ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೮ ಸರ್ಗ, ೧] ಅಯೋಧ್ಯಾಕಾಂಡವು. ಪ್ರರನ್ನು ನಿಗ್ರಹಿಸುವುದಕ್ಕೂ, 'ತಕ್ಕ ಸಮಯಗಳನ್ನು ಚೆನ್ನಾಗಿ ತಿಳಿ ಯಬಲ್ಲವನು.* ಪ್ರಜೆಗಳ ಮನಸ್ಸಿಗೆ ನೋವುಂಟುಮಾಡದೆ, ನ್ಯಾಯವಿರೋ ಧವಿಲ್ಲದೆ, ದ್ರವ್ಯವನ್ನಾರ್ಜಿಸುವ ಉಪಾಯವಾವುದೆಂಬುದನ್ನೂ, + ಯಾವ ಯಾವ ಭಾಗಗಳಲ್ಲಿ ಅದನ್ನು ಹೇಗೆ ವ್ಯಯಮಾಡಬೇಕೆಂಬುದನ್ನೂ ಆತನು ಚೆನ್ನಾಗಿ ತಿಳಿದಿರುವನು. ಶಾಸ್ತ್ರ ಸಮೂಹಗಳನ್ನೂ, ಕಾವ್ಯನಾಟಕಾಲಂ ಕಾರಗಳನ್ನೂ ತಿಳಿದವರಲ್ಲಿ ಆತನೇ ಮೇಲೆನಿಸಿಕೊಂಡಿರುವನು. ಆತನು ಧಾರಗಳಿಗೆ ವಿರೋಧಬಾರದಂತೆಯೇ ಕಾಮೋಪಭೋಗಗಳನ್ನನು ಭವಿಸತಕ್ಕವನು ಆರಾರ್ಜನೆಯಲ್ಲಿಯಾಗಲಿ, ಧಾರ್ಜನೆಯಲ್ಲಿಯಾಗಲಿ ಎಂದಿಗೂ ಬೇಸರಗೊಳ್ಳುವವನಲ್ಲ. ವಿನೋದಾರಗಳಾದ ಸಂಗೀತ ಚಿತ್ರ ಕರಾದಿಶಿಲ್ಪಗಳವಿಷಯದಲ್ಲಿಯೂ, ಆತನಿಗೆ ಬಹಳ ನೈಪುಣ್ಯವುಂಟು. ಸಂಪಾದಿಸಿದ ಹಣವನ್ನು ಯಾವಯಾವ ಭಾಗಗಳಲ್ಲಿ ಹೇಗೆ ಉಪಯೋಗಿಸ ಬೇಕೆಂಬುದನ್ನು ಆತನು ಚೆನ್ನಾಗಿ ಬಲ್ಲನು. ಆನೆಕುದುರೆಗಳನ್ನೇರುವುದ ರಲ್ಲಿಯೂ, ಅವುಗಳನ್ನು ವಿಧವಿಧವಾದ ಗತಿಗಳಿಂದ ನಡೆಸುವುದರಲ್ಲಿಯೂ ಆತನು ಬಹಳನಿಪುಣನು. ಧನುರೈದವನ್ನು ತಿಳಿದವರಲ್ಲಿ ಆತನನ್ನು ಮೀರಿಸಿ ದವರೊಬ್ಬರೂ ಇಲ್ಲ!ಲೋಕದಲ್ಲಿ ಅತಿರಥರೆಂದು ಖ್ಯಾತಿಗೊಂಡವರೂ ಕೂಡ ಆತನಿಗೆ ವಿಧೇಯರಾಗಿ ಪೂಜಿಸುವರು. ಯುದ್ಧ ಕಾಲಗಳಲ್ಲಿ ಸೈನಿಕರ ಸಹಾಯವನ್ನೂ ನಿರೀಕ್ಷಿಸದೆ, ತಾನೇ ಮುಂದಾಗಿ ಹೋಗಿ ಹಗೆಗಳನ್ನು ಹೊ ಡೆಯುವನು. ಹೀಗೆ ಶತ್ರುಗಳನ್ನ ಡಗಿಸುವುದುಮಾತ್ರವೇ ಅಲ್ಲದೆ, ತನ್ನ 'ಧರಾಯ ಯಶಸೇರಾಯ ಆತ್ಮ ನೇ ಸ್ವಜನಾಯಚ | ಪಂಚಧಾ ವಿಭಜೇತ ಮಹಾಮತ ಚ ಶೋಭತೇ!!” ಧಾರವಾಗಿಯೂ, ಕೀರ್ತಿಸಂಪಾದನೆಗಾಗಿಯೂ, ಇದ್ದ ಹಣವನ್ನು ವೃದ್ಧಿಗೊಳಿಸುವುದಕ್ಕಾಗಿಯೂ, ತನ್ನ ಸ್ವಂತಕ್ಕಾಗಿಯೂ, ಸ್ವಜನರಿ ಗಾಗಿಯೂ, ಹೀಗೆ ಐದುಭಾಗವಾಗಿ ಮಾಡಿ ಹಣವನ್ನು ವೃದ್ಧಿಮಾಡಬೇಕು. ಹೀಗೆ ಮಾಡುವುದರಿಂದ ಇಹಪರಸೌಖ್ಯಗಳೆರಡಕ್ಕೂ ಸಹಾಯಕವಾಗುವುದೆಂದು ಸ್ಮತಿ ವಾಕ್ಯವುಂಟು. - + “ಕದಾಯಕ್ಕಚಾರೈನ ಚತುರ್ಭಾಗೇನ ವಾ ಪುನ< | ಪಾದಭಾಗ್ಯ ಸಿಭಿರಾತಿ ವಯಸ್ಸಂಜೆ.ದತೇ ಬುರೈ:||' ಎಂದು, ಆದಾಯದಲ್ಲಿ ಕಾಲುಭಾಗವನ್ನಾಗಲಿ, ಅಥ ವಾ ಅರ್ಧಭಾಗವನ್ನಾಗಲಿ, ಕೊನೆಗೆ ಮುಕ್ಕಾಲುಪಾಲನ್ನಾಗಲಿ, ವೆಚ್ಚ ಮಾಡಬೇಕೇ ಹೊರತು, ಅದಕ್ಕೆ ಮೇಲೆ ವ್ಯಯಮಾಡಕೂಡದೆಂದು ಶಾಸ್ತ್ರವಿಧಿಯು.