ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದ್ರಾಮಾಯಣವು: (ಸರ್ಗ, ೪o', ದರೂ ನೋಡುವೆವು!ಇನ್ನು ಆತನ ಮುಖದರನವೂ ನಮಗೆ ದುರಭವಾಗು ವುದಲ್ಲವೆ?ನೀನು ರಥವನ್ನು ವೇಗದಿಂದ ನಡೆಸಿಕೊಂಡುಹೋದರೆ ಆತನನ್ನು ನೋಡುವುದೂ ನಮಗೆ ಕಷ್ಟವಾಗುವುದು ಆ8!ರಾಮನ ತಾಯಿಯಾದ ಕೌ ಸಲೈಯ ಹೃದಯವು ಉಕ್ಕಿನಿಂದಲೇ ಮಾಡಲ್ಪಟ್ಟಿರುವುದೆಂಬುದರಲ್ಲಿ ಸಂದೇ ಹವಿಲ್ಲ. ದೇವಕುಮಾರನಂತೆ ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗನು ಕಾಡಿಗೆ ಹೋಗುವಾಗಲೂ ಅವಳ ಎದೆಯು ಒಡೆಯದಿರುವುದಲ್ಲಾ! ಛಾಯೆಯಂತೆ ಪ್ರ ಪತಿಯನ್ನನುಸರಿಸಿ ಹೋಗುತ್ತಿರುವ ಈ ಸೀತೆಯೇ ಧನ್ಯಳು ಈಕೆ ಯು * ಸೂರ ಕಾಂತಿಯು ಮೇರುಪರತವನ್ನು ಅಗಲಿಹೋಗದಂತೆ, ನಿಮಿ ಪಮಾತ್ರವೂ ತನ್ನ ಪಾತಿವ್ರತ್ಯಧಮ್ಮವನ್ನು ಅಗಲಿರದೆ, ಆತನನ್ನೇ ಅನುಸರಿಸಿ ಹೋಗುವಳು.ಎಲೈ ಲಕ್ಷಣನೇ!ಲೋಕದಲ್ಲಿ ನಿನ್ನಂತೆ ಧನ್ಯರಾರುಂಟು? ಪ್ರಿ ಯವಾದಿಯಾಗಿ, ದೇವತೆಗಳಿಗೆ ಸಮಾನನೆನಿಸಿಕೊಂಡಿರುವ ನಿನ್ನ ಅಣ್ಣನಿಗೆ ನೀ ನು ಅನವರತವೂ ಪರಿಚರೆಯನ್ನು ಮಾಡುತ್ತಿರುವೆಯಲ್ಲವೆ? ಹೀಗೆ ಈತನನ್ನ ನುಸರಿಸಿಹೋಗುವುದೇ ನಿನಗೆ ದೊಡ್ಡ ತಪಸ್ಸಿದ್ಧಿಯು.ಇದೇ ನಿನಗೆ ಸಮಸ್ತ ವಿಧವಾದ ಆಭ್ಯುದಯವು!ಇದೇ ನಿನಗೆ ಸ್ವರ ಪ್ರಾಪ್ತಿಗೆ ದಾರಿಯು.ಸೀನೇ ಥ ವ್ಯನು.”ಎಂದು ಕೂಗಿಕೊಳ್ಳುತಿದ್ದರು. ಹೀಗೆ ಸತ್ವಲೋಕಪ್ರಿಯನಾಗಿ ಇ. ಕಾಕುವಂಶಕ್ಕೆ ಅನಂದಕರನೆನಿಸಿಕೊಂಡಿರುವ ರಾಮನನ್ನು ಬಿಟ್ಟು ಬರಲಾರ ದೆ, ಪುರವಾಸಿಗಳೆಲ್ಲರೂ ಆತನ ರಥವನ್ನೇ ಹಿಂಬಾಲಿಸಿ ಹೋಗುತ್ತಾ, ವ್ಯಸ ನದಿಂದ ಧಾರೆಧಾರೆಯಾಗಿ ಕಣ್ಣೀರನ್ನು ಸುರಿಸುತ್ತಿದ್ದರು. ಇತ್ತಲಾಗಿ ದಶ ರಥರಾಜನೂ ಬಹಳ ದುಃಖಿತನಾಗಿ, ತನ್ನಂತೆಯೇ ಮಹಾವ್ಯಸನದಲ್ಲಿ ಮು ಳುಗಿರುವ ತನ್ನ ಪತ್ನಿ ಯರೊಡಗೂಡಿ, ಮತ್ತೊಂದಾವರ್ತಿಯಾದರೂ ರಾ ಮನನ್ನು ನೋಡಿಬರುವೆ”ನೆಂದು ಹೇಳುತ್ತಾ,ಧಟ್ಟನೆ ಎದ್ದು ಅರಮನೆಯನ್ನು ಬಿಟ್ಟು ಹೊರಟನು. ಕಾಡಾನೆಗಳ ಗುಂಪಿನಲ್ಲಿರುವ ಸಲಗನನ್ನು ಹಿಡಿದುಕಟ್ಟೆ, ದಾಗ,ಹೆಣ್ಣಾನೆಗಳೆಲ್ಲವೂ ದುಃಖದಿಂದ ಕೂಗಿಕೊಳ್ಳುವಂತೆ, ಈ ದಶರಥನ ಹಿಂದೆ,ಸ್ತ್ರೀಯರೆಲ್ಲರೂ ಗಟ್ಟಿಯಾಗಿ ಅಳುತ್ತಾ ಬರುತ್ತಿರಲು.ಅವರ ರೋದ

  • ಸೂರನು ಯಾಗಾಗಲೂ ಮೇರುಪರತವನ್ನೇ ಸುತ್ತಿ ಬರುವುದರಿಂದ, ಆತನ ಕಾಂತಿಯು ಆಪರತದ ಮೇಲೆ ಯಾವಾಗಲೂ ಬಿದ್ದೇ ಇರುವುದೆಂದು ಗ್ರಹಿಸಬೇಕು