ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೩೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸರ್ಗ ೪೪ ] ಅಯೋಧ್ಯಾಕಾಂಡವು ೫೧ ಸದ್ಗುಣಗಳಿಂದಲೂ ಕೂಡಿ ಪುರುಷಶ್ರೇಷ್ಠನೆನಿಸಿಕೊಂಡಿರುವುದರಲ್ಲಿ ಸಂ. ದೇಹವಿಲ್ಲ. ಹೀಗಿದ್ದರೂ ಅವನಿಗಾಗಿ ನೀನು ಹೀಗೆ ಬಹುದೈನ್ಯದಿಂದ ಆಳುತಿ ದಮಾತ್ರಕ್ಕೆ ಪ್ರಯೋಜನವೇನು ? ಬಲಾಡ್ಯನಾದ ನಿನ್ನ ಮಗನು ರಾಜ್ಯ ವನ್ನು ಬಿಟ್ಟು ಹೋದುದಕ್ಕಾಗಿ ನೀನು ಚಿಂತಿಸಬಾರದು. ತಂದೆಯ ಸತ್ಯ ಕೈ ಲೋಪವನ್ನುಂಟುಮಾಡದೆ, ಆತನ ಸತ್ಯಸಂಧತೆಯನ್ನು ಕಾಪಾಡುವು ದಕ್ಕಾಗಿಯೇ ರಾಮನು ಕಾಡಿಗೆ ಹೊರಟುಹೋದನು. ಇದರಿಂದ ಪರಿ ಕದಲ್ಲಿಯೂ ಮಹಾಫಲವುಂಟು. ಈಗ ರಾಮನು ಅನುಸರಿಸಿದ ದಾರಿಯು. ಶಿಷ್ಯಸಮ್ಮತವಾದುದೇ ಹೊರತು ಬೇರೆಯಲ್ಲ. ಹೀಗೆ ಧರದಲ್ಲಿ ಪ್ರವರ್ತಿ ಸಿರತಕ್ಕ ರಾಮನಿಗಾಗಿ ನೀನು ಈಗಚಿಂತಿಸುವುದು ನ್ಯಾಯವಲ್ಲ.ಹಾಗೆಯೇ ಸೀತಾಲಕ್ಷಣರಿಗಾಗಿಯೂ ನಾವು ದುಃಖಿಸಬೇಕಾದುದಿಲ್ಲ. ಲಕ್ಷಣನು ನಿಷ್ಕಲ್ಮಷವಾದ ಸ್ವಭಾವವುಳ್ಳವನು. ಸಮಸ್ತಪ್ರಾಣಿಗಳಲ್ಲಿಯೂ ದಯೆ. ಯುಳ್ಳವನು. ಆತನು ಈಗ ಅವಲಂಬಿಸಿರತಕ್ಕೆ ಭಾತೃಶುಶೂಷೆಯೆಂಬ ವೃತ್ತಿಯೇ ಸರೆತ್ತಮವಾದುದು. ಇದರಿಂದ ಆತನಿಗೂ ವಿಶೇಷವಾದ ಅನೂಕೂಡ ತನ್ನ ಶೇಷಕ್ಕೆ ಅನುಗುಣವಾದ ಸ್ಮಾಮಿಕೈಂಕಯ್ಯನನ್ನೇ ದೃಢವಾಗಿ ನಂಬಿಕೊಂಡು, ಸದ್ವರ್ತನದಲ್ಲಿರುವನಾದುದರಿಂದ ಅವನಿಗಾಗಿಯೂ ದು:ಖಿಸಬಾರ ದೆಂದು ಹೇಳುವಳು. ವರ್ತತೇಶೋತ್ತಮಾಂ ವೃತ್ತಿ೦ ಲಕ್ಷಣೋSರ್ಸ್ಕಿ ಸದಾನಮ: ದಯಾವಾ೯ ಸರಭೂತೇಷು ಲಾಭಸ್ತಸ್ಯ ಮಹಾತ್ಮನೆ: ಎಂದು ಮೂಲವು (ಅನಘ:) ಪಾಪವಿಲ್ಲದವನು, ಎಂದರೆ ಪ್ರಮಾದವಿಲ್ಲದವನೆಂದು ಭಾವವು. (ಸರಭೂತೇಷುದ ಯಾರ್ವಾ)ಎಲ್ಲಾ ಆತ್ಮಗಳನ್ನೂ ಜ್ಞಾನೈಕಾಕಾರಗಳನ್ನಾಗಿ ತಿಳಿದು, ಎಲ್ಲದರಲ್ಲಿಯೂ ಸಮಬುದ್ದಿಯುಳ್ಳವನಾಗಿರುವುದರಿಂದ, ಮೈತ್ರಿಯುಳ್ಳವನೆಂದು ಭಾವವು, ಇಂತಹ ಲಕ್ಷ್ಮಣನು (ಉತ್ತಮಾಂ) ನಿರತಿಶಯಪುರಷಾರೂಪವಾಗಿರುವುದರಿಂದ ಸಿ ತಮವೆನಿಸಿಕೊಂಡ (ವೃತ್ತಿ೦) ಕೈಂಕಯ್ಯ ವೃತ್ತಿಯನ್ನು (ಸದಾವರ್ತತೇ) ಅನವರತವೂ. ಅನುಷ್ಟಿಸುತ್ತಿರುವನು. (ತಸ್ಯ ಮಹಾತ್ಮನಃ, ಆ ಮಹಾತ್ಮನಿಗೆ (ಲಾಭ:) ಈ ಕೈಂಕ ರವೇ ಪರಮಲಾಭವು, ಎಂದರೆ ಪುರುಷಾರವ ಎಂದರು. ಈ ಶ್ಲೋಕದಲ್ಲಿ “ವರ್ತತೇ ಎಂಬ ಪದದಲ್ಲಿರುವ “ವ” ಎಂಬುದು, ಗಾ ಯತ್ರಿಯ ಪಂಚಾಕ್ಷರವಾದುದರಿಂಧ್ಯ, ಇಲ್ಲಿಗೆ ನಾಲ್ಕು ಸಾವಿರಗ್ರಂಥಗಳು ಮುಗಿ ದು ಐದನೆಯ ಸಾಏರವು ಆರಂಭಿಸಿಟ್ಟಿರುವುದೆಂದು ತಿಳಿಯಬೇಕು.