ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೯೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಔಲೆ ಶ್ರೀಮದ್ರಾಮಾಯಣವು [ಸರ್ಗ, ೩೮. ಪ್ರಭಾವವುಳ್ಳ ಆ ಬ್ರಾಹ್ಮಣೋತ್ತಮನು ಹೀಗೆ ಎಷ್ಟು ವಿಧದಲ್ಲಿ ಹೇಳುತಿ ದ್ದರೂ, ಸೀತೆಯು ತನ್ನ ಪತಿಯ ವೇಷವನ್ನೇ ಅನುಕರಿಸಬೇಕೆಂಬುದಕ್ಕಾ ಗಿ, ತಾನು ಧರಿಸಿದ್ದ ನಾರುಬಟ್ಟೆಯನ್ನು ತೆಗೆಯಲಾರದೆ, ಹಾಗೆಯೇ ಪ್ರ ಯಾಣಸನ್ನದ್ಯಳಾಗಿದ್ದಳು. ಇಲ್ಲಿಗೆ ಮೂವತ್ತೇಳನೆಯಸರ್ಗವು. ( ದಶರಥನು ಸೀತೆಗೆ ನಾರುಬಟ್ಟೆಯನ್ನುಡಿಸದಿರ ) ಬೇಕಂದು ಕೈಕೇಯಿಯನ್ನು ಕೇಳಿಕೊಂಡುದು, ರಾಮನು ತನ್ನ ತಾಯಿಯಾದ ಆಸಿಯನ್ನು ಸರಿ ಯಾಗಿ ಕಾಪಾಡಿಕೊಳ್ಳಬೇಕೆಂದು ತಂದೆಯನ್ನು ಕೇ ( ಳಿಕೊಂಡುದು, ಆಗ ಸೀತೆಯು,ತ್ರಿಲೋಕೇಶ್ವರನಾದ ರಾಮನೇ ತನಗೆ ನಾಥನಾಗಿರು ವಾಗಲೂ,ಅನಾಥೆಯಂತೆನಾರುಬಟ್ಟೆಯನ್ನುಟ್ಟುಕೊಳ್ಳುತ್ತಿರಲು, ಸಭೆಯಲ್ಲಿ ಜನರೆಲ್ಲರೂ ದಶರಥನನ್ನು ನೋಡಿ, ಛೀ!ನಿನ್ನ ಬಾಳೇತಕ್ಕೆ?”ಎಂದುಗಟ್ಟಿ ಯಾಗಿ ನಿಂದಿಸಲಾರಂಭಿಸಿದರು. ಹೀಗೆ ಜನಗಳು ಆಡಿಕೊಳ್ಳುತಿದ್ದ ತನ್ನ ನಿಂದಾವಾಕ್ಯಗಳನ್ನು ಕೇಳಿ ದಶರಥನು ಪರಮದುಃಖಿತನಾಗಿ, ತನ್ನ ಪ್ರಾಣ ದಲ್ಲಿಯಾಗಲಿ,ಧಮ್ಮದಲ್ಲಿಯಾಗಲಿ, ಕಿರಿಯಲ್ಲಿಯಾಗಲಿ ದೃಷ್ಟಿಯಿಡದೆ,ಬಿಸಿ ಬಿಸಿಯಾಗಿ ನಿಟ್ಟುಸಿರನ್ನು ಬಿಟ್ಟುಕೈಕೇಯಿಯನ್ನು ಕುರಿತು ಎಲೆ ಕೈಕೇಯಿ! ಈ ಸೀತೆಯು ನಾರುಬಟ್ಟೆಯನ್ನು ಡಲೇಕೂಡದು. ಇವಳು ಬಹಳಸುಕುಮಾರ ವಾದ ಮೈಯುಳ್ಳವಳು, ಇನ್ನೂ ಎಳವಯಸ್ಸಿನವಳು. ಯಾವಾಗಲೂ ಸುಖದಿಂದಲೇ ಬಳೆದವಳು. ಇಂತವಳಿಗೆ ಅರಣ್ಯವಾಸವು ಯೋಗ್ಯವಲ್ಲವೆಂ ದು ನಮ್ಮ ಕುಲಗುರುವಾದ ವಸಿಷ್ಠರು ಹೇಳಿದ ಮಾತುಸತ್ಯವು. ಈಸೀತೆಯು ನಾರುಬಟ್ಟೆಯನ್ನು ಟ್ಟು, ಈ ಜನರಮುಂದೆ ಕೇವಲತಾಪಸಸಿಯಂತೆ ನಿಂತಿ ರುವಳಲ್ಲಾ!ಇವಳು ಮಾಡಿರುವ ತಪ್ಪೇನು?ಜನಕರಾಜನ ಹೊಟ್ಟೆಯಲ್ಲಿ ಹು ಟೈ, ಪಾತಿವ್ರತ್ಯಪರಾಯಣೆಯಾದ ಈಕೆಗೆ ಈ ದುರವಸ್ಥೆಯುಂಟಾಗಬಹು ದೆ?ಇವಳು ಈಗಲೇ ತಾನುಟ್ಟಿರುವ ನಾರುವಸ್ತ್ರವನ್ನು ತೆದಗುಹಾಕಬೇಕು. ನಾನು ಈವಿಷಯದಲ್ಲಿ ನಿನಗೇನೂ ಪ್ರತಿಜ್ಞೆಯನ್ನು ಮಾಡಿಕೊಟ್ಟಿಲ್ಲ. ರಾಮನೊಡನೆ ಈಕೆಯು ಕಾಡಿಗೆ ಹೋಗಬೇಕಾದರೂ, ರಾಜಯೋಗ್ಯವಾದ