ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೩೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೫೬೮ ಶ್ರೀಮದ್ರಾಮಾಯಣವು ಸರ್ಗ, ೪೩ ಪ್ರಾಪ್ತವಾಗುವುದೋ !? ಮಹಾಬಾಹುವಾದ ಆ ವೀರನು ಧೇನುವಿನೊಡ ಗೂಡಿದ ವೃಷಭದಂತೆ ರಥದಲ್ಲಿ ಸೀತೆಯನ್ನು ಮುಂದಿಟ್ಟುಕೊಂಡು, ಈ ಪಟ್ಟಣವನ್ನು ಯಾವಾಗ ಪ್ರವೇಶಿಸುವನೋ? ವೀರನಾದ ನನ್ನ ಕುಮಾರನು ಪರಪ್ರವೇಶವನ್ನು ಮಾಡುವಾಗ, ರಾಜಬೀದಿಯಲ್ಲಿ ಸಾವಿರಾರುಜನರು. ಗುಂಪುಕೋಡಿ ಬಂದು, ಅವನಮೇಲೆ ಮಂಗಳಾರ್ಥವಾಗಿ ಅರಳುಗಳನ್ನು ಯಾ ವಾಗ ಚೆಲ್ಲುವರೋ?ಉತ್ತಮವಾದ ಕರ್ಣಕುಂಡಲಗಳನ್ನಿಟ್ಟು, ಮೇಲಾದ ಕತ್ತಿಯನ್ನೂ ಬಿಲ್ಲನ್ನೂ ಧರಿಸಿ, ಶಿಖರಗಳಿಂದ ಕೂಡಿದ ಎರಡುಬೆಟ್ಟಗಳಂತೆ ಮಹಾವೀರರಾದ ರಾಮಲಕಣರು ಯಾವಾಗ ಪುರಪ್ರವೇಶಮಾಡುವು ದನ್ನು ನಾನು ನೋಡುವೆನೋ? ಆ ರಾಮಲಕ್ಷ್ಮಣರು ಪುರಪ್ರವೇಶಮಾಡು ವಾಗ,ಮಂಗಳಾರ್ಥವಾಗಿ ಕನ್ಯಕೆ ಯರು ತಮಗೆ ತಂದುಕೊಡತಕ್ಕ ಪುಷ್ಪ ಮಾಲಿಕೆಗಳನ್ನೂ, ಬ್ರಾಹ್ಮಣರು, ತಂದುಕೊಡತಕ್ಕ ಫಲಗಳನ್ನೂ ಪ್ರೀತಿ ಯಿಂದ ಸ್ವೀಕರಿಸಿ, ಯಾವಾಗ ಸಂತೋಷದಿಂದ ಪುರಪ್ರದಕ್ಷಿಣೆಯನ್ನು ಮಾಡುವರೋ? ರಾಮನ ವಯಸ್ಸನ್ನು ನೋಡಿದರೆ ದೇವತೆಗಳಂತೆ ಕಾಣು ತಿರುವನಾದರೂ ಜ್ಞಾನದಲ್ಲಿ ವೃದ್ಧನಾಗಿರುವನು. ಧಮ್ಮಜ್ಞನಾದ ಆತನು ತನ್ನ ಬಾಲ್ಯಾವಸ್ಥೆಯನ್ನು ಈಗ ಕಳೆದುಬಿಟ್ಟಿದ್ದರೂ, ಮೂರು ವರ್ಷದ ಮಗುವಂತೆ ನನ್ನ ತೊಡೆಯಮೇಲೆ ಬಂದು ಕುಳಿತುನನ್ನಿಂದ ಯಾವಾಗ ಲಾ ಲಿಸಲ್ಪಡುವನೋ? ಎಲೆ ವೀರನೆ!ಇನ್ನು ನಾವು ಎಷ್ಟು ಪ್ರಲಾಪಿಸಿದರೇನು ? ನಾನು ಪೂಜನ್ಮದಲ್ಲಿ ಮಹಾಪಾಪಬುದ್ಧಿಯುಳ್ಳವಳಾಗಿ,ಎಳೇ ಮಕ್ಕಳು

  • ಇಲ್ಲಿ 'ಕದಾ ಸು ಮನಸಃ ಕನ್ಯಾ ದ್ವಿಜಾತೀನಾಂ ಫಲಾನಿಚ | ಪ್ರದಿಶಂತ: ಪರೀಂ ಕೃಷ್ಣಾಃ ಕರಿಷ್ಯಂತಿ ಪ್ರದಕ್ಷಿಣಂ” ಎಂದು ಮೂಲವು. ಈ ಮೂಲವನ್ನನುಸರಿಸಿಯೇ ಮೇಲಿನ ಅತ್ಯವು ಬರೆಯಲ್ಪಟ್ಟಿದೆ. ಆದರೆ ಗೋವಿಂದರಾಜೀಯದಲ್ಲಿ “ಪ್ರದಿಶಂತ್ಯ:” ಎಂದು ಪಾಠಾಂತರವನ್ನು ಮಾಡಿ, ಅದಕ್ಕೆ ಬೇರೆ ಅರವು ಹೇಳಲ್ಪಟ್ಟಿರುವುದು. ಹೇಗೆಂ ದರೆ 'ಕನ್ಯಾ ದ್ವಿಜಾತೀನಾಂ” ಎಂಬುದಕ್ಕೆ “ದ್ವಿಜಾತೀನಾಂ ಕನ್ಯಾ:” ಎಂದು ಅನ್ವಯ ಮಾಡಿ, ಬ್ರಾಹ್ಮಶಕನೈಯರೆಂದು ಕನ್ಯಕೆಯರನ್ನು ಕರ್ತೃಗಳನ್ನಾಗಿ ಗ್ರಹಿಸಬೇಕು. ಬ್ರಾಹ್ಮಣಕನ್ನೆಯರು ಸಪ್ನಫಲಗಳನ್ನು ಕೊಡುತ್ತ, ಸಂತೋಷದಿಂದ ಪಟ್ಟಣವನ್ನು ಯಾವಾಗ ಪ್ರದಕ್ಷಿಣಮಾಡುವರೋ ? ಎಂದರು. ಉತ್ಸವಕಾಲಗಳಲ್ಲಿ ಹೀಗೆ ಮಾ ಡುವುದು ಉತ್ತರದೇಶಸಂಪ್ರದಾಯವೆಂದು ವ್ಯಾಖ್ಯಾನಕರ್ತರ ಅಭಿಪ್ರಾಯವು.

.