ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದ್ರಾಮಾಯಣವು [ಜಿಗ ೪೧. ವನಾಗಿಯೂ, ಕಂದಿದ 'ರೂಪವುಳ್ಳವನಾಗಿಯೂ ಇದ್ದ ಆ ದಶರಥನು, ಮಂತ್ರಿಗಳು ಹೇಳಿದ ಗುಣ ಯುಕ್ತವಾದ ಆ ಮಾತನ್ನು ಕೇಳಿ, ತನ್ನ ಪತ್ನಿ ಯರೊಡನೆ ಅಲ್ಲಿಯೇ ನಿಂತು, ರಾಮನ ರಥವು ಹೋಗುತಿದ್ದ ದಾರಿಯನ್ನೇ ನೋಡುತಿದ್ದನು. ಇಲ್ಲಿಗೆ ನಾಲ್ವತ್ತನೆಯ ಸರ್ಗವು, ಅಂತಃಪುರಸ್ತ್ರೀಯರ ವಿಲಾಪವು, ಪಜೆಗೆ ದುಶಕುನಗಳು. ಪುರುಷಶ್ರೇಷ್ಠನಾದ ರಾಮನು, ಹೀಗೆ ತನ್ನ ಮಾತೆಯರಿಂದ ಪರಿ ವೃತನಾದ ತಂದೆಗೆ ಕೈ ಮುಗಿದು ಹೊರಟುಹೋದಮೇಲೆ, ಇತ್ತಲಾಗಿ ಸಿ ಸಮೂಹದಲ್ಲಿ ದೊಡ್ಡ ಪ್ರಲಾಪಧ್ವನಿಯುಂಟಾಯಿತು. ಅವರೆಲ್ಲರೂ ಹೋ” ಎಂದು ಗಟ್ಟಿಯಾಗಿ ಗೋಳಿಡುತ್ತಾ, ರಾಮನನ್ನು ಕುರಿತು (ಅಯ್ಯೋ ! ನಾವು ಇನ್ನು ಅನಾಥರಾಗಿಬಿಟ್ಟೆವು' ನಮಗೆ ಸಮಸ್ಯಬಲವೂ ತಪ್ಪಿಹೋ ಯಿತು. ಹೀಗೆ ಶೋಚನೀಯಾವಸ್ಥೆಯಲ್ಲಿರುವ ನಮಗೆ ಇನ್ನು ಗತಿಯಾರು? ನಮ್ಮೆಲ್ಲರಿಗೂ ರಕ್ಷಕನಾಗಿಯೂ, ದಿಕ್ಕಾಗಿಯೂ ಇದ್ದ ರಾಮನು ನಮ್ಮ ನ್ನು ಬಿಟ್ಟು ಎಲ್ಲಿಗೆ ಹೋಗುವನೋ?ನಾವು ಎಷ್ಟೇ ಬಯ್ದರೂ ಕೋಪಿಸುವ ವನಲ್ಲ. ನಮಗೆ ಕೋಪವುಂಟಾಗತಕ್ಕ ಕೆಲಸವನ್ನು ಆಗಲೇ ಬಿಟ್ಟುಬಿಡುತಿ “ನು ನಮ್ಮ ದುಃಖಗ್ಯ ತಾನೂ ಸಮಭಾಗಿಯಾಗಿರುತ್ತಿದ್ದನು.ಹೀಗೆ ನಮ್ಮ ಲ್ಲರಿಗೂ ನಾಥನಾದ ರಾಮನು ಎಲ್ಲಿಯೋ ಹೊರಟುಹೋದನಲ್ಲಾ ! ತನ್ನ ಹೆತ್ತ ತಾಯಿಯಾದ ಕೌಸಿಯನ್ನು ಕಾಣುತಿದ್ದಂತೆಯೇ ನಮ್ಮನ್ನೂ ಎ ಮೊ ಪ್ರೀತಿಯಿಂದ ಕಾಣುತಿದ್ದ ಅಂತಹ ಮಹಾನುಭಾವರು, ಎಲ್ಲಿಗೆ ಹೋದನೋ? ಕೈಕೇಯಿಯ ನಿರ್ಬಂಧಕ್ಕಾಗಿ ದಶರಥನು ಪ್ರೇರಿಸಿದುದರಿಂ ದ, ಸತ್ವಲೋಕಕ್ಕೂ ರಕ್ಷಕನಾದ ರಾಮನೇ ಕಾಡಿಗೆ ಹೊರಟನು. ಅವ ನು ಇನ್ನೆಲ್ಲಿರುವನೋ ? ದಶರಥನಿಗೆ ಸ್ವಲ್ಪವಾದರೂ ವಿವೇಕವಿಲ್ಲ ಸಮ ಸ್ವಜೀವಿಗಳಿಗೂ ಪ್ರಿಯನಾಗಿ, ಧರಿಷ್ಟನಾಗಿ, ಸತ್ಯಸಂಧನಾಗಿರುವ ರಾ ಮನನ್ನೇ ಕಾಡಿನಲ್ಲಿರಬೇಕೆಂದು ಹೇಳಿದನಲ್ಲವೆ?” ಎಂದು, ಅಲ್ಲಿದ್ದ ಸಿಯರೆ ಲ್ಲರೂ ಕರುವನ್ನು ಕಾಣದ, ಹಸುಗಳಂತೆ ದುಃಖದಿಂದ ತುಳಿಸುತ್ತ ರೆ ವನಮಾಡತೊಡಗಿದರು. ಮಹಾಭಯಂಕರವಾದ ಈ ಪ್ರಲಾಪ