ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೧, ಅಯೋಧ್ಯಾಕಾಂಡವು. ೨೮೫ ಯನ್ನು ಹೊಂದಿರುವಂತೆಯೇ, ಆಿತರಕ್ಷಣವೆಂಬ ತನ್ನ ಮುಖ್ಯವ್ರತನ ನ್ಯೂ ಕೈಕೊಂಡು, ಇತರರಿಂದ ಇಓರಿಸುವುದಕ್ಕಸಾಧ್ಯವಾದ ಪರಾಕ್ರಮ ವುಳ್ಳವನಾಗಿ, ದಿಕಾಲಕರಿಗೆ ಸಮಾನನಾಗಿದ್ದ ಅರಾಮನನ್ನು ಭೂಮಿಯು (ಭೂಜನವು ತನಗೆ ನಾಥನನ್ನಾಗಿ ಅಪೇಕ್ಷಿಸಿತು. ಆಗ ದಶರಥನಿಗೆ,ತನ್ನ ಮ ಗನಾದ ರಾಮನು ಹೀಗೆ ಎಣೆಯಿಲ್ಲದ ಗುಣಾತಿಶಯಗಳಿಂದ ಕೂಡಿರುವುದ ನ್ಯೂ,ಇದುವರೆಗೆ ತಾನು ಶತ್ರುಗಳನ್ನು ನಿಗ್ರಹಿಸಿ ರಾಜ್ಯವನ್ನು ನಿಷ್ಕಂಟಕ ವಾಗಿಮಾಡಿ ರಾಜ್ಯಭಾರಮಾಡುತಿದ್ದುದರಿಂದ ಬಹಳವಾಗಿ ಬಳಲಿ ಬೇಸತ್ತಿ ರುವುದನ್ನೂ ನೋಡಿ, ಮನಸ್ಸಿನಲ್ಲಿ ಒಂದುವಿಧವಾದ ಆಲೋಚನೆಯು ಹುಟ್ಟಿತು. ಬಹುಕಾಲದಿಂದ ಬಾಳಿ ಬದುಕಿ ಮುದುಕನಾದ ಆತನಿಗೆ ತಾನು ಬದುಕಿರುವಾಗಲೇ ರಾಮನನ್ನು ರಾಜ್ಯದಲ್ಲಿರಿಸಬೇಕೆಂಬ ಶಂಕೆಯುಂಟಾಯಿ ತು, ಅದೇ ಚಿಂತೆಯಿಂದ ಅವನು. 14 ನನ್ನ ಮೋಹದ ಕುಮಾರನಾದ ರಾಮನು ರಾಜ್ಯವಾಳುತ್ತಿರುವುದನ್ನು ಕಣ್ಣಿನಿರಿಗೆ ನೋಡಿ ಸಂತೋಷಿಸುವ ಭಾಗವು ನನಗೆ ಎಂದಿಗೆ ಲಭಿಸುವುದೋ? ರಾಮನಾದರೆ ಲೋಕದ ಜನ ಗಳ ಶ್ರೇಯೋಭಿವೃದ್ಧಿಯನ್ನೆ ಯಾವಾಗಲೂ ಹಾರೈಸತಕ್ಕವನು.ಪ್ರಾಣಿಗ ಇಲ್ಲಿ ಬಹಳ ದಯೆಯುಳ್ಳವನು. ಮಳೆಯನ್ನು ಸುರಿಸುತ್ತಿರುವ ಮೇವುದಂತೆ ವಿಶೇಷವಾದ ಔವಾದ್ಯಗುಣವುಳ್ಳವನಾಗಿಯೂ, ಸಂತಾಪಹಾರಕನಾಗಿಯೂ ಇರುವುದರಿಂದ, ಪ್ರಜೆಗಳಿಗೆ ನನ್ನ ಸ್ಥಿರುವುದಕ್ಕಿಂತಲೂ ಆತನಲ್ಲಿ ವಿಶ್ವಾಸವು ಹೆಚ್ಚಾಗಿರುವುದು. ಆತನು ಪರಾಕ್ರಮದಲ್ಲಿ ಇಂದ್ರಯಮರಂತೆಯೂ,ಬು ಯಲ್ಲಿ ಬೃಹಸ್ಪತಿಯಂತೆಯೂ, ದೈ ದಲ್ಲಿ ಬೆಟ್ಟದಂತೆಯೂ ಇರುವನು. ನನಗಿಂತಲೂ ಹೆಚ್ಚು ಗುಣಾತಿಶಯವುಳ್ಳವನು. ಹೀಗೆ ಪ್ರಭುತ್ವಕ್ಕೆ ತಕ್ಕ ಸ ಮಸ್ತಕಲ್ಯಾಣಗುಣಗಳನ್ನೂ ಹೊಂದಿರುವ ಆ ರಾಮನಿಗೆ, ಈ ವಯಸ್ಸಿ ನಲ್ಲಿಯೇ ಸಮಸ್ತಭೂಭಾರವನ್ನೂ ಎಹಿಸಿ, ಅದನ್ನು ನೋಡಿ ಸಂತೋಷಿಸಿದ ಮೇಲೆ, ಪರಲೋಕವನ್ನು ಹೊಂದತಕ್ಕ ಭಾಗ್ಯವು ನನಗೆ ಲಭಿಸುವುದೇ?” ಸಮೀಪದಲ್ಲಿ ಸೀತಾರೂಪವಾದ ಲಕ್ಷ್ಮಿಯೊಡಗೂಡಿದವನಾಗಿರುವವನೆಂದರನ, ಇಂತ ಹ ರಾಮನನ್ನು (ಮೇದಿನೇ) ಭೂಮಿಯು (ನಾಥಂ ಆರಾಮಯತ) ಲಕ್ಷಂಶಛತ ಯಾದ ಸೀತೆಯಂತೆ, ತಾನೂ ಆತನ ಕಂಠದಲ್ಲಿ ಪುಷ್ಪಮಾಲಿಕೆಯನ್ನು ಹಾಕಿ ವರಿಕ ಬೆಳಸಿದಳೆಂದು ಭಾವವು,