ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೬೧ ಸರ್ಗ, ೪೨} ಅಯೋಧ್ಯಾಕಾಂಡವು. ದೊಡನೆ ಮಹಾಸಂಕಟದಿಂದ ಅಯ್ಯೋ! ನನ್ನ ಮುದ್ದು ಮಗನನ್ನು ಕರೆದು ಕೊಂಡುಹೋದ ಕುದುರೆಗಳ ಹೆಜ್ಜೆಯ ಗುರುತುಗಳನ್ನು ಮಾತ್ರ ನೋ ಡಬೇಕಾಗಿ ಬಂದಿತೆ! ಇನ್ನು ಮಹಾತ್ಮನಾದ ರಾಮನನ್ನು ಕಾಣುವುದೆಲ್ಲಿ ? ಹಾಕವೆ! ಉತ್ತಮವಾದ ಚಂದನವನ್ನು ಲೇಪಿಸಿಕೊಂಡು, ಅನೇಕ ಯರು ಸುತ್ತಲೂ ನಿಂತು ಚಾಮರವನ್ನು ಬೀಸುತ್ತಿರಲು, ಸುಪ್ಪತ್ತಿಗೆಯಮೇ ಲೆ ಸುಖವಾಗಿ ಮಲಗತಕ್ಕ ರಾಮನು, ಈಗ ಎಲ್ಲಿಯೋ ಒಂದುಸ್ಥಳದಲ್ಲಿ ಮ ರದಕೆಳಗೆ ಕಟ್ಟಿಗೆಯನ್ನಾಗಲಿ, ಅಥವಾ ಕಲ್ಲನ್ನಾಗಲಿ ತಲೆಗಿಟ್ಟುಕೊಂಡು ಮಲಗಬೇಕಾಗಿರುವುದಲ್ಲಾ ! ಹೀಗೆ ಮಲಗಿದ್ದು ಬೆಳಗಾದಮೇಲೆ ಹಾಸಿಗೆ ಯಿಂದೇಳುವಾಗ, ಗಿರಿನದಿಗಳ ಪಾರ್ಶ್ವದಲ್ಲಿ ಮಲಗಿದ್ದು ಮೇಲೇಳುವ ಮದ ದಾನೆಯಂತೆ, ಮಣಿ ನಿಂದ ಮಲಿನವಾದ ಮೆಯುಳ್ಳವನಾಗಿ, ಆತನು ಆ ತಿಕಾರ್ಪಣ್ಯದಶೆಯಲ್ಲಿ ನಿಟ್ಟುಸಿರನ್ನು ಬಿಡುತ್ತಾ ಹೊರಟುಬರುತ್ತಿದ್ದರೆ, ಈ ರ್ಫುಬಾಹುವಾದ ಆತನನ್ನು ನೋಡಿ ಕಾಡುಜನರೆಲ್ಲರೂ, ಈತನು ಲೋಕನಾ ಥನೆಂಬುದನ್ನರಿಯುವರೆ?ಅನಾಥನೆಂದೇ ಭಾವಿಸುವರು. ಇದರಲ್ಲಿ ಸಂದೇಹ ವೇ ಇಲ್ಲ. ಜನಕರಾಜನ ಪ್ರಿಯಪುತ್ರಿಯಾದ ಸೀತೆಯಾದರೋ ಸುಖದಿಂದ ಲೇ ಬಳೆದವಳು.ಕಷ್ಟವೆಂಬುದನ್ನು ಕಂಡವಳೇ ಅಲ್ಲ.ಅಂತವಳು ಈಗ ಕಲ್ಲು ಮುಳ್ಳುಗಳಿಂದ ತುಂಬಿದ ಕಾಡಿನಲ್ಲಿ ಸುತ್ತಬೇಕಾಗಿ ಬಂದಿರುವುದು. ಆಕೆಯು ಕಾಡೆಂಬುದನ್ನು ಕನಸಿನಲ್ಲಿಯೂ ಕಂಡವಳಲ್ಲ. ಆ ಘೋರಾರಣ್ಯವನ್ನು ಕಂಡ ಮಾತ್ರದಲ್ಲಿಯೇ ಬೆಚ್ಚಿಬಿಳುವಳು. ಇದರಮೇಲೆ ಅಲ್ಲಲ್ಲಿ ಕ್ರೂರಮೃಗಗಳು ಗರ್ಜಿಸುತ್ತಿರುವುದನ್ನು ಕೇಳಿದರೆ, ಆಕೆಯ ಸ್ಥಿತಿಯನ್ನು ಹೇಳತಕ್ಕುದೇನು ? ಎಲೆ ಕೈಕೇಯಿ ! ನಿನ್ನ ಕೋರಿಕೆಯು ಕೈಗೂಡಿತೆ!ಗಂಡನಿಲ್ಲದ ಮುಂಡೆಯಾ ಗಿ ನೀನೇ ರಾಜ್ಯವನ್ನಾಳು!ಹೇಗಿದ್ದರೂ ಪುರುಷಶ್ರೇಷ್ಠನಾದ ಆರಾಮವನ್ನು ಬಿಟ್ಟು ನನ್ನ ಜೀವವು ನಿಲ್ಲಲಾರದು!” ಎಂದು ಗಟ್ಟಿಯಾಗಿ ಗೋಳಿಡುತ್ತಾ, ತನ್ನ ಅನುಚರರೊಡಗೂಡಿ, * ಬಂಧುಮರಣಕ್ಕಾಗಿ ಸ್ನಾನಮಾಡಿ ಸ್ಮಶಾ

  • ಇಲ್ಲಿ 'ಅಪಸ್ಸಾತ ಇವರಿಷ್ಟಂ ಪ್ರವಿವೇಶ ಪುರೋತ್ತಮಂ” ಎಂದು ಮೂಲವು. ಇಲ್ಲಿ ಮೃತಸ್ನಾನವನ್ನು ಮಾಡಿದವರಂತೆ ಪಟ್ಟಣವನ್ನು ಪ್ರವೇಶಿಸಿದನೆಂದು ಹೇಳಲ್ಪಟ್ಟಿತಲ್ಲವೆ ? ರಾಮನು ಜೀವವಂತನಾಗಿರುವಾಗಲೇ ಆತನನ್ನು ದಾರಿಕಳುಹಿಸಿ