ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೦೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


h ಸರ್ಗ, ೩೯.) ಅಯೋಧ್ಯಾಕಾಂಡವು, 'ದಶರಥನು ಸುಮಂತ್ರನೊಡನೆ ರಾಮನಿಗಾಗಿ ರಥವ ನ್ನು ತರುವಂತೆ ಹೇಳಿದುದು. ಆಸಿಯು ಸೀತೆಗೆ ನೀತಿಗಳನ್ನು ಪದೇಶಿಸಿದುದು, ರಾಮನು ಕೌಸಲ್ಯ ( ( ಮೊದಲಾದವರನ್ನು ಸಮಾಧಾನಪಡಿಸಿದುದು. ) ರಾಮನು ಹೇಳಿದ ಮಾತನ್ನು ಕೇಳಿ, ಆತನು ತಾಪಸವೇಷವನ್ನು ಧರಿಸಿದುದನ್ನೂ ನೋಡಿ, ದಶರಥನೂ ಆತನ ಪತ್ನಿ ಯರೂ ವ್ಯಸನದಿಂದ ಹಾಗೆಯೇ ಮೂರ್ಛಹೊಂದಿದರು. ದಶರಥನು ದುಃಖದಿಂದ ಆ ರಾಮ ನನ್ನು ಕಣ್ಣೆತ್ತಿಯೂ ನೋಡಲಿಲ್ಲ. ಆತನೊಡನೆ ಮುಖಕೊಟ್ಟು ಮಾತನ್ನೂ ಆಡಲಾರದೆ ಹೋದನು. ಮಹಾಬಾಹುವಾದ ಆ ದಶರಥನು ದುಃಖದಿಂದ ಕ್ಷಣಕ್ಷಣಕ್ಕೂ ಮೂರ್ಖಹೊಂದುತ್ತಾ, ಆಗಾಗ ರಾಮನನ್ನು ನೆನೆಸಿಕೊಂ ಡು ಪ್ರಲಾಪಿಸುತಿದ್ದನು. ಕೊನೆಗೆ ಆತನು ತನ್ನಲ್ಲಿ ತಾನು ಹಾ ! ನಾನು ಪೂರದಲ್ಲಿ ಎಷ್ಟು ಜನರ ಮಕ್ಕಳನ್ನು ಕೊಂದೆನೋ ! ಎನ್ನು, ಜೀವಜಂತು ಗಳನ್ನು ಹಿಂಸಿಸಿದೆನೋ ! ಅದರಿಂದಲೇ ಈಗ ನನಗೆ ಈ ಮಹಾವ್ಯಸನವು ಪ್ರಾಪ್ತವಾಗಿರಬೇಕು ! ಮನುಷ್ಯನಿಗೆ ತಾನು ಮಾಡಿದ ಪೂರೈಕರಗಳಿಗೆ ತಕ್ಕ ಫಲಗಳೆಲ್ಲವನ್ನೂ ಅನುಭವಿಸಿ ತೀರಿದಹೊರತು, ಆತನ ಪ್ರಾಣವು ದೇಹ ವನ್ನು ಬಿಟ್ಟು ಹೋಗುವುದಿಲ್ಲವೆಂಬುದು ನಿಜವು ! ಆದುದರಿಂದಲೇ ಕೈಕೇಯಿ ಯು ನನ್ನನ್ನು ಹೀಗೆ ಸಂಕಟಪಡಿಸುತ್ತಿದ್ದರೂ ನನಗೆ ಮರಣವು ಪ್ರಾಪ್ತವಾ ಗಲಿಲ್ಲ. ಅಯ್ಯೋ! ನನ್ನ ಪ್ರಿಯಪುತ್ರನಾದ ರಾಮನು ಅಗ್ನಿ ಯಂತೆ ಮಹಾತೇ ಜಸ್ವಿಯಾಗಿದ್ದೂ, ತಾನು ಧರಿಸಿದ್ದ ರಾಜಯೋಗ್ಯಗಳಾದ ದುಕೂಲಗಳನ್ನು ತೆಗೆದುಹಾಕಿ, ನನ್ನಿ ದಿರಾಗಿಯೇ ಕಾಡುಜನದಂತೆ ನಾರುಬಟ್ಟೆಗಳನ್ನು ಕಟ್ಟಿ ಕೊಂಡನಲ್ಲಾ! ಇದನ್ನು ಕಣ್ಣಿಂದ ನೋಡಿಯೂ ನನ್ನ ಪ್ರಾಣವು ಬಿಟ್ಟು, ಹೋಗದಿರುವುದಲ್ಲಾ ! ನನ್ನನ್ನು ಮೋಸಗೊಳಿಸಿ ಸ್ವಕಾರವನ್ನು ಸಾಧಿಸಿ ಕೊಳ್ಳುವುದಕ್ಕಾಗಿ ಪ್ರಯತ್ನ ಪಡುತ್ತಿರುವ ಈ ಕೈಕೇಯಿಯೊಬ್ಬಳಿ ಗಾಗಿ, ಈ ಸಮಸ್ಯಜನವೂ ಸಂಕಟಪಡುತ್ತಿರುವುದಲ್ಲವೇ! ” ಎಂದು ಹೇಳು ತ್ಯಾ,ಕಣ್ಣಿನಲ್ಲಿ ನೀರುತುಂಬಿಕೊಂಡು, ರಾಮಾ!” ಎಂದು ಒಂದೇ ಆವರ್ತಿ ಕೂಗಿ, ಅದಕ್ಕೆ ಮೇಲೆ ಯಾವ ಮಾತನ್ನೂ ಆಡಲಾರದೆ, ಪ್ರಜ್ಞೆ ತಪ್ಪಿ ಸುಮ್ಮ ನಾದನು. ಒಂದು ಕ್ಷಣಕಾಲದಮೇಲೆ ಮೆಲ್ಲಗೆ ಚೇತರಿಸಿಕೊಂಡು ಕಣ್ಣೀರನ್ನು