ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೦೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಗರ್ಗ, ೪o.] ಅಯೋಧ್ಯಾ 8 . ಆತನಲ್ಲಿ ವಿಶೇಷಪ್ರೇಮವುಳ್ಳ ನೀನೂ ಅವನೊಡನೆ ಕಾಡಿಗೆ ಹೋಗಿ, ಅವನ ಶುಶೂಷೆಯನ್ನು ಮಾಡುತ್ತಿರಬೇಕೆಂಬುದಕ್ಕಾಗಿಯೇ ಇಲ್ಲಿ ಸೃಷ್ಟಿಸಲ್ಪಟ್ಟಿ ರುವೆಯೇ ಹೊರತು ಬೇರೆಯಲ್ಲ. ಆತನು ಲೋಕರಕ್ಷಣಾರ್ಥವಾಗಿ ಅವರು ಸಿರುವಂತೆಯೇ, ಆತನೊಡನೆ ವನವಾಸದಲ್ಲಿದ್ದು ಅವನ ಶುಶೂಷೆಯನ್ನು ಮಾಡುತ್ತಿರುವುದಕ್ಕಾಗಿಯೇ ಹುಟ್ಟಿರುವ ನೀನು,ಬಹಳ ಎಚ್ಚರಿಕೆಯಿಂದ ಆ ತನನ್ನು ಕಾಡಿನಲ್ಲಿ ರಕ್ಷಿಸುತ್ತಿರಬೇಕು. ರಾಮನು ಭಾಗ್ಯವಂತನಾಗಿದ್ದರೂ ರಾಜಾಧಿಕಾರವೊಂದೂ ಇಲ್ಲದೆ ಕಷ್ಟದಲ್ಲಿ ಸಿಕ್ಕಿಬಿದ್ದರೂ ಆತನೇ ನಿನಗೆ ಕ ತಿಯು ತಮ್ಮಂದಿರು ಅಣ್ಣನಿಗೆ ಹಿತರಾಗಿದ್ದು, ಅವರನ್ನು ಪರಿಚರೈಮಾಡುತ್ತಿ ರಬೇಕೆಂಬುದೇ ಸತ್ಪುರುಷರ ಧರವು. ಈ ರೀತಿಯಾದ ನಡತೆಯೂ, ಬಡ ವರನ್ನು ದಾನಾದಿಗಳಿಂದ ಪೋಷಿಸುವುದೂ, ಆಗಾಗ ಯಜ್ಞದೀಕ್ಷೆಗಳನ್ನು ವಹಿಸುವುದೂಯುದ್ಧದಲ್ಲಿ ದೇಹವನ್ನು ಬಿಡುವುದೂ ನಮ್ಮ ಇಕ್ಷಾಕುವಂ ಶಕ್ಕೆ ಪರಂಪರಾಗತವಾಗಿ ಬಂದ ಧರವು. ಆದುದರಿಂದ ನಿನ್ನ ಪ್ರಾಣಕ್ಕೆ ಹಾನಿಯುಂಟಾಗುವ ಸಂಭವವಿದ್ದರೂ, ರಾಮನನ್ನು ಸರಿಯಾಗಿರಕ್ಷಿಸಬೇಕು” ಎಂದಳು. ಹೀಗೆಂದುಹೇಳಿ, ರಾಮನನ್ನೆ ತನಗೆ ಮುಖ್ಯಗತಿಯೆಂದು ನಂಬಿ ಕೊಂಡು ವನಪ್ರಯಾಣಕ್ಕೆ ಸಿದ್ಧನಾಗಿರುವ ಲಕ್ಷಣವನ್ನು ನಡೆನಡೆ” ಎಂ ದು ತಾನೇ ಬಾರಿಬಾರಿಗೂ ಊರೆಪಡಿಸುತ್ತಾ,ಪುನಃ ಆತನನ್ನು ಕುರಿತು *ವ ತೃನೆ! ನೀನು ರಾಮನನ್ನೇ ನಿನ್ನ ತಂದೆಯಾದ ದಶರಥನೆಂದು ಭಾವಿಸು!ಸೀತೆ ಬಹಳ ಅನುರಾಗವುಳ್ಳವನಾಗಿದ್ದರೂ (ವನವಾಸಾಯ) ಕಾಡಿನಲ್ಲಿ ರಾಮನೊಡನೆ ಹೋಗಿರುವುದಕ್ಕೆ (ಮಯಾ ಸೃಷ್ಯ:) ನನ್ನಿಂದ ಅನುಮತಿಸಲ್ಪಟ್ಟಿರುವೆ” ಎಂದು ಮಹೇಶ್ವರತೀರ್ಥವ್ಯಾಖ್ಯಾನವು,

  • ಇದಕ್ಕೆ 'ರಾಮಂ ದಶರಥಂ ನಿದ್ದಿ ಮಾಂ ನಿದ್ದಿ ಜನಕಾತ್ಮಜಾಂ! ಅಯೋಧ್ಯಾ ಮಟನೀಂ ಏದ್ದಿ ಗಳ ತಾತ ಯಥಾಸುಖಂ” ಎಂದು ಮೂಲವು. ಕಾಡಿನಲ್ಲಿರುವಾಗ ಲಕ್ಷಣನಿಗೆ ತಂದೆತಾಯಿಗಳೇ ಮೊದಲಾದವರ ಸ್ಮರಣೆಯು ಬಂದು, ಅತನ ಮನಸ್ಸು ಕದಲಿಹೋಗುವುದೋ” ಎಂದು ಶಂಕಿಸಿ, ಸುಮಿತ್ರೆಯ ಈ ಮಾತನ್ನಾಡುವಳು. ಇದೆ ರಿಂದ “ರಾಮನನ್ನೆ ತಂದೆಯನ್ನಾಗಿಯೂ, ಸೀತೆಯನ್ನೇ ತಾಯಿಯನ್ನಾಗಿಯೂ, ಈ ಡನ್ನೇ ಅಯೋಧ್ಯಾನಗರದಂತೆ ಭೋಗಸ್ಥಾನವನ್ನಾಗಿಯೂ ತಿಳಿದುಕೊಂಡು,ಸುಖವಾಗಿ ಹೋಗಿ ಬಾ”ಎಂದು ಸಾಮಾನ್ಮಾರ್ಥವು (ಯಧಾಸುರಂಗನಿನಗೆ ಸುಖವುಂಟಾ