ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೪೨] ಅಯೋಧ್ಯಾಕಾಂಡವು. ೫೬ ಹೋಗಿ, ಕೌಸಲ್ಯಯ ಅಂತಃಪುರದಲ್ಲಿಬಿಟ್ಟರು. ಅಲ್ಲಿ ಹಾಸಿಗೆಯಮೇಲೆ ಮಲ ಗಿಸಿಟ್ಟರೂ ಆತನ ಮನಸ್ಸಿಗೆ ಸಮಾಧಾನವಿರಲಿಲ್ಲ! ತನ್ನ ಇಬ್ಬರುಮಕ್ಕಳೂ, ಸೊಸೆಯೂ ಬಿಟ್ಟು ಹೋದುದರಿಂದ, ಚಂದ್ರನಿಲ್ಲದ ಆಕಾಶದಂತೆ ಶೂನ್ಯವಾ ದ ಆ ಮನೆಯನ್ನು ನೋಡಿದೊಡನೆ ಆತನ ಮನಸ್ಸು ಮತ್ತಷ್ಟು ಕದಲಿ ತು. ತಡೆಯಲಾರದಷ್ಟು ಮಹಾಸಂಕಟವುಂಟಾಯಿತು ಆತನು ಎಷ್ಟೇ ವೀ ರವುಳ್ಳವನಾಗಿರಾಜಾಧಿರಾಜನೆನಿಸಿಕೊಂಡಿದ್ದರೂ, ಕೇವಲಸಿಮಾತ್ರಳಂತ ಎರಡುತೋಳುಗಳನ್ನೂ ಮೇಲಕ್ಕೆತ್ತಿ (೧ ಹಾರಾಮಾ' ನನ್ನನ್ನು ಬಿಟ್ಟು ಹೋ ದೆಯಾ?”ಎಂದು ಗಟ್ಟಿಯಾಗಿ ಕೂಗಿಕೊಳ್ಳುತ್ತ(ಅಯ್ಯೋ!ರಾಮನು ಹಿಂತಿ `ರುಗಿ ಬಂದಮೇಲೆ, ಯಾರು ಆತನನ್ನು ಕಣ್ಣಾರೆನೋಡಿ, ಬಿಗಿಯಾಗಿ ಅಪ್ಪಿ ಕೊಂಡು ಆನಂದಿಸುವರೋ ಅವರೇ ಸುಖಿಗಳು. ಆದುವರೆಗೆ ಬದುಕಿರತಕ್ಕೆ ವರೇ ಮಹಾಭಾಗ್ಯಶಾಲಿಗಳು. ಈ ಮಹಾಭಾಗ್ಯವು ಯಾವ ಪುಣ್ಯಶಾಲಿಗಳಿ ಗೆ ಲಭಿಸುವುದೋ?ನನಗಂತೂ ಆ ಭಾಗ್ಯವಿರದು”ಎಂದು ಆಳುತ್ತಿದ್ದನು. ಹೀ ಗೆ ತನಗೆ ಪ್ರಳಯಕಾಲದ ರಾತ್ರಿಯಂತಿರುವ ಆ ರಾತ್ರಿಯನ್ನು ಬಹುಸಂಕಟ ದಿಂದ ಕಳೆಯುತ್ತ, ಅರ್ಧರಾತ್ರಿ ಸಮಯದಲ್ಲಿ ಕೌಸಿಯನ್ನು ನೋಡಿ ಎಲೆ “ಕೌಸಲ್ಯ! ಈಗ ನನಗೆ ಕಣೇ ಕಾಣುವುದಿಲ್ಲ. ರಾಮನನ್ನು ಹಿಂಬಾಲಿಸಿ ಹೊ

  • ಇದಕ್ಕೆ ರಾಮಂ ಮೇsನು ತಾ ದೃಷ್ಯರದ್ಯಾಪಿ ನ ನಿವರ್ತತೇ ನಶ್ವಾಪಶ್ಯಾಮಿ ಆಸಿ ಸಾಧು ಮಾ ಪಾಣಿನಾಸ್ಪೃಶ!” ಎಂಬುದೇ ಮೂಲಶೋಕವು. ಸಮುದ್ರದ ಅಲೆಯ ಸೆಳೆತಕ್ಕೆ ಸಿಕ್ಕಿದ ಪದಾರಗಳು ಹೇಗೆ ಹಿಂತಿರುಗಿಬಾರವೋ, ಹಾಗೆ ಗುಣಸಮು ದ್ರನಾದ ದಾಮನಿಂದ ಸೆಳೆಯಲ್ಪಟ್ಟ ನನ್ನ ನೇತೇಂದ್ರಿಯವು ಇನ್ನೂ ಹಿಂತಿರುಗಿ ಬಾರಲಿಲ್ಲ ವೆಂದು ಭಾವವು (ನ ತಾಪಶ್ಯಾಮಿ ಕ್ಸಲೈ) ರಾಮನ ದರ್ಶನವು ದುರ್ಲಭವಾದುದ ರಿಂದ ಆತನಿಗೆ ಹೆತ್ತ ತಾಯಿಯಾದ ನಿನ್ನನ್ನಾದರೂ ನೋಡಿ ಮನಸ್ಸಿಗೆ ಆಪ್ಯಾಯನ ವನ್ನು ತಂದುಕೊಳ್ಳುವೆನೆಂದರೆ, ಅದಕ್ಕೂ ಅವಕಾಶವಿಲ್ಲದಿದೆ. ಇದುವರೆಗೆ ಕೈಕೇಯಿ ಮುಖದರ್ಶನದಿಂದುಂಟಾದ ಮಹಾಪಾತಕವನ್ನು ನೀಗುವುದಕ್ಕಾಗಿ, ನಿನ್ನ ಮುಖವನ್ನು ನೋಡಬೇಕೆಂದು ಆತುರಪಡುತಿದ್ದ ನನಗೆ ಅದೂ ಲಭಿಸದೇ ಹೋಯಿತೆಂದು ಭಾವವ. (ಸಾಧು ಮಾರಾಣಿನಾಸ್ಪೃಶ)ನನಗೆ ಈಗ ನೇತೇಂದ್ರಿಯವಂತೂ ಇಲ್ಲವೆಂಬುದು ಸ್ಪಷ್ಟ .ವಾಯಿತು, ಸ್ಪರ್ಶೇಯವಾದರೂ ಇರುವುದೋ ಇಲ್ಲವೋ ಎಂಬುದನ್ನು ತಿಳಿದು ಕೊಳ್ಳಬೇಕಾಗಿರುವುದರಿಂದ, ನೀನು ನನ್ನನ್ನು ಸ್ಪರ್ಶಿಸು"ಎಂದು ಹೇಳಿದುದಾಗಿಯೂ,