ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೧೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸರ್ಗ, ೪೦.] ಅಯೋಧ್ಯಾಕಾಂಡವು. ವೇಗದಿಂದ ಬಿಡು! ದಶರಥನಿಗೆ ಬೇರೆ ಬಗೆಯಿಂದ ಸಮಾಧಾನವನ್ನು ಹೇಳ ಬಹುದು, ಆತನಿಗೆ ತನ್ನ ಅಜ್ಜಿಯನ್ನು ನಡೆಸಲಿಲ್ಲವೆಂದು ನಿನ್ನಲ್ಲಿ ಕೋಪ ವುಂಟಾದರೂ ಅದನ್ನು ತಪ್ಪಿಸುವುದಕ್ಕೆ ಬೇರೆ ಉಪಾಯವುಂಟು. ಆತನು ನಿನ್ನನ್ನು ಒಂದುವೇಳೆ ಆಕ್ಷೇಪಿಸಿದರೆ ನೀನು ಕೂಗಿದುದು ಈ ದೊಡ್ಡಗದ್ದ ಲದಲ್ಲಿ ಕಿವಿಗೆ ಬೀಳಲಿಲ್ಲವೆಂದು ಆತನಿಗೆ ಸಮಾಧಾನವನ್ನು ಹೇಳಬಹುದು. ಹೀಗೆ ಸುಳ್ಳಾಡುವುದು ಪಾಪಕಾಧ್ಯವೆಂದು ಸೀನು ಶಂಕಿಸಬೇಡ, ಈ ಸುಳ್ಳ ನಾ ದರೂ ಹೇಳಬಹುದೇ ಹೊರತು, ಅವರ ದುಃಖವನ್ನು ನಾವು ನೋಡು ತಿರುವುದು ಇನ್ನೂ ಪಾಪಕೃತ್ಯವು, ನಾನು ಅದನ್ನು ನೋಡಿ ಸಹಿಸಲಾ ರೆನು” ಎಂದನು. ಈ ಮಾತನ್ನು ಕೇಳಿ ಸುಮಂತ್ರನು, ಡಧವನ್ನು ಹಿಂಬಾ ಲಿಸಿ ಬರುತಿದ್ದ ಅಂತಃಪುರಜನಗಳಿಗೆ ರಾಮನಿಂದ ಅನುಮತಿಯನ್ನು ಕೊಡಿ ಸಿ, ತನ್ನಷ್ಟಕ್ಕೆ ತಾನೇ ವೇಗದಿಂದ ಹೋಗುತ್ತಿರುವ ಕುದುರೆಗಳನ್ನು ಮತ್ತೆ ಷ್ಟು ವೇಗದಿಂದ ಓಡಿಸಲಾರಂಭಿಸಿದನು.ರಾಜಸಂಬಂಧಿಜನರೆಲ್ಲರೂ ರಾಮ. ನ ರಥಕ್ಕೆ ಪ್ರದಕ್ಷಣಮಾಡಿ ಹಿಂತಿರುಗಿದರು.ಎಷ್ಟಾದರೇನು!* ಅಲ್ಲಿಂದ ಹಿಂ ತಿರುಗಿದ ಜನರ ದೇಹವುಮಾತ್ರವೇ ಪಟ್ಟಣಕ್ಕಭಿಮುಖವಾಗಿ ಬರುತಿತ್ತೇ ಹೊರತು,ಅವರ ಮನಸೂ, ಕಣ್ಣೀರುಗಳೂ ಹಿಂತಿರುಗಲಿಲ್ಲ. ಇತ್ತಲಾಗಿ ಮಂ ತ್ರಿಗಳೆಲ್ಲರೂ ದಶರಥನನ್ನು ನೋಡಿ ('ಎಲೈ ರಾಜನೆ! ಪ್ರಯಾಣಮಾಡಿಸಿ ಕ ಳುಹಿಸುವಾಗ, ಯಾವನನ್ನು ಪುನಃ ಶೀಘ್ರದಲ್ಲಿಯೇ ಹಿಂತಿರುಗಿ ಬರಬೇಕಂ ದು ಕೋರುವೆವೋ, ಆತನನ್ನು ಬಹುದೂರದವರೆಗೆ ಹಿಂಬಾಲಿಸಿ ಹೋಗಬಾ ರದೆಂದು ಹಿರಿಯರು ಹೇಳಿರುವರು, ಆದುದರಿಂದ ನಾವು ಇನ್ನು ಮುಂದೆ ಅವ ನನ್ನನುಸರಿಸಿ ಹೋಗಬಾರದು”ಎಂದರು. ದುಃಖದಿಂದ ಬೆವತ ಮೈಯುಳ್ಳ

  • ಇಲ್ಲಿ 'ನ್ಯವರ್ತತ ಜನೋ ರಾಜ್ಯೋ ರಾಮಂ ಕೃತ್ಯಾ ಪ್ರದಕ್ಷಿಣೆಂ | ಮನಸಾ ವ್ಯಶುವೇಗೈ ನ ವ್ಯವರ್ತತ ಮಾನುಷಂ” ಎಂದು ಮೂಲವು. ಇದರಲ್ಲಿ (ರಾಜ್ಯೋ) ಜನಃ) ಎಂದರೆ ತಾಜಸಂಬಂಧಿಯಾದ ಅಂತ:ಪ್ರರಜನ ತಮ್ಮ ದೇಹಗಾತ್ರವನ್ನು ಹಿಂತಿರುಗಿಸಿತೇ ಹೊರತು, ತಮ್ಮ ಕಣ್ಣೀರನೂ , ಮನಸ್ಸನ್ನೂ ತಿರುಗಿಸಲಾರದೇ ಹೋಯಿತೆಂದೂ, (ಮಾನುಷಂ) ಎಂದರೆ ಇತರಪ್ರಜನವು ಆ ದೇಹವನ್ನೂ ತಿರು

ಗಿಸಲಾರದೆ ಹೋಯಿತೆಂದೂ ಮಹೇಶ್ವರತೀರ ವ್ಯಾಖ್ಯಾನವು.