ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೧೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩೪ ಸರ್ಗ: ೪೦] ಅಯೋಧ್ಯಾಕಾಂಡ. ಯೆಂದು ಭಾವಿಸು: ಸುಖವಾಗಿ ಹೋಗಿ ಬಾ” ಎಂದಳು. ಆಮೇಲೆ ಸುಮಂ ......----... - --- ..- ಯೆಂದು ಭಾವವು (ಅಯೋಧ್ಯಾಮಟವೀಂ ಎದ್ದಿ) ಇನ್ನು ಮೇಲೆ ಈ ಅಯೋಧ್ಯೆಯನ್ನು ಒಂದು ಅಡವಿಯನ್ನಾಗಿಯೇ ತಿಳಿ, ಎಂದರೆ, ಕಾಡಿನಂತೆ ಈ ಅಯೋಧ್ಯೆಯು ಇನ್ನು ಮೇಲೆ ನಿರ್ಜನವಾಗುವುದೆಂದೂ ಭಾವವು. ಇದರಿಂದ “ನೀನು ರಾಮನೊಡನೆ ಕಾಡಿಗ ಹೊರಟುಹೋದಮೇಲೆ.ದಶರಥನೂ ಬದುಕಿರಲಾರನು.ನಾನೂ ತಂದೆಯ ಮನೆಗೆಹೋಗಿ ಸೇರುವೆನು. ಅಯೋಧ್ಯಾವಾಸಿಗಳೆಲ್ಲರೂ ಈ ಪಟ್ಟಣವನ್ನು ಬಿಟ್ಟು ಹೊರಟುಹೋಗು ವುದರಿಂದ, ಈ ಪಟ್ಟಣವು ಕೇವಲಶೂನ್ಯಪ್ರದೇಶವಾಗುವುದೆಂದು ಮುಖ್ಯ ತಾತ್ಸರವು. ( ಗೋವಿಂದರಾಜೀಯವು). ಅಥವಾ (ರಾಮಂ ದಶರಥಂ ವಿದ್ದಿ) ಇತ್ಯಾದಿವಾಕ್ಯಗಳಿಗೆ “ಉಪಾಧಿವಶದಿಂದ ತಂದೆಯೆನಿಸಿಕೊಂಡಿರುವ ದಶರಥನಲ್ಲಿ ನೀನು ಅತಿಸ್ನೇಹವನ್ನು ಬಿಟ್ಟು, ನಿರುಪಾಧಿಕ ಪಿತೃವಾದ ರಾಮನಲ್ಲಿಯೇ ಭಕ್ತಿಯಿಡು ಮತ್ತು (ಮಾಂ ನಿದ್ದಿ ಜನಕಾತ್ಮಜಾಂ) ಉಪಾಧಿವಶದಿಂದ ತಾಯಿಯೆನಿಸಿಕೊಂಡಿರುವ ನನ್ನಲ್ಲಿರುವುದಕ್ಕಿಂತಲೂ ನಿರುಪಾಧಿಕ ಮಾತೆಯಾದ ಸೀತೆಯಲ್ಲಿ ಹೆಚ್ಚು ಭಕ್ತಿಯನ್ನಿಡು: (ಅಯೋಧ್ಯಾಮಟವೀಂದ್ದಿ ಉಪಾ ಧಿವಶದಿಂದ ಬಂದಿರುವ ಅಯೋಧ್ಯಾಸಾಮ್ರಾಜ್ಯದಲ್ಲಿರುವುದಕ್ಕಿಂತಲೂ, ರಾಮನಿ ಗಾಶ್ರಯವಾಗಿರುವುದರಿಂದ ನಿರುಪಾಧಿಕವಾದ ಭೋಗಸಾಮ್ರಾಜ್ಯವನ್ನುಂಟುಮಾಡ ತಕ್ಕ ಕಾಡಿನಲ್ಲಿ ಪ್ರೀತಿಯನ್ನಿಡು.” ಎಂದೂ ಭಾವವು, ಅಥವಾ ರಾಮನು ರಾಜ್ಯ ಹೀನನಾಗಿ ಕಾಡಿನಲ್ಲಿರುತ್ತಿದ್ದರೂ, ಆತನ ನಿಶ್ವರಕ್ಕೆ ಎಂದಿಗೂ ಲೋಪವು ಬಾರ ದಾದುದರಿಂದ, ಆತನನ್ನು ದಶರಥನಂತೆ ಸಾಮ್ರಾಜ್ಯದಲ್ಲಿರುವವನ್ನಾಗಿಯೂ, ಸೀತೆಯನ್ನು ಕೂಡ ನನ್ನಂತೆ ರಾಜಮಹಿಷಿಯನ್ನಾಗಿಯೂ, ಕಾಡನ್ನು ಅಯೋಧ್ಯೆ ಯಂತೆ ಪುಷ್ಟಫಲಸಮೃದ್ಧಿಯುಳ್ಳುದಾಗಿಯೂ ಶಿಳಿದು ಗೌರವಿಸುತ್ತಿರಬೇಕೆ? ಹೊರತು, ಅವರ ದುರ್ದಶೆಯನ್ನು ನೋಡಿ ಅಲಕ್ಷವನ್ನು ತೋರಿಸಬಾರದೆಂದ ಭಾವವು, ಅಥವಾ ಇದರಿಂದ ಸುಮಿತ್ರೆಯು ದಶರಥನ ವಿಷಯದಲ್ಲಿ ಕೋಪಗೊಂಡಿರುವ ಲಕ್ಷಣನಿಗೆ ಸಮಾಧಾನವನ್ನು ಹೇಳಿ ಬುದ್ದಿಗಲಿಸಿದುದಾಗಿಯೂ ಅರ್ಥವನ್ನು ಮಾಡ ಬಹುದು.(ರಾಮಂ ದಶರಥಂ ವಿದ್ದಿ ) ದಶರಥನನ್ನೂ ಶಾಮನಂತೆಯೇ ಭಾವಿಸು ಎಂದರೆ “ಅಹಂ ತಾವಾ 'ಹಾರಾಜೇ ಪಿತೃತ್ವಂ ನೋಪಲಕ್ಷಯೇ ! ಭ್ರಾತಾ ಭರ್ತಾಚ ಬಂಧು ಪಿತಾಚ ಮಮ ರಾಘವಃ” ಎಂದು ನೀನು ಹೇಳಿರುವಂತೆ, ದಶರಥನನ್ನು ಅವಮಾನಿಸಬಾರ ದೆಂದು ಭಾವವು, (ಮಾಂ ವಿದ್ದಿ ಜನಕಾತ್ಮಜಾಂ) ಸೀತೆಯಲ್ಲಿ ನೀನು ಹೇಗೆ ಭಕ್ತಿಯನ್ನಿ ಟಿರುವೆಯೋ, ಹಾಗೆ ನನ್ನಲ್ಲಿಯೂ ಇದುವರೆಗಿದೆ ನಿನ್ನ ಮಾತೃಭಕ್ತಿಯನ್ನು ಬಿಡಬೇಡ