ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದ್ರಾಮಾಯಣವು [ಸರ್ಗ. ೩೯. ನಿಂತಿದ್ದ ಅತ್ತೆಯಾದ ಆಕೆಗೆ ವಿನಯದಿಂದ ಕೈಮುಗಿದು ನಿಂತು (ಅಮಾನಿ ವ್ಯ ಆಜ್ಞೆಯಂತೆಯೇ ನಡೆದುಕೊಳ್ಳುವೆನು. ಈ ವಿಷಯದಲ್ಲಿ ನೀನು ನನಗೆ ಹೇ ಳಬೇಕಾದುದೇನೂ ಇಲ್ಲವು, ಪತಿಯವಿಷಯದಲ್ಲಿ ಹೇಗೆ ನಡೆದುಕೊಳ್ಳಬೇ ಕೆಂಬುದನ್ನು ನಾನು ಚೆನ್ನಾಗಿ ಬಲ್ಲೆನು. ಈ ವಿಷಯವನ್ನು ಮೊದಲೇ ಅನೇಕ ಮಹನೀಯರು ನನಗೆ ಉಪದೇಶಿಸಿದರು. ನೀನು ಇತರದುಷ್ಯ ರಿಗೆ ಸಮಾನವಾಗಿ ನನ್ನನ್ನೆಣಿಸಕೂಡದು. ಪ್ರಭೆಯು ಚಂದ್ರನನ್ನು ಹೇಗೆ ಆಗಲಿ ರದೋ, ಹಾಗೆ ನಾನು ಎಂದಿಗೂ ಧವನ್ನು ಬಿಟ್ಟುಹೋಗುವವಳಲ್ಲ.ತಂತಿ ಯಿಲ್ಲದೆ ವೀಣೆಯು ನುಡಿಯದು. ಚಕ್ರವಿಲ್ಲದೆ ರಥವು ನಡೆಯದು.ಹಾಗೆಯೇ ಸ್ತ್ರೀಯಾದವಳು ನೂರಾರುಮಕ್ಕಳನ್ನು ಪಡೆದಿದ್ದರೂಗಂಡನಿಲ್ಲದಿದ್ದರೆ ಆಕೆ ಕೆ ಎಂದಿಗೂ ಸುಖವಿಲ್ಲ.ಸಿಯರಿಗೆ ಅವರವರ ತಂದೆಯಾಗಲಿ, ತಾಯಿಯಾ ಗಲಿ, ಮಕ್ಕಳಾಗಲಿ ಕೊಡತಕ್ಕ ವಸ್ತುಗಳಿಗೆ ಮಿತಿಯುಂಟು. ಅವೆಲ್ಲವೂ ಐಹಿಕವಾದ ಫಲಕ್ಕೆ ಮಾತ್ರವೇ ಸಾಧಕಗಳಾಗಿರುವುವು. ಅವರಿಗೆ ಪತಿಯಿಂ ದುಂಟಾಗತಕ್ಕ ಫಲಗಳಿಗಾದರೋ ಮಿತಿಯೇ ಇಲ್ಲವು. ಐಹಿಕಾಮುಷ್ಠಿಕ ಫಲಗಳೆರಡಕ್ಕೂ ಅವು ಸಾಧಕವಾಗಿರುವುವು.ಇಂತಹ ಪತಿಯನ್ನು ಪೂಜಿಸದ ವರುಂಟೆ? ಈ ಪಾತಿವ್ರತ್ಯಧ್ಯವನ್ನು ನಾನು ಚೆನ್ನಾಗಿ ಬಲ್ಲೆನು. ಅದನ್ನೇ ಅವಲಂಬಿಸಿಕೊಂಡಿರುವೆನು. ಮಹಾಪತಿವ್ರತೆಯರೆನಿಸಿಕೊಂಡ ಅನೇಕ ಯರಿಂದ ಇದಕ್ಕೆ ಸಂಬಂಧಪಟ್ಟ ಸಾಮಾನ್ಯವಿಶೇಷಗಳೆಲ್ಲವನ್ನೂ ನಾ ನು ಚೆನ್ನಾಗಿ ಕೇಳಿಯೂ ಇರುವೆನು. ಹೀಗಿರುವಾಗಲೂ ನಾನು ಆತನನ್ನು ಅವಮಾನಪಡಿಸುವೆನೆ? ಸ್ತ್ರೀಯರಿಗೆ ಪತಿಯೇ ಪರದೈವವೆಂಬುದನ್ನು ನಾನ ರಿಯೆನೆ??ಎಂದಳು. ಹೀಗೆ ಕಿವಿಗಿಂಪಾದ ಸೀತೆಯ ಮಾತನ್ನು ಕೇಳಿದೊಡನೆ ಸಾಕಪ್ಪಭಾವವುಳ್ಳ ಕೌಸಲ್ಯಯು ರಾಮನ ಅಗಲಿಕೆಯಿಂದುಂಟಾ ದ ದುಃಖವು ತನ್ನ ಮನಸ್ಸಿನಲ್ಲಿ ತುಂಬಿದ್ದರೂ, ಸೀತೆಯ ಪಾತಿವ್ರತ್ಯಧಮ್ಮ ವನ್ನು ನೋಡಿ ಪರಮಸಂತೋಷವನ್ನು ಹೊಂದಿ, ಮೊದಲಿದ್ದ ದುಃಖ ಜಲದೊಡನೆ ಕಣ್ಣಿನಲ್ಲಿ ಆನಂದಬಾಷ್ಪವನ್ನು ಸುರಿಸುತ್ತಿದ್ದಳು. ಆಮೇಲೆ ರಾಮನು ಇತರ ಮಾತೆಯರಿಂದ ವಿಶೇಷವಾಗಿ ಉಪಚರಿಸಲ್ಪಡುತ್ತಿದ್ದ ತನ್ನ ತಾಯಿಯಾದ ಕೌಸಲೈಯನ್ನು ಪ್ರದಕ್ಷಿಣಮಾಡಿ, ಕೈಮುಗಿದುನಿಂತು, ಆಕೆಯನ್ನು ನೋಡಿ ಅಮ್ಮಾ! ಇನ್ನು ನೀನು ದುಃಖಿಸಬೇಡ!ತಂದೆಯನ್ನು