ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೦೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೫೪೩ ಸರ್ಗ, ೩೯.] ಅಯೋಧ್ಯಾಕಾಂಡವು. ಕೊಂಡು, ಪ್ರೀತಿಯಿಂದ ತಲೆಯನ್ನಾ ಮಣಿಸಿ, ಉತ್ತಮವಾದ ಸೌಶೀಲ್ಯ ವುಳ್ಳ ಆಕೆಯನ್ನು ಕುರಿತು, (ಎಲೆ, ಸೌಭಾಗ್ಯವತಿ! ಈ ಲೋಕದಲ್ಲಿ ಸಾಮಾ ನ್ಯವಾಗಿ * ಅನೇಕಸಿಯರು ಅಸತಿಯರಾಗಿ, ತಮ್ಮ ಪತಿಗಳು ತಮ್ಮನ್ನು ಎಷ್ಟೇ ವಿಧದಲ್ಲಿ ಇಷ್ಟವಾನಾದಿಗಳಿಂದ ಸತ್ಕರಿಸುತ್ತಿದ್ದರೂ, ಪತಿಗೆ ಏನಾ ದರೂ ಕಷ್ಟದಶೆಯು ಬಂದೊದಗಿದಾಗ, ಆತನನ್ನು ಕಣ್ಣೆತ್ತಿಯೂ ನೋಡ ದೆ ಅನಾದರಿಸುವರು. ಮೊದಲು ಅನುಕೂಲಕಾಲಗಳಲ್ಲಿ ಬೇಕಾದಸೌಖ್ಯಗ ಳನ್ನೆ ಲ್ಲಾ ಯಥೇಚ್ಛವಾಗಿ ಅನುಭವಿಸಿದ್ದರೂ, ದುಷ್ಟಾಲವಶದಿಂದ ತಮ್ಮ ಪತಿಗೆ ಏನಾದರೂ ಸ್ವಲ್ಪ ವಿಪತ್ತು ಬಂದೊದಗಿದರೆ, ಆಗಲೇ ಗಂಡನಲ್ಲಿ ಅಲಕ್ಷಭಾವವನ್ನು ತೋರಿಸುತ್ತಾ, ಕೊನೆಗೆ ಅವನನ್ನು ಬಿಟ್ಟೂಬಿಡು ವರು. ಲೋಕದಲ್ಲಿ ಸ್ತ್ರೀಯರ ನಡತೆಯೇ ಈ ವಿಧವಾದುದು. ಸುಳ್ಳಾಡುವು ದೇ ಅವರ ಸ್ವಭಾವವು. ಕ್ಷಣಕ್ಷಣಕ್ಕೂ ಅವರ ಮನಸ್ಸು ಚಲಿಸುತ್ತಿರುವುದು. ಅವರ ಮನಸ್ಸನ್ನು ಹೀಗೆಂದು ಕಂಡುಹಿಡಿಯುವುದಕ್ಕೆ ಯಾರಿಂದಲೂ ಸಾ ಧ್ಯವಿಲ್ಲ. ಯಾವಾಗಲೂ ಅವರಿಗೆ ಕೇಡನ್ನೇ ಯೋಚಿಸುತ್ತಿರುವರು. ಅವರ ಪ್ರೇಮವೇ ಸ್ಥಿರವಾದುದಲ್ಲ. ನಿಮಿಷ ಮಾತ್ರದಲ್ಲಿ ತಪ್ಪಿ ಹೋಗುವುದು, ಅವ ರು, ವಂಶೋತ್ಪತಿಯನ್ನಾಗಲಿ, ಉಪಕಾರವನ್ನಾಗಲಿ, ವಿದ್ಯೆಯನ್ನಾಗಲಿ, ಲೋಕಮಯ್ಯಾದೆಯನ್ನಾಗಲಿ, ವಸ್ತ್ರಾಭರಣಾದಿಸನ್ಮಾನಗಳನ್ನಾಗಲಿ ಗಮ ನಿಸತಕ್ಕವರಲ್ಲ. ಅವಗಮನಸ್ಸು ಬಹುಚಂಚಲವು. ಅವರು ಹಣವೊಂದನ್ನೇ ನೋಡುವರು. ಹೀಗಿಲ್ಲದೆ ಕುಲೋಚಿತವಾದ ನಡತೆಯಲ್ಲಿಯೂ, ಸತ್ಯದಲ್ಲಿಯೂ ಗುರುಹಿರಿಯರ ಉಪದೇಶದಲ್ಲಿಯೂ ಅಕ್ಕರೆಯುಳ್ಳ ಪತಿವ್ರತೆಯರಿಗೆ ಪತಿ ಯೊಬ್ಬ ನೇ ಪರಮಪಾವನವಾದ ವಸ್ತುವು, ಎಲೆ ಸೀತೆ! ಈಗ ನನ್ನ ಮಗ ನಾದ ರಾಮನಿಗೆ ಕಾಲವಶದಿಂದ ಈ ವನವಾಸವೆಂಬ ದುರವಸ್ಥೆಯು ಬಂ ದೊದಗಿರುವುದನ್ನು ನೋಡಿ, ನೀವು ಆತನನ್ನು ಅಲಕ್ಷದಿಂದ ಕಾಣಬೇಡ! ಆತನು ಧನಿಕನಾಗಿದ್ದರೂ, ಅಥವಾ ದರಿದ್ರನಾಗಿದ್ದರೂ, ಪತಿಯಾದ ಅವ ನನ್ನು ನೀನು ಪರದೈವವೆಂದೇ ಭಾವಿಸುತ್ತಿರಬೇಕು” ಎಂದಳು. ಧರದ ಸಾರವುಳ್ಳ ಆ ಕೌಸಲ್ಯಯ ಮಾತನ್ನು ಕೇಳಿ ಸೀತೆಯು, ತನ್ನಿದಿರಾಗಿ

  • ಕೈಕೇಯಿಯನ್ನು ನಿಂದಿಸುವುದಕ್ಕಾಗಿಯೇ ಕಸಿಯು ಈ ಮುಂದಿನ ವಾಕ್ಯಗಳನ್ನು ಹೇಳಿದುದಾಗಿ ಗ್ರಹಿಸಬೇಕು.