ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೩೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೫೬೯ ಸರ್ಗ, ೪೪.] ಅಯೋಧ್ಯಾಕಾಂಡವು. ಹಾಲನ್ನು ಕುಡಿಯುವುದಕ್ಕೆ ಆತುರಪಡುತ್ತಿರುವಾಗ, ತಾಯಿಯ ಸ್ವನಗಳ ನ್ನು ಕುಯ್ಯುಹಾಕಿರಬಹುದು. ಇದರಲ್ಲಿ ಸ್ವಲ್ಪವೂ ಸಂದೇಹವಿರದು! ಎಲೈ ಪುರುಷಶ್ರೇಷ್ಟನೇ ! ಸಿಂಹವು,ಆಗಲೇ ಕರುಹಾಕಿದ ಹಸುವನ್ನು ಕಂಡೊಡ ನೆ ಅದರ ಕರುವನ್ನೆತ್ತಿಕೊಂಡು ಹೋದಂತೆ, ಮಹಾಪಾಪಿನಿಯಾದ ಕೈ ಕೇಯಿಯುನನ್ನನ್ನು ಪುತ್ರಹೀನೆಯನ್ನಾಗಿ ಮಾಡಿದಳು. ನಾನು ಬಹುಕಾಲದ ವರೆಗೆ ಮಕ್ಕಳಿಲ್ಲದೆ ಕೊನೆಗೆ ಈ ಒಬ್ಬ ಮಗನನ್ನು ಪಡೆದೆನು. ಆತನಾದರೋ ಲೋಕಪ್ರಸಿದ್ಧವಾದ ಸಮಕಲ್ಯಾಣಗುಣಗಳಿಂದಲೂ ಕೂಡಿದವನಾಗಿ, ಬಾಲ್ಯದಲ್ಲಿಯೇ ಸಮಸ್ಯಶಾಸ್ತ್ರಗಳನ್ನೂ ಓದಿಕಲಿತನು. ಅಂತಹ ಪತ್ರ ರತ್ನ ವನ್ನು ಬಿಟ್ಟು ನಾನು ಹೇಗೆ ಜೀವಿಸಿರಲಿ ? ಮಹಾಬಲಾಡ್ಯನಾದ ಆ ನನ್ನ ಪ್ರಿಯಪುತ್ರನನ್ನು ನಾನು ನೋಡದಿದ್ದರೆ ಎಂದಿಗೂ ಬದುಕಿರಲಾರೆ ನು. ದೈವವೂ ನನ್ನನ್ನು ಬದುಕಿಸಿರಲಾರದು. ಬೇಸಗೆಯಲ್ಲಿ ಅತಿಕ್ರೂರವಾದ ಕಿರಣಗಳನ್ನು ಪ್ರಸರಿಸಿ, ಈ ಭೂಮಿಯನ್ನು ಸುಡುತ್ತಿರುವ ಸೂನಂತೆ, ಪತ್ರವಿರಹದಿಂದುಂಟಾದ ಈ ಶೋಕಾಗ್ನಿ ಯು ನನ್ನ ದೇಹವನ್ನು ಬಲವಾಗಿ ಸುಡುತ್ತಿರುವುದು” ಎಂದಳು. ಇಲ್ಲಿಗೆ ನಾಲ್ವತ್ತು ಮೂರನೆಯಸರ್ಗವು. - --... ------- ......... . ++ ಸುಮಿತ್ರೆಯು ಕಸಿಯನ್ನು ಸಮಾಧಾನಪಡಿಸಿದುದು.++- ಹೀಗೆ ವಿಲಪಿಸುತ್ತಿರುವ ಕೌಸಿಯನ್ನು ನೋಡಿ ಧನ್ಮಜ್ಞಳಾ ದ * ಸುಮಿತ್ರೆಯು, ಆಕೆಯೊಡನೆ ಧರಯುಕ್ತವಾದ ಒಂದಾನೊಂದು

  • ಇದಕ್ಕೆ ಇದಂ ಧಕ್ಕೇ ಸ್ಥಿತಾ ಧರಂ ಸುಮಿತ್ರಾ ವಾಕ್ಯ ಮಬ್ರವೀತ್” ಎಂಬ , ದೇ ಮೂಲವು. ತಾರಾ ಮಂಡೋದರಿಯರಂತೆ ಸುಮಿತ್ರೆಯೂ ಪರತ್ವಜ್ಞಾನವುಳ್ಳವಳೆಂ ಬುದು ಸಂಪ್ರದಾಯಸಿದ್ದವಾದುದರಿಂದ, ಇಲ್ಲಿ ಸುಮಿತ್ರೆಯಮೂಲಕವಾಗಿ ಶ್ರೀರಾ ಮನ ಪರತ್ವವನ್ನು ಪ್ರಕಾಶಪಡಿಸುವರು. ಹೇಗೆಂದರೆ (ಥ ಸ್ಥಿತಾ) ಧರದಲ್ಲಿ ನೆಲೆ ಗೊಂಡವಳು. ಧರದಲ್ಲಿ ಎಂದರೆ, ಸಿದ್ಧರ ಸ್ವರೂಪನಾದ ರಾಮನಲ್ಲಿಯೇ ನಮ್ಮ ಮನ ಸುಳ್ಳವಳೆಂದು ಭಾವವು.ಅಥವಾ ಧರವೆಂದರೆ ಜನ್ಮಾಂತರಸುಕೃತದಲ್ಲಿ ನೆಲೆಗೊಂಡವ ಳಾಗಿ, ಆ ಸುಕೃತಶೇಷದಿಂದ, (ಧರ) ಸಮಸ್ತಧರಗಳಿಗೆ ನೆಲೆಯಾದ ರಾಮನ ಪರತ್ವವನ್ನು (ಅಬ್ರವೀತ್) ಹೇಳಿದಳು. (ಆಕ್ಕೇ ತವ ಶತ್ರ:) ಎಲೆ ಪೂಜ್ಯಳೆ! ನಿನ್ನ