ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಳ ಶ್ರೀಮದ್ರಾಮಾಯಕನ (ಸರ್ಗ, ೧ ಸೈನಿಕರಿಗೆ ಕೂಡ ಸ್ವಲ್ಪವೂ ಅಪಾಯವುಂಟಾಗದಂತೆ ರಕ್ಷಿಸುವುದಕ್ಕಾಗಿ ಅವುಗಳನ್ನು ಚಕ್ರವ್ಯೂಹಾದ್ಯಾಕಾರಗಳಿಂದ ನಿಲ್ಲಿಸಿ ನಡೆಸುವುದರಲ್ಲಿ ಬಹಳ ನೈಪುಣ್ಯವುಳ್ಳವನು. ಆತನನ್ನಿ ದಿರಿಸುವುದಕ್ಕೆ ಲೋಕದಲ್ಲಿ ಯಾರಿಂದಲೂ ಸಾಧ್ಯವಲ್ಲ. ಈ ಲೋಕದವರ ಮಾತೂ ಹಾಗಿರಲಿ!ಒಂದುವೇಳೆ ದೇವಾಸು ರರಿಬ್ಬರೂ ತಮ್ಮೊಳಗೆ ಪರಸ್ಪರವೈರಬುದ್ಧಿಯನ್ನು ಬಿಟ್ಟು, ಒಂದಾಗಿ ಬಂದು ಕೋಪದಿಂದಿರಿಸಿದರೂ ಅವನನ್ನು ಜಯಿಸಲಾರರು. ಆತನಲ್ಲಿ ಅಸೂಯೆಯೆಂಬುದು ಸ್ವಲ್ಪವೂ ಇಲ್ಲ. ಮದಮಾತ್ಸರಾದಿದುರ್ಗುಣಗಳ ನೈಲ್ಲಾ ತ್ಯಜಿಸಿದವನು, ಕೋಪವನ್ನು ಸ್ವಾಧೀನದಲ್ಲಿ ಅಡಗಿಸಿಟ್ಟುಕೊಂಡಿ ರುವವನು. ಯಾವ ಪ್ರಾಣಿಗಳನ್ನಾಗಲಿ ತಿರಸ್ಕರಿಸಿ ಅವಮಾನಪಡಿಸತಕ್ಕವ ನಲ್ಲ. ಕಾಲವಶದಿಂದುಂಟಾಗತಕ್ಕ ರಾಜಸತಾಮಸಾರಿಗುಣಗಳಿಗೆ ಒಳಗಾ ಗದೆ,ಯಾವಾಗಲೂ ಸತ್ಯಮೂರಿಯಾಗಿಯೇ ಇರುವನು. ಹೀಗೆ ಲೋಕೋ ತರಗುಣಗಳಿಂದ ಕೂಡಿದ ಆ ರಾಮನು, ಮೂರುಲೋಕಗಳಿಗೂ ಇಷ್ಟನಾಗಿ ಪ್ರಕಾಶಿಸುತ್ತಿದ್ದನು.ಮತ್ತು ಆತನು, ತಾಳ್ಮೆಯಲ್ಲಿ ಭೂದೇವಿಗೂ ಬುದ್ದಿಯಲ್ಲಿ ಬೃಹಸ್ಪತಿಗೂ,ಪರಾಕ್ರಮದಲ್ಲಿ ಇಂದ್ರನಿಗೂಸಮನಾದವನು!ಹೀಗೆ ಆರಾಮ ನು,ಹೆಂಗಸರು, ಮಕ್ಕಳು, ಮುದುಕರು,ಮೊದಲುಗೊಂಡು ಸಮಸ್ತಪ್ರಜೆಗಳ ಮನಸ್ಸನ್ನೂ ಆಕರ್ಷಿಸತಕ್ಕವುಗಳಾಗಿಯೂ, ತಂದೆಗೂ ಇತರಗುರುಜನರ ಳಿಗೂ ಆಹ್ಲಾದಕಾರಿಗಳಾಗಿಯೂ ಇರುವ ಕಲ್ಯಾಣಗುಣಗಳಿಂದ ಪರಿಪೂ ರ್ಣನಾಗಿ, ಸೂ‌ನ ಕಿರಣಗಳಿಂದ ಹೇಗೋ ಹಾಗೆ, ಲೋಕಾಭಿನಂ ಹೃನಾಗಿರುತ್ತಿದ್ದನು. * ಇಂತಹ ಲೋಕೋತ್ತರ ಕಲ್ಯಾಣಗುಣಸಮ್ಮ

  • ತಮೇವಂ ವ್ರತಸಂಪನ್ನ ಮಪ್ರಧೃಷ್ಯಪರಾಕ್ರಮಃ | ಲೋಕಪಾಲೋಪಮಂ ನಾಥಮಕಾಮಯತ ಮೇದಿನೀ” ಎಂಬುದು ಇದಕ್ಕೆ ಮೂಲವು. ಇದರ ವಿಶೇಷಾರಗಳೇ ನಂದರೆ, (ಏವಂ) ಹೀಗೆ, ಎಂದರೆ, ಹಿಂದೆ ಬಾಲಕಾಂಡದಲ್ಲಿ ಹೇಳಿದ ಪ್ರಕಾರವಾಗಿ (ಪ್ರತಸಂಪತ್ನಂ) ಪವ್ರತದೊಡಗೂಡಿದ, ರಾಮತ್ತು ಸೀತಯಾ ಸಾರ್ಧ” ಎಂ ಬಂತೆ ಸೀತೆಯೊಡನೆ ಕ್ರೀಡಾರಸಸಂಪನ್ನನಾದ, (ಅಪ್ರದೃಷ್ಯಪರಾಕ್ರಮ) ವಿರೋಧಿ ವರ್ಗನಿರಸನಪೂರಕವಾಗಿ ತನ್ನೊಡನೆ ಸೇರಿಸಿಕೊಂಡು ಭೋಗವನ್ನುಂಟುಮಾಡತಕ್ಕ (ಲೋಕಪಾಲೋಪಮು) ಇಲ್ಲಿ ವಿಶೇಷಣೋಭಯಪದಸಮಾಸವು ಹೇಗೆಂದರೆ, ಲೋಕ ವನ್ನು ಪಾಲಿಸತಕ್ಕವನಾಗಿ, ಮತ್ತು (ಉಪ, ಸಮೀಪೇ, ಮಾ, ಯಸ್ಯಸ , ಉಪಮ:)