ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೩೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೫೬೭ ಸರ್ಗ, ೪೩.] ಅಯೋಧ್ಯಾಕಾಂಡವು. ದ್ದರೂ ಮೇಲಾಗಿತ್ತು-ಇದೆಲ್ಲವನ್ನೂ ಬಿಟ್ಟು ಆತನನ್ನು ಕಾಡಿಗೆ ಕಳುಹಿಸಬೇ ಕೆಂದೇ ಹಟಹಿಡಿದಳಲ್ಲವೇ? ಈ ಪತ್ರವಿರಹವನ್ನನುಭವಿಸುವುದಕ್ಕಿಂತಲೂ ರಾ ಮನು ಇಲ್ಲಿ ಭಿಕ್ಷೆಯೆತ್ತಿ ಜೀವಿಸುತ್ತಿದ್ದರೆ, ಆ ಅವಮಾನವನ್ನಾದರೂ ನಾನು ಸಹಿಸಿಕೊಳ್ಳುತಿದ್ದೆನು. ಆಗಾಗ ಆತನನ್ನು ಕಣ್ಣಿನಿಂದಲಾದರೂ ನೋಡಬ ಹುದಾಗಿತ್ತು. ಆಹಿತಾಗ್ನಿ ಯಾದವನು ಪ್ರತಿದಿವಸವೂ ದೇವತೆಗಳಿಗೆ ಕೊಡ ಬೇಕಾದ ಹವಿರ್ಭಾಗವನ್ನು ತಪ್ಪಿಸಿ, ಅದನ್ನು ರಾಕ್ಷಸರಿಗೆ ಕೊಡುವಂತೆ, ರಾಮನಿಗೆ ಸೇರಬೇಕಾದ ರಾಜ್ಯವನ್ನು ನೀನು ಕೈಕೇಯಿಗೆ ಕೊಟ್ಟುಬಿಟ್ಟೆ ! ಆನೆಯಂತೆ ಗಂಭೀರವಾದ ನಡೆಯುಳ್ಳವನಾಗಿ, ಮಹಾವೀರನಾಗಿ, ಆಜಾ ನುಬಾಹುವಾಗಿ, ಧನುರ್ಧಾರಿಗಳಲ್ಲಿ ಮೇಲೆನಿಸಿಕೊಂಡ ಆ ರಾಮನೂಕೂಡ, ತನ್ನ ಹೆಂಡತಿಯನ್ನೂ ತಮ್ಮನನ್ನೂ ಸಂಗಡಕರೆದುಕೊಂಡು, ಕಾಡುಪಾ ಲಾಗಿ ಹೊರಟುಹೋದನು. ಆ ಕೈಕೇಯಿಯ ಮಾತಿಗೆ ಮರುಳಾಗಿ, ನೀನೂ ಹಿಂದುಮುಂದನ್ನು ತಿಳಿಯದೆ, ಕಾಡೆಂಬುದನ್ನೆ ಕಂಡರಿಯದ ಆಸೀತೆಯನ್ನೂ, ರಾಮಲಕ್ಷ್ಮಣರನ್ನೂ ಹೀಗೆ ಭಯಂಕರವಾದ ದುಃಖಕ್ಕೆ ಗುರಿಮಾಡಿದೆಯ ಲ್ಲವೆ! ಇನ್ನು ಅವರ ಗತಿಯೇನು?ಅವರೆಲ್ಲರೂ ಬಹಳ ಎಳಪ್ರಾಯದದರು- ಸ ಮಸ್ತ ಭೋಗಫಲಗಳನ್ನೂ ದ್ವೇಚ್ಛೆಯಾಗಿ ಅನುಭವಿಸತಕ್ಕ ಈ ಕಾಲದಲ್ಲಿ ಸತ್ತಮವಾದ ಈ ಭೋಗಸಾಮಗ್ರಿಗಳೆಲ್ಲವನ್ನೂ ಬಿಟ್ಟು, ಕಾಡಿನಲ್ಲಿ ಗೆಡ್ಡೆಗೆಣಸುಗಳನ್ನೂ, ಹಣ್ಣುಗಳನ್ನೂ ತಿಂದು ಕಾರ್ಪಣ್ಯದಿಂದ ಜೀವಿಸ. ಬೇಕೆಂದರೆ, ಅವರಿಂದ ಹೇಗೆ ತಾನೇ ? ರೊಡಗೂಡಿ ಹಿಂತಿರುಗಿ ಇಲ್ಲಿಗೆ ಬಂದಮೇಲೆ ನನ್ನ ದುಃಖವೆಲ್ಲವೂ ಸೀಗಿ, ಅವ ರನ್ನು ಕಣ್ಣಾರೆ ನೋಡಿ ಆನಂದಿಸತಕ್ಕ ಒಳ್ಳಕಾಲವು ಈಗಲೇ ನನಗೆ ಲಭಿ ಸಬಾರದೆ? ಮಲಗಿದ್ದು ಎದ್ದು ಬಂದವರಂತೆ ಆ ವೀರರಿಬ್ಬರೂ ಕಾಡಿನಿಂದ ಸುಖವಾಗಿ ಹಿಂತಿರುಗಿ ಅಯೋಧ್ಯೆಯ ಸಮೀಪಕ್ಕೆ ಬಂದುದನ್ನು ಕೇಳಿ ಈ ಪುರಜನರೆಲ್ಲರೂ ಸಂತೋಷದಿಂದ ಮಂಗಳಧ್ವಜಗಳನ್ನು ಕಟ್ಟಿ, ಈ ಪಟ್ಟಣ ವನ್ನು ಅಲಂಕರಿಸುವ ಕಾಲವು ಎಂದಿಗೆ ಬರುವುದೋ?ಕಾಡಿನಿಂದ ಹಿಂತಿರುಗಿ ಬಂದ ರಾಮಲಕ್ಷ್ಮಣರನ್ನು ನೋಡಿ ಈ ಪುರಜನರೆಲ್ಲರೂ ಪರಕಾಲದಲ್ಲಿ ಸ ಮುದ್ರವು ಹೇಗೋ ಹಾಗೆ ಸಂತೋಷದಿಂದುಬ್ಬುವ ಕಾಲವು ಯಾವಾಗ ರಾಮನು ಸೀತಾಲಕ , ಅಲk