ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದ್ರಾಮಾಯಣವ [ಸರ್ಗ, ೪೧, ಬೃಹಸ್ಪತಿಯೂ, ಬುಧನೂ, ಇನ್ನೂ ಇತರಗ್ರಹಗಳೂ ಕೂರದೃಷ್ಟಿ ಗಳೊಡನೆ ವಕ್ರಗತಿಯುಳ್ಳವುಗಳಾಗಿ, ಚಂದ್ರನೊಡಗೂಡಿದುವು. ನಕ ತ್ರಗಳೂ, ಗ್ರಹಗಳೂ ಕಾಂತಿಹೀನವಾಗಿದ್ದುವು. * ಇಕ್ಷಾಕುದೇಶಕ್ಕೆ ಪ್ರಧಾನನಕ್ಷತ್ರಗಳಾದ ವಿಶಾಖೆಗಳು, ಹೊಗೆಸುತ್ತಿದಂತೆ ಮಲಿನವಾಗಿ ಕಾಣುತಿದ್ದುವು. ಮಹಾಮೇಘಪರಂಪರೆಯಿಂದ ಕೂಡಿದ ಬಿರುಗಾಳಿಯು ಬೀಸಿದಾಗ ಸಮುದ್ರವು ಉಲ್ಲೋಲಕಲ್ಲೋಲವಾಗಿ ಉಕ್ಕಿಬರುವಂತೆ, ಆ ಅಯೋಧ್ಯಾನಗರವೆಲ್ಲವೂ ಕ್ಷಣಮಾತ್ರದಲ್ಲಿ ಕದಲಿಹೋಯಿತು. ಮ ಹಾಂಧಕಾರವು ಕವಿದಂತೆ ದಿಕ್ಕುಗಳೆಲ್ಲವೂ ಕತ್ತಲೆ ಕವಿದಿದ್ದುವು. ಆಕಾಶ ದಲ್ಲಿ ಒಂದು ಗ್ರಹವಾಗಲಿ, ಒಂದುನಕ್ಷತ್ರವಾಗಲಿ ಮಿನುಗುತ್ತಿರಲಿಲ್ಲ. ಪುರಜ ನರೆಲ್ಲರೂ ಆಕಸ್ಮಿಕವಾದ ಈ ಮಹಾವ್ಯಸನದಲ್ಲಿ ಮುಳುಗಿಹೋಗಿದ್ದರು. ಊಟದಲ್ಲಿಯಾಗಲಿ, ಆಟದಲ್ಲಿಯಾಗಲಿ ಒಬ್ಬ ನಾದರೂ ಮನಸ್ಸು ಕೊಡಲಿಲ್ಲ. ಒಬ್ಬೊಬ್ಬರೂ ದುಃಖದಿಂದ ನಿಟ್ಟುಸಿರನ್ನು ಬಿಡುತಿದ್ದರು. ಒಬ್ಬೊಬ್ಬರೂ ದಶರಥನ ದುರವಸ್ಥೆಯನ್ನು ನೋಡಿ ಸಂಕಟಪಡುತಿದ್ದರು. ಒಬ್ಬೊಬ್ಬರೂ ಬೀದಿಯಲ್ಲಿ ನಿಂತು ಕಣ್ಣೀರುಸರಿಸುತಿದ್ದರು. ಯಾವನೊಬ್ಬನ ಮುಖದಲ್ಲಿ ಯೂ ಸಂತೋಷಚಿಕ್ಕ ವೇ ಕಾಣದೆ, ಪ್ರತಿಯೊಬ್ಬರೂ ವ್ಯಸನದಲ್ಲಿ ಮು ಳುಗಿದ್ದರು. ಮನುಷ್ಯರ ದುಃಖವು ಹಾಗಿರಲಿ!ಗಾಳಿಯೂ ತಂಪಾಗಿ ಬೀಸು ತಿರಲಿಲ್ಲ. ಚಂದ್ರನಲ್ಲಿ ಸ್ವಲ್ಪವಾದರೂ ಸೌಮ್ಯತೆಯೇ ತೋರಲಿಲ್ಲ. ಸತ್ಯ ನಿಗೆ ಸ್ವಾಭಾವಿಕವಾಗಿದ್ದ ತಾಪವೂ ಅಡಗಿ ಹೋಯಿತು.ಜಗತ್ತೆಲ್ಲವೂ ತಮ್ಮ ತಮ್ಮ ಸ್ವಾಭಾವಿಕಸ್ಥಿತಿಯನ್ನು ಬಿಟ್ಟು ಕದಲಿಹೋದುವು. ಎಳಮಕ್ಕಳೂ ಡ ತಾಯಿಯಹಾಲನ್ನು ಕುಡಿಯಲೊಲ್ಲದೆಹೋದುವು.ವಿಶೇಷವಾದ ಪಪ್ಪ ರಾನುರಾಗವುಳ್ಳ ಗಂಡಹೆಂಡಿರೂ ಒಬ್ಬರನ್ನೊಬ್ಬರು ಆದರಿಸುತ್ತಿರಲಿಲ್ಲ. ಆ

  • ವಿಶಾಖಾನಕ್ಷತ್ರದಲ್ಲಿ ಹುಟ್ಟಿದ ಸೂರನೇ ಇಕ್ಷಾಕುವಂಶಕ್ಕೆ ಮೂಲಭೂತ ನಾದುದರಿಂದಲೂ, ಆ ವಂಶದಲ್ಲಿ ಇಕ್ಷಾಕುವು ಹುಟ್ಟಿರುವುದರಿಂದಲೂ, ಅದಕ್ಕೆ ಆ

ಕುಕುಲನಕ್ಷತ್ರವೆಂದು ಪ್ರಸಿದ್ದಿಯು, ಇದು ಹೊಗೆಯಾಡುವಂತೆ ಮಲಿನವಾಗಿ ಕಂಡುದರಿಂದ, ರಾಜನಿಗೆ ಸಂಭವಿಸಬಹುದಾದ ಮರಣವು ಸೂಚಿತವಾಗುವುದೆಂದು ಗ್ರಹಿಸಬೇಕು,