ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೩೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


- ಶ್ರೀಮದ್ರಾಮಾಯಣವು (ಸರ್ಗ,೪೪, ಮಾತನ್ನಾಡುವಳು. “ ಅಮ್ಮ ಕೌಸಲ್ಯ ! ನಿನ್ನ ಮಗನು ಸಮಸ್ತ ಮಗನಾದವನು, (ಸ?) ಅಂತಹ ಪ್ರಸಿದ್ಧನಾದ, ಎಂದರೆ, ವೇದಾಂತಗಳಲ್ಲಿ ಪ್ರಸಿದ್ದ ನಾದ (ಪುರುಷೋತ್ತಮ:) ಸಾಕ್ಷಾನ್ನಾರಾಯನೇ ! ಹೇಗೆಂದರೆ (ಸದ್ಯುರ್ಯ ಕ:) ಅಂತರಸಾಧಾರಣೆಗಳಾಗಿಯೂ, ಅಸ೦ಖ್ಯೆಯಗಳಾಗಿಯೂ, ಅನವಧಿಕಾತಿಶಯ ಗಳಾಗಿಯೂ, ಓಶರುವ ಕಲ್ಯಾಣಗುಣಗಳಿಂದ ಕೂಡಿದದನು, ಸಾಕ್ಷಾತ್ಪರ ಮಾತ್ಮನೇ ಅವನೆಂದರು. ಇಲ್ಲಿ (ಸ:) ಎಂದು ಹೇಳಿರುವುದರಿಂದ, ವೇದಾಂತವೇದ್ಯ ನಾದ ಆ ಪುರುಷೋತ್ತಮನೇ ಇವನಲ್ಲದೆ, ಮನುಷ್ಯರಲ್ಲಿ ಶ್ರೇಷ್ಟನೆಂದು ಮಾತ್ರವೇ ಗ್ರಹಿಸಕೂಡದೆಂದೂ, ನೀನೂ ಆತನನ್ನು ನಿಜವಾಗಿ ಹೊಟ್ಟೆಯಲ್ಲಿ ಹುಟ್ಟಿದಮಗ ನೆಂದು ಭ್ರಾಂತಿಗೊಂಡು ಶೋಕಿಸುವುದನುಚಿತವೆಂದೂ ಸುಮಿತ್ರೆಯ ಭಾವವು, ಹಾಗೆ ರಾಮನೇ ಪರಮಪುರುಷನಾಗಿದ್ದ ಪಕ್ಷದಲ್ಲಿ, ಕರಪ್ರವಣನಾಗಿ ಪಿತೃವಚನಪರಿಪಾಲನಾದಿ. ಕರಗಳನ್ನು ನಡೆಸುತ್ತಿರುವುದೇಕೆ? ಎಂದರೆ, ಅದಕ್ಕೆ ಸಮಾಧಾನರೂಪವಾಗಿ ಮುಂ ದಿನ ವಾಕ್ಯಗಳನ್ನು ಹೇಳುವಳು. “ ಶಿಷ್ಯರಾಚರಿತೇ ಸಮ್ಯಕ್ ಶಶೃತ್ಯ ಫಲೋದಯೇ ರಾಮೋ ಧರೇತಶೆಷ್ಟೋ ನ ಸ ಶೋಚ್ಯ: ಕದಾಚನ” ಎಂದು ಮೂಲವು. (ಶಿಷ್ಮೆ ರಾಚರಿತೇ) ಎಂಬಲ್ಲಿ ಶಿಷ್ಯರಾದವರು ನಡೆಸತಕ್ಕುದೆಲ್ಲವೂ ಲೋಕಾನುಗ್ರಹಾರವಾಗಿರುವುವು. ಆದುದರಿಂದ ತಾನು ಪುರುಷೋತ್ತಮನಾಗಿ ನಿರ ಪೇಕ್ಷನಾಗಿದ್ದರೂ, ಶಿಷ್ಟಾಚಾರವಾದ ಕರಗಳಲ್ಲಿ ಪ್ರವಣನಾಗಿರುವುದು ಲೋಕಾನು. ಗ್ರಹಾರ್ಥವಾಗಿಯೇ ಹೊರತು ಬೇರೆಯಲ್ಲವೆಂದು ಭಾವವ. (ಪ್ರೇತ್ಯ ಫಲೋದಯ) ದಶರಥನಿಗೆ ಪಾರಲೌಕಿಕ ಫಲವನ್ನು ಸಾಧಿಸಿಕೊಡಬೇಕೆಂಬ ಉದ್ದೇಶದಿಂದಲೇ ತಾನು ಈ ಕೆಲಸಮಾಡುತ್ತಿರುವನೆಂದು ಭಾವವು (ಶ್ರೇಷ್ಠ:) ಲೋಕದಲ್ಲಿ ಯದ್ಯಧಾಚ ರತಿಶ್ರೇಷ್ಠ ಸತ್ಯದೇವೇತರೇ ಜನಾಃ” ಎಂಬ ಗೀತಾವಚನವನ್ನನುಸರಿಸಿ, ಶ್ರೇಷ್ಠರಾದ ವರು ನಡೆಸತಕ್ಕೆ ಕಾರಗಳೆಲ್ಲವೂ ಸಾಮಾನ್ಯರಾದ ಇತರಜನರಿಗೆ ದಾರಿಯನ್ನು ತೋ ರಿಸಿಕೊಟ್ಟು, ಅವರನ್ನು ಉದ್ಧರಿಸುವುದಕ್ಕಾಗಿಯೇ ಹೊರತು ಬೇರೆಯಲ್ಲ. ಆದುದ. ರಿಂದ,ಇತರರಿಗೆ ದಾರಿತೋರಿಸುವುದಕ್ಕಾಗಿಯೇ ತಾನು ಕರಪ್ರವಣನಾಗಿರುವನೆಂದೂ ಭಾವವು, ಮತ್ತು 'ಕಾಮತೃತ್ವಯಂ ಲೋಕ: ಹೃಸ್ಪಮುಪವರ್ತತೇ! ಯದ್ಯ: ಶಾಂತಿ ರಾಜಾನ ಪದತ್ತಾ೦ತಿ ಹಿಪ್ರಜಾN?' ಎಂಬಂತೆ, ಈ ಲೋಕವೆಲ್ಲವೂ ತನ್ನಿಚ್ಛೆಯಿಂದ ನಡೆಯುತ್ತಿರುವುದು. ರಾಜನು ಹೇಗೆ ನಡೆದುಕೊಳ್ಳುವನೋ ಪ್ರಜೆಗ ಭೂ ಹಾಗೆಯೇ ನಡೆದುಕೊಳ್ಳುವರೆಂದು ಹೇಳಿರುವುದರಿಂದ, ಈತನೂ ರಾಜನಾಗಿ ಅವ * ತರಿಸಿ ಪ್ರಜೆಗಳಿಗೆ ಸನ್ಮಾರ್ಗವನ್ನು ತಿಳಿಸುತ್ತಿರುವನೆಂದು ಭಾವವು. ಇದರಂತೆಯೇ ಲಕ್ಷ.