ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೦೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


MY ಶ್ರೀಮದ್ರಾಮಾಯಣವು [ಸರ್ಗ. ೩೯.. ಸುರಿಸುತ್ತಾ, ಸುಮಂತ್ರನನ್ನು ನೋಡಿ ಎಲೆ ಸೂತನೆ ! ನಮ್ಮಲ್ಲಿರುವ ವಿ ಲಾಸಾರ್ಥವಾದ ಒಂದು ರಥಕ್ಕೆ ಒಳ್ಳೇಕುದುರೆಗಳನ್ನು ಕಟ್ಟಿ ತೆಗೆದುಕೊಂ ಡುಬಾ! ಮಹಾತ್ಮನಾದ ಈ ರಾಮನನ್ನು ಆ ರಥದಲ್ಲಿ ಕುಳ್ಳಿರಿಸಿ, ನಮ್ಮ ದೇ. ಶದ ಎಲ್ಲೆಕಟ್ಟನ್ನು ದಾಟುವವರೆಗಾದರೂ ನೀನೇ ಕರೆದುಕೊಂಡುಹೋಗಿ ಬಿಟ್ಟುಬರಬೇಕು. ಆಹಾ!ತಾಯಿತಂದೆಗಳಿಬ್ಬರೂ ಸೇರಿ.ಸತ್ಪುರುಷನಾಗಿಯೂ ವೀರನಾಗಿಯೂ ಇರುವ ತಮ್ಮ ಹೊಟ್ಟೆಯಲ್ಲಿ ಹುಟ್ಟಿದ ಮಗನನ್ನು ಕಾಡು ಪಾಲು ಮಾಡಬೇಕಾಗಿ ಬಂತಲ್ಲವೆ? ಲೋಕದಲ್ಲಿ ಗುಣವಂತರಾದವರ ಸಾಧು ತಕ್ಕೆ ಇದೇ ಫಲವೆಂದು ನನಗೆ ತೋರುತ್ತಿದೆ! ಛೇ! ಇದು ಸೌಜನ್ಯಕ್ಕೆ ಎಂ ದಿಗೂ ಕಾಲವಲ್ಲ! ಇದಕ್ಕಾಗಿ ನಾನು ಎಷ್ಟು ಚಿಂತಿಸಿದರೇನು?” ಎಂದನು. ಇದನ್ನು ಕೇಳಿ ಸುಮಂತ್ರನು ದಶರಥನು ಹೇಳಿದಂತೆಯೇ ಒಂದು ರಥಕ್ಕೆ ಉತ್ತಮವಾದ ಕುದುರೆಗಳನ್ನು ಕಟ್ಟಿತಂದು ಸುವರ್ಣದಿಂದ ಅಲಂಕರಿ ಸಲ್ಪಟ್ಟ ಆ ರಥವನ್ನು ಬಾಗಿಲಲ್ಲಿ ನಿಲ್ಲಿಸಿ, ಈ ವಿಷಯವನ್ನು ರಾಜಕುಮಾರನಾ ದ ರಾಮನಿಗೆ ವಿನಯದಿಂದ ಕೈಮುಗಿದು ತಿಳಿಸಿದನು. ಇದನ್ನು ಕೇಳುತಿದ್ದ ದಶರಥನು ಆತ್ಯಾತುರದಿಂದ ತನ್ನ ಅರಮನೆಯ ಬೊಕ್ಕಸದ ಅಧಿಕಾರಿಯನ್ನು ಕರೆಸಿ, ದೇಕಾಲಸ್ಥಿತಿಯನ್ನು ಚೆನ್ನಾಗಿ ತಿಳಿದವನಾಗಿಯೂ, ನಿಷ್ಕಲ್ಮಷನಾ ಗಿಯೂ, ನಿಜಸ್ಥಿತಿಯನ್ನು ಚೆನ್ನಾಗಿ ವಿಚಾರಿಸಿ ತಿಳಿಯತಕ್ಕವನಾಗಿಯೂ ಇರು ವ ಆ ಧನಾಧ್ಯಕ್ಷನನ್ನು ಕುರಿತು “ಎಲೈ ಧನಾಧ್ಯಕ್ಷನೆ! ಈ ಸೀತೆಯು ಇನ್ನು ಹದಿನಾಲ್ಕು ವರ್ಷಗಳವರೆಗೆ ಕಾಡಿನಲ್ಲಿರಬೇಕಾಗಿರುವುದು. ಅದಕ್ಕೆ ತಕ್ಕ ಷ್ಟು ಉತ್ತಮವಾದ ವಸ್ತುಗಳನ್ನೂ, ಮೇಲಾದ ಆಭರಣಗಳನ್ನೂ ತರಿ ಸಿಡು” ಎಂದನು. ಇದನ್ನು ಕೇಳಿದೊಡನೆಯೇ ಆತನು ಬಂಡಾರಕ್ಕೆ ಹೋಗಿ, ಸಾಕಾಗುವಷ್ಟು ವಸ್ತ್ರಾಭರಣಗಳನ್ನು ತೆಗೆಸಿಕೊಂಡು ಬಂದು, ಸೀತೆಗೆ ಕೊಟ್ಟನು. ಸತ್ಕುಲಪ್ರಸೂತೆಯಾದ ಆ ಸೀತೆಯು ಪ್ರಯಾಣಸನ್ನದ ಳಾಗಿ ನಿಂತು, ವಿಚಿತ್ರವಾದ ಆ ಆಭರಣಗಳನ್ನು ತೆಗೆದು ತನ್ನ ಮಯ್ಯನ್ನು ಚೆನ್ನಾಗಿ ಅಲಂಕರಿಸಿಕೊಂಡಳು. ಉದಯಕಾಲದಲ್ಲಿ ಸೂಯ್ಯನು ತನ್ನ ಪ್ರಭೆ ಗಳಿಂದ ಆಕಾಶವೆಲ್ಲವನ್ನೂ ಪ್ರಕಾಶಪಡಿಸುವಂತೆ, ತನ್ನ ಆಭರಣಕಾಂತಿ ಯಿಂದಲೇ ಆಕೆಯು ತಾನಿದ್ದ ಆಸ್ಥಾನವೆಲ್ಲವನ್ನೂ ಬೆಳಗುತಿದ್ದಳು. ಆಗ ಅ ತೆ.ಯಾದ ಕೌಸಿಯು ಸೀತೆಯನ್ನು ಎರಡುತೋಳುಗಳಿಂದಲೂ ಆಪ್ಪಿ