಕೊಂಡನು. ಕೊನೆಗೆ ಸೀತೆಯೂ ತನಗಾ ಗಿ ಕೈಕೇಯಿಯು ತಂದಿದ್ಯ ನಾರುಬಟ್ಟೆಯನ್ನು ನೋಡಿದಳು. ಈಕೆಯು ಹು ಟೈದುದುಮೊದಲು ಪಟ್ಟಿಯ ದುಕೂಲವನ್ನು ಹೊರತು, ಬೇರೆಬಟ್ಟೆಯನ್ನೇ ಉಟ್ಟವಳಲ್ಲ. ಈಗ ಆ ನಾರುಬಟ್ಟೆಗಳನ್ನು ನೋಡಿದೊಡನೆ, ಬಲೆಯನ್ನು ನೋಡಿದ ಹೆಣ್ಣು ಜಿಂಕೆಯಂತೆ ಬೆಚ್ಚಿ ಬಿದ್ದಳು. ಮನಸ್ಸಿನಲ್ಲಿ ಸಹಿಸಲಾರ ದಷ್ಟು ಸಂಕಟವುಂಟಾಯಿತು. ಹಾಗೆಯೇ ನಾಚಿಕೆಯಿಂದ ತಲೆಯನ್ನು ತಗ್ಗಿ. ಸಿಕೊಂಡಳು. ಆಕೆಯ ಎರಡುಕಣ್ಣುಗಳಲ್ಲಿಯೂ ನೀರು ತುಂಬಿ ತುಳುಕಾ ಡುತ್ತಿತ್ತು. ಶುಭಲಕ್ಷಣಗಳುಳ್ಳ ಆ ಸೀತೆಯು ತನಗುಂಟಾದ ಈ ಹೀನದ ಯನ್ನು ನೋಡಿ ದುಃಖಿತೆಯಾಗಿದ್ದರೂ, ಪತಿವ್ರತಾಧರವನ್ನು ಚೆನ್ನಾಗಿ ಬಲ್ಲ ವಳಾದುದರಿಂದ, ನಾಚಿಕೆಯಿಂದಲೇ ಆ ಬಟ್ಟೆಗಳನ್ನು ಕೈಗೆ ತೆಗೆದುಕೊಂಡು ಗಂಧರಾಜನಂತೆ ಮುಂದೆ ನಿಂತಿದ್ದ ಪತಿಯಾದ ರಾಮನನ್ನು ನೋಡಿ ಎ ಲೈ ಪ್ರಿಯನೆ! ವನವಾಸಿಗಳಾದ ಋಷಿಗಳು ಈ ವಿಧವಾದ ಬಟ್ಟೆಗಳನ್ನು ಹೇ ಗೆ ಕಟ್ಟಿಕೊಳ್ಳುವರೆಂಬುದೇ ನನಗೆ ತಿಳಿಯದು. ನೀನೇ ಆ ಕ್ರಮವನ್ನು ನನಗೆ ತಿಳಿಸಿಕೊಡಬೇಕು?”ಎಂದು ಹೇಳುತ್ತಾ ಅವುಗಳನ್ನು ಕಟ್ಟಿಕೊಳ್ಳುವುದಕ್ಕೆ ಳಿಯದೆ ಸುಮ್ಮನೆ ನಿಂತಿದ್ದಳು. ವ್ಯಸನದಿಂದ ಆಕೆಗೆ ಯಾವುದೊಂದೂ ತೋರಲಿಲ್ಲ. ಆ ಎರಡುಬಟ್ಟೆಗಳಲ್ಲಿ ಒಂದನ್ನು ತೆಗೆದು ಕಂಠದಲ್ಲಿ ಸಿಕ್ಕಿಸಿಕೊಂ ಡು, ಮತ್ತೊಂದನ್ನು ಕೈಯ್ಯಲ್ಲಿ ಹಿಡಿದು, ಸರಿಯಾಗಿ ಉಟ್ಟುಕೊಳ್ಳುವುದಕ್ಕೆ ತಿಳಿಯದೆ ನಾಚಿಕೆಯಿಂದ ಸುಮ್ಮನೆ ನಿಂತಿರಲು, ಇದನ್ನು ನೋಡಿ ರಾಮನು