ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೫೧ ಸರ್ಗ, ೪೦.] ಅಯೋಧ್ಯಾಕಾಂಡವು. ಯಂತೆ ಜ್ವಲಿಸುತ್ತಿರುವ ಆ ರಥವನ್ನು ಅಣ್ಣ ತಮ್ಮಂದಿರಾದ ರಾಮಲಕ್ಷಣ ರಿಬ್ಬರೂ ಏರಿದರು. ಸೀತೆಯು ಕಾಡಿನಲ್ಲಿರಬೇಕಾದ ದಿನಗಳನ್ನು ಲೆಕ್ಕ ಮಾಡಿ ಅದಕ್ಕೆ ತಕ್ಕಷ್ಟು ವಸ್ತ್ರಾಭರಣಗಳನ್ನೂ ,ರಾಮಲಕ್ಷ್ಮಣರಿಗೆ ಬೇಕಾದ ಆಯು ಧಗಳನ್ನೂ,ಕವಚಗಳನ್ನೂ ರಥದಲ್ಲಿ ತಂದಿಡುವಂತೆ, ದಶರಥನು ಪರಿಜನರಿ ಗೆ ಆಜ್ಞಾಪಿಸಿ, ಅವೆಲ್ಲವನ್ನೂ ಲೋಪವಿಲ್ಲದೆತರಿಸಿಟ್ಟನು.ಮತ್ತು ಲಕ್ಷ್ಮಣನಿಗೆ ಬೇಕಾದ ಗುದ್ದಲಿ,ಪಟ್ಟಿ,ಮೊದಲಾದ ಸಾಮಗ್ರಿಗಳನ್ನೂ ತರಿಸಿಟ್ಟನು.ಹೀ ಗೆ ಸೀತಾರಾಮಲಕ್ಷ್ಮಣರು ಮೂವರೂ ಸಮಸ್ತಸಾಮಗ್ರಿಗಳೊಡನೆ ರಥವ ಸ್ನೇರಿ ಕುಳಿತಮೇಲೆ,ಸುಮಂತ್ರನು ವಾಯುವೇಗದಿಂದ ಕೂಡಿದ ಶುಭಲಕ್ಷ ಣಗಳುಳ್ಳ ಕುದುರೆಗಳನ್ನು ಮುಂದೆ ನಡೆಸಿದನು. ಅತ್ತಲಾಗಿ ರಾಮನು ವನ ಕ್ಕೆ ಪ್ರಯಾಣಮಾಡಿದೊಡನೆಯೇ, ಆ ಪಟ್ಟಣವೆಲ್ಲವೂ ಮೂರ್ಛಯಲ್ಲಿ ಮು ಳುಗಿತು. ಆನೆಕುದುರೆಗಳೇ ಮೊದಲಾದ ಚತುರ ಗಸೈನ್ಯವೂ ವ್ಯಸನದಿಂದ ಪ್ರಜ್ಞೆ ತಪ್ಪಿತು. ಉತ್ಸವಾರವಾಗಿ ಆಗಂತುಕರಾಗಿ ಬಂದಿದ್ದ ಜನರೆಲ್ಲರೂ `ಪ್ರಜ್ಞೆ ತಪ್ಪಿದ್ದರು. ಆ ಪಟ್ಟಣದಲ್ಲಿದ್ದ ಸಮಸ್ತ ಪ್ರಾಣಿಗಳೂ ಹಿಂದು ಮುಂದುತೋರದೆ ಕಳವಳಹೊಂದಿ, ಇಂದ್ರಿಯಶಾನ್ಯವಾಗಿ ಗೋಳಿಡು ತಿದ್ದುವು. ಆ ಪಟ್ಟಣದಲ್ಲಿದ್ದ ಮದೋನ್ಮತವಾದ ಆನಗಳೆಲ್ಲವೂ ಕೋಪ ದಿಂದ ಫೀಂಕಾರಧ್ವನಿಯನ್ನು ಮಾಡುತಿದ್ದುವು. ಕುದುರೆಗಳೂಕೂಡ ನಿಂತ ಕಡೆಯಲ್ಲಿ ನಿಲ್ಲದೆ ಸಂಕಟದಿಂದ ಕೂಗಿಕೊಳ್ಳುತಿದ್ದುವು. ರಾಮನ ರಥದ ದಾರಿಯನ್ನೇ ಅನುಸರಿಸಿ ಓಡುತಿದ್ದ ಜನರ ಆಭರಣಧ್ವನಿಗಳು ನಾಲ್ಕುಗಡೆಗೆ ಇಲ್ಲಿಯೂ ತುಂಬಿದುವು. ಆ ಕಾಲದಲ್ಲಿ ಆಯೋಧ್ಯಾ ಪಟ್ಟಣವೆಲ್ಲವೂ ಕೇವ ಅದುಃಖಧ್ವನಿಯಿಂದಲೇ ತುಂಬಿಹೋಯಿತು. ಆ ಪಟ್ಟಣದ ಜನರಲ್ಲಿ ಆಬಾಲವೃದ್ದರೂ ರಾಮನನ್ನು ನೆನೆಸಿಕೊಂಡು ಸಂಕಟಪಡುತ್ತಾ, ಬೇ ಸಗೆಯ ತಾಪದಿಂದ ಬಳಲಿದವರು ನೀರನ್ನು ಹುಡುಕಿಕೊಂಡು ಓಡುವಂ ತೆ ರಾಮನ ರಥವನ್ನೇ ಹಿಂಬಾಲಿಸಿ ಓಡುತಿದ್ದರು. ರಾಮನ ರಥದ ಸುತ್ತು ಮುತ್ತಲೂ ಅಲ್ಲಿನ ಪುರವಾಸಿಗಳೆಲ್ಲರೂ ಕಿಕ್ಕಿರಿಸಿ ತುಂಬಿ ತಲೆಯೆತ್ತಿ ಆ ರಾಮನನ್ನೇ ನೋಡುತ್ತ, ಕಣ್ಣಿನಲ್ಲಿ ನೀರನ್ನು ತುಂಬಿಕೊಂಡು,ರಥವನ್ನು ನಡೆಸುತ್ತಿದ್ದ ಸುಮಂತ್ರನನ್ನು ಕುರಿತು, ಅಯ್ಯಾ ಸಾರಥಿಯೇ! ಕುದುರೆಗಳ ಹಗ್ಗವನ್ನು ಎಳೆದು ಹಿಡಿ! ರಥವನ್ನು ಮೆಲ್ಲಗೆ ಬಿಡು! ರಾಮನ ಮುಖವನ್ನಾ