ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೧೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸರ್ಗ, ೪೦.] ಅಯೋಧ್ಯಾಕಾಂಡವು. ನ ಧ್ವನಿಯು ಆ ಸ್ಥಳವೆಲ್ಲವನ್ನೂ ತುಂಬಿಕೊಂಡಿತು. ಈ ಅನರ್ಥಗಳೆಲ್ಲವನ್ನೂ ನೋಡಿದಾಗ ಆ ದಶರಥನು ಗ್ರಹಣಹಿಡಿದ ಪೂ‌ಚಂದ್ರನಂತೆ ಕಾಂತಿಹೀ ನನಾಗಿದ್ದನು. ಅತ್ತಲಾಗಿ ಶ್ರೀಮಂತನಾದ ರಾಮನು, ಪ್ರಜೆಗಳ ದುಃ ಖವನ್ನು ನೋಡಿ ಸಹಿಸಲಾರದೆ, ಸುಮಂತ್ರನನ್ನು ಕುರಿತು, ಬೇಗಬೇ ಗನೆ ರಥವನ್ನು ಬಿಡು” ಎಂದು ತ್ವರಪಡಿಸುತಿದ್ದನು. ಇತ್ತಲಾಗಿ ಪ್ರಜೆಗಳು ರಥವನ್ನು ಮುಂದೆಬಿಡದೆ, ನಿಲ್ಲುನಿಲ್ಲೆಂದು ತನ್ನನ್ನು ನಿರ್ಬಂಧಿಸುತ್ತಿರುವು ದನ್ನೂ,ಅತ್ತಲಾಗಿ ರಾಮನು ಹೋಗುಹೋಗೆಂದು ಬಹಳವಾಗಿ ತ್ವರಪಡಿಸು ತಿರುವುದನ್ನೂ ನೋಡಿ, ಆತನಿಗೆ ಯಾವುದೂ ತೋರಲಿಲ್ಲ. ಮಹಾಬಾಹು ವಾದ ರಾಮನು ಹೀಗೆ ಹೋಗುತ್ತಿರುವಾಗ, ರಥಸಂಚಾರದಿಂದಲೂ, ಜನ ಸಂಚಾರದಿಂದಲೂ ಎಡ್ಡ ದೊಡ್ಡಧೂಳಿಯು, ಅಲ್ಲಿದ್ದ ಪ್ರಜೆಗಳ ಕಣ್ಣೀರಿನಿಂ ದಲೇ ಶಾಂತವಾಗುವಂತೆ ತೋರುತಿತ್ತು. ರಾಮನ ಪ್ರಯಾಣಕಾಲದಲ್ಲಿ ಪ ರಜನರೆಲ್ಲರೂ ಬಹಳ ದುಃಖದಿಂದ ಆಳುತ್ತಪಾಹಾ” ಎಂದು ಕೂಗಿಕೊಂಡು ಪ್ರಜ್ಞೆ ತಪ್ಪಿ ಬಿಳುತಿದ್ದರು. ಆ ಪ್ರಜೆಗಳ ಕಣ್ಣೀರಿನಿಂದಲೇ ಭೂಮಿಯೆಲ್ಲವೂ ನೆನೆದಂತಾಯಿತು. ಕೊಳದಲ್ಲಿ ಮೀನುಗಳು ಇಲ್ಲಿಗಲ್ಲಿಗೆ ಸಂಚಾರಮಾಡುವಾ ಗ,ಆಲುಗುವ ತಾವರೆಬಳ್ಳಿಗಳಿಂದ ಮಕರಂದವು ಸೋರಿಕ್ಕುವಂತೆ ಜನಗಳ ಕ ಣ್ಣುಗಳಿಂದ ಧಾರೆಧಾರೆಯಾಗಿ ನೀರು ಸುರಿಯುತಿತ್ತು.ರಾಮನ ಅಗಲಿಕೆಗಾ ಗಿ ಆ ಅಯೋಧ್ಯಾಪುರವೆಲ್ಲವೂ ಒಂದೇ ಮನಸ್ಸಿನಿಂದದುಃಖಿಸುತ್ತಿರುವುದನ್ನು ನೋಡಿ,ಶ್ರೀಮಂತನಾದ ದಶರಥನೂ ಮಹಾವ್ಯಸನಗೊಂಡು,ಬುಡವನ್ನು ಕ ಡಿದ ಮರದಂತೆ ಹಾಗೆಯೇ ಪ್ರಜ್ಞೆ ತಪ್ಪಿ ಕೆಳಕ್ಕೆ ಬಿದ್ದನು.ಅತ್ತಲಾಗಿ ರಾಮನ ಹಿಂದೆ ಹೋಗುತಿದ್ದ ಜನರೆಲ್ಲರೂ ದಶರಥನ ದುರವಸೆಯನ್ನು ನೋಡಿ, (ಹಾಹಾ”! ಎಂದು ಕೂಗುತಿದ್ದರು.ಅವರಲ್ಲಿ ಕೆಲವರು «ಹಾ ರಾಮಾ” ಎಂ ದೂ, ಮತ್ತೆ ಕೆಲವರು ಹಾ ಕೌಸ” ಎಂದೂ ಕೂಗಿಕೊಳ್ಳುತಿದ್ದರು. ಹೀ ಗೆಯೇ ಅಂತಃಪುರದಲ್ಲಿಯೂ ಪ್ರಬಲವಾದ ರೋದನಧ್ವನಿಯು ಹೊರಟಿತು. ಈ ಗದ್ಯವನ್ನು ಕೇಳಿ ರಾಮನು ಹಿಂತಿರುಗಿ ನೋಡಿದಾಗ, ಅನೇಕಪ್ರಜೆಗ ಳು ತನ್ನ ಹಿಂದೆ ದುಃಖದಿಂದ ಗೋಳಿಡುತ್ತ ಹಿಂಬಾಲಿಸಿಬರುತ್ತಿರುವುದನ್ನು ಕಂಡನು. ಅವರ ನಡುವೆ ತನ್ನ ತಂದೆಯ, ತಾಯಿಯೂ, ಮಹಾದುಃ ಖಿತರಾಗಿ ಆನಾಥರಂತೆ ಗೋಳಿಡುತ್ತ, ದಾರಿಯಲ್ಲಿ ನಡೆದು ಬರುತ್ತಿದ್ದು