ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೨೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೫೬೦ ಶ್ರೀಮದ್ರಾಮಾಯಣವು ಸರ್ಗ, ೪೨, ಬಂದು ನಿಂತಳು. ಇಷ್ಟರಲ್ಲಿ ನೀತಿಜ್ನಾಗಿಯೂ, ಧಾರಿಕನಾಗಿಯೂ, ಸದಾಚಾರಸಂಪನ್ನ ನಾಗಿಯೂ ಇರುವ ದಶರಥನು, ಸ್ವಲ್ಪ ಮಟ್ಟಿಗೆ ಪ್ರಜ್ಞೆ ಹೊಂದಿ,ತನ್ನ ಎಡಪಕ್ಕದಲ್ಲಿ ನಿಂತಿದ್ದ ಕೈಕೇಯಿಯನ್ನು ನೋಡಿ ಕೋಪದಿಂದ (ಎಲೆದುಷ್ಯ'ನೀನು ನನ್ನ ಮೈಯ್ಯನ್ನು ಮುಟ್ಟಬೇಡ! ನಿನ್ನನ್ನು ಕಣ್ಣೆತ್ತಿನೋ ಡುವುದಕ್ಕೂ ನನಗೆ ಇಷ್ಟವಿಲ್ಲ!ನೀನು ನನಗೆ ಹೆಂಡತಿಯೂಅಲ್ಲ! ನಿಗಗೆ ನಾನು ಗಂಡನೂ ಅಲ್ಲ! ನಿನಗೂ ನನಗೂ ರಕ್ತಸಂಬಂಧವೇ ಇಲ್ಲವೆಂದು ತಿಳಿ ! ನಿನ್ನ ವಿಷಯವು ಹಾಗಿರಲಿ, ನಿನ್ನ ನಾ ಶ್ರಯಿಸಿ ಜೀವಿಸುತ್ತಿರುವ ಪುರಜನರ ಭಾಗ ಕ್ಕೂ ನಾನಿಲ್ಲ ! ನನ್ನ ಭಾಗಕ್ಕೂ ಅವರಿಲ್ಲ ! ಕೇವಲ ಸ್ವಾರ್ಥಪರಳಾಗಿ ಧರ ಮಾರ್ಗವನ್ನು ಬಿಟ್ಟಿರತಕ್ಕ ನಿನ್ನನ್ನು ನಾನು ತೊರೆದುಬಿಟ್ಟೆನೆಂದೇ ತಿಳಿ ! ಅಗ್ನಿ ಸಾಕ್ಷಿಕವಾಗಿ ಕೈಹಿಡಿದವಳನ್ನು ಹೇಗೆ ತೊರೆಯಬಲ್ಲೆನೆಂದು ನೀನು ಶಂಕಿಸಬೇಡ ? ನಿನ್ನನ್ನು ಕೈಹಿಡಿದು ನಿನ್ನೊಡಗೂಡಿ ಅಗ್ನಿ ಯನ್ನು ಪ್ರದಕ್ಷಿ ಮಾಡಿರುವೆನಾದರೂ, ಆ ಸಂಬಂಧವನ್ನೂ ಈಗ ತೊರೆದುಬಿಟ್ಟೆನು. ಆದ ರಿಂದನುಭವಿಸಬೇಕಾದ ಐಹಿಕಾಮುಷ್ಮಕಫಲಗಳಲ್ಲಿಯೂ ನನಗೆ ಅಕ್ಕರೆ ಯಿಲ್ಲ!ಭರತನು ಅಕ್ಷಯವಾದ ಈ ರಾಜ್ಯವನ್ನು ಪಡೆದು ಸ್ಟೇಚ್ಛೆಯಾಗಿ ಸಂ ತೋಷಿಸುವುದೇ ನಿಜವಾದರೆ, ಆತನು ಇನ್ನು ಮೇಲೆ ತಂದೆಯಾದ ನನಗೆ ಮಾಡಬೇಕಾದ ಜಲತಕ್ಷಣಾಧಿಕಾರಿಗಳನ್ನೂ ನಡೆಸಬೇಕಾದುದಿಲ್ಲ. ಆಧ ವಾ ಒಂದುವೇಳೆ ಅವನು ಅದನ್ನು ನಡೆಸಿದರೂ ಅದು ನನಗೆ ಸೇರದು” ಎಂದನು. ಆಗ ಕೌಸಲ್ಯಯು ದುಃಖಿತಳಾಗಿ ಧೂಳಿನಿಂದ ಮಲಿನವಾದ ದೇಹವುಳ್ಳ ಆ ರಾಜನನ್ನು ಮೇಲಕ್ಕೆತ್ತಿ, ಆತನನ್ನು ಕೈಹಿಡಿದು ಕರೆದುಕೊಂ ಡು ಹಿಂತಿರುಗಿ ಹೋದಳು. ದಶರಥನಾದರೋ ತಾಪಸವೇಷವನ್ನು ಹಾಕಿಕೊಂಡಿದ್ದ ರಾಮನನ್ನು ಆಗಾಗ ಸ್ಮರಿಸಿಕೊಂಡು, ಬ್ರಹ್ಮಹತ್ಯೆಯನ್ನು ಮಾಡಿದವನಂತೆಯೂ, ಬೆಂಕಿಯನ್ನು ಕೈಯಿಂದ ಮುಟ್ಟಿದವನಂತೆಯೂಸಂ ಕಟದಿಂದ ಕೊರಗುತ್ತಿದ್ದನು. ರಾಮನ ರಥವು ಹೋದ ದಾರಿಯನ್ನೇ ಆಗಾ ಗ ತಿರುಗಿತಿರುಗಿ ನೋಡುತ್ತಿದ್ದನು. ಗ್ರಹಣಹಿಡಿದ ಸೂರನಂತೆ ರೂಪುಗೆ ಟೈವನಾಗಿ, ತನ್ನ ಪ್ರಿಯಪುತ್ರನನ್ನೇ ಸ್ಮರಿಸಿಕೊಂಡು ಅಳುತಿದ್ದನು.ಆಮೇ ಲೆ ರಾಮನು ಪಟ್ಟಣದ ಎಲ್ಲೆಯನ್ನು ದಾಟಿಹೋದನೆಂಬ ಸುದ್ದಿಯನ್ನು ಕೇಳಿ