ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೨೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸರ್ಗ, ೪೧.] ಅಯೋಧ್ಯಾಕಾಂಡವು.. 32 ಧ್ವನಿಯನ್ನು ದಶರಥನೂ ಕೇಳಿದನು. ಮೊದಲೇ ಪುತ್ರಶೋಕದಿಂದ ಬೆಂ ದುಹೋಗುತ್ತಿರುವ ಆತನಿಗೆ ಇದು ಮತ್ತಷ್ಟು ದುಃಖವನ್ನು ಹೆಚ್ಚಿಸಿತು. ದುಃಖದಿಂದ ಆ ಅಯೋಧ್ಯಾವಾಸಿಗಳಲ್ಲಿ ಯಾರೊಬ್ಬರೂ ಯಾವುದೊಂದು ಕೆಲಸವನ್ನೂ ಮಾಡುತ್ತಿರಲಿಲ್ಲ. ಆಹಿತಾಗ್ನಿಗಳಾದವರು ಪ್ರತಿನಿತ್ಯವೂ ತಾವು ನಡೆಸಬೇಕಾದ ಅಗ್ನಿಹೋತ್ರವನ್ನೇ ನಿಲ್ಲಿಸಿಬಿಟ್ಟರು. ಆ ಪಟ್ಟಣದಲ್ಲಿ ಆ ದಿವಸ ಒಬ್ಬರಾದರೂ ಆಕೆಗೆಯನ್ನೇ ಮಾಡಲಿಲ್ಲ. ಪ್ರಜೆಗಳು ತಾವು ಮಾಡಬೇಕಾದ ಕಾಧ್ಯವೆಲ್ಲವನ್ನೂ ನಿಲ್ಲಿಸಿಬಿಟ್ಟರು. * ಸೂರನೂಕೂಡ ಇ ನ್ನೂ ಹೊತ್ತಿರುವಾಗಲೇ ಮುಳುಗಿಹೋದನು. ಆನೆಗಳು ತಮ್ಮ ಆಹಾರವ ನ್ನೇ ಬಿಟ್ಟು ಬಿಟ್ಟುವು.ಹಸುಗಳು ಹಾಲುಕುಡಿಯುವುದಕ್ಕಾಗಿ ಬಂದ ಕರುಗ ಇನ್ನು ಒದ್ದು ತಳ್ಳುತಿದ್ದುವು. ಬಹುಕಾಲದವರೆಗೆ ಮಕ್ಕಳಿಲ್ಲದೆ ಕೊನೆಗಾ ಲದಲ್ಲಿ ಒಬ್ಬ ಸೀಮಂತಪತ್ರವನ್ನು ಪಡೆದ ಹೆಂಗಸಿಗೂಕೂಡ, ಆಗ ಮನಸ್ಸಿ ನಲ್ಲಿ ಸಂತೋಷವಿರಲಿಲ್ಲ. ↑ ಇಕ್ಷಾಕುಕುಲಕ್ಕೆ ಕೂಟಸ್ಥನಾಗಿ, ಆಕಾಶ ದಲ್ಲಿ ನಕ್ಷತ್ರರೂಪದಿಂದ ಜ್ವಲಿಸುತ್ತಿರುವ ತ್ರಿಶಂಕುವೂ, ಅಂಗಾರಕನ,

  • ರಾಮನು ಸಮಸ್ತ ಪ್ರಪಂಚಕ್ಕೂ ಆತ್ಮಭೂತನಾಗಿರುವುದರಿಂದ, ಆತನಿಗೆ ದ:ಖವುಂಟಾದರೆ ಎಲ್ಲಕ್ಕೂ ದು:ಖವುಂಟಾದಂತೆಯೇ ಆಗಬೇಕಲ್ಲವೆ ? ಇದರಿಂದ ಈ ರಾಮಾಯಣದಲ್ಲಿ ಹೇಳಲ್ಪಟ್ಟಿರುವ ವಿಷಯಗಳೆಲ್ಲವೂ ವಾಸ್ತವಾಂಶಗಳೆಂದೇ ಗ್ರಹಿ ಸಬೇಕು. (ಮಹೇಶ್ವರತೀರರು.)

- + ಇದಕ್ಕೆ, ಪುತ್ರಂ ಪ್ರಥಮಜಂ ಲಬ್ಬಾ ಜನನೀ ನಾಭ್ಯನಂದತ!” ಎಂಬುದೇ ಮೂಲವು. ರಾಮನು 'ಉತ್ಪವೇಷು ಚ ಸತ್ಯೇಷು ಪಿತೇವ ಪರಿತುಹ್ಮತಿ” ಎಂಬಂತೆ ಮಕ್ಕಳು ಹುಟ್ಟಿದುದುಮೊದಲು, ತಂದೆಯಂತೆ ತೊಡೆಯಲ್ಲಿಟ್ಟು ಲಾಲಿಸತಕ್ಕವನು. ಅಂತಹ ರಾಮನೇ ಕಾಡಿಗೆ ಹೊರಟುಹೋದಮೇಲೆ, ತಮ್ಮ ಮಕ್ಕಳನ್ನು ಅಷ್ಟು ಪ್ರೀತಿ ಯಿಂದ ಕಾಪಾಡತಕ್ಕವರಾರೆಂಬ ಭಾವವು ಇಲ್ಲಿ ಸೂಚಿತವಾಗುವುದು. - + ಇಲ್ಲಿ ಕ್ರಿಶಂಕುವೆಂದರೆ ನಕ್ಷತ್ರರೂಪದಲ್ಲಿರುವ ಇಕ್ಷಾಕುಕುಲಕೂಟಸ್ಥ ನೆಂ ದು ತಿಳಿಯಬೇಕು. ಈತನಿಗೆ ಗ್ರಹವೆಂಬ ಸಂಕೇತವಿಲ್ಲದಿದ್ದರೂ, ಇತರಗ್ರಹಗಳ ನಡು ವೆ ಸೇರಿರುವುದರಿಂದ, ಆ ವ್ಯವಹಾರವೇ ಇವನಿಗೆ ಉಪಯೋಗಿಸಲ್ಪಟ್ಟಿರುವುದು. ಒಂ ದು ಜನಸಮೂಹದಲ್ಲಿ ಒಬ್ಬನುಮಾತ್ರ ಕೊಡೆಯನ್ನು ಹಿಡಿದಿದ್ದರೂ, ಆ ಜನರೆಲ್ಲರಿಗೂ ಛತ್ರಿಗಳೆಂಬ ವ್ಯಪದೇಶವಿರುವಂತೆ ಇದನ್ನೂ ಗ್ರಹಿಸಬೇಕು.