ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M ಛರ್ತ, ೪೪. | ಅಯೋಧ್ಯಾಕಾಂಡವು ಭೂತಗಳಿಗೆಲ್ಲಾ ಆತನೇ ಪ್ರಧಾನಭೂತನೆನಿಸಿಕೊಂಡಿರುವನು. ಹೀಗೆ ಲೋಕೋತ್ತರವಾದ ಮಹಾಮಹಿಮೆಯುಳ್ಳ ನಿನ್ನ ಮಗನು ಕಾಡಿನಲ್ಲಿದ್ದ ರೇನು ? ಅಥವಾ ಊರಿನಲ್ಲಿದ್ದರೇನು?ಎಲ್ಲಿದ್ದರೂ ಆತನಿಗೆ ಯಾವುದೊಂದು ಹಾನಿಯೂ ಉಂಟಾಗುವುದಿಲ್ಲ. ನೀನು ಸ್ವಲ್ಪವೂ ಚಿಂತಿಸಬೇಡ ! ಇನ್ನು ಸ್ವಲ್ಪ ಕಾಲದೊಳಗಾಗಿಯೇ ನಿನ್ನ ಮಗನು,ಭೂದೇವಿಯನ್ನೂ,ರಾಜ್ಯಲಕ್ಷ್ಮಿ ಯನ್ನೂ, ಸೀತೆಯನ್ನೂ ಸಂಗಡ ಕುಳ್ಳಿರಿಸಿಕೊಂಡು, ಈ ಮೂವರೊಡ ಗೂಡಿಯೇ ಅಭಿಷಿಕ್ತನಾಗುವನು. ರಾಮನಿಗೆ ಅಪಜಯವೆಲ್ಲಿಯದು ? ಮನು ಈ ಊರನ್ನು ಬಿಟ್ಟು ಹೊರಟಾಗ ಈ ಅಯೋಧ್ಯೆಯಲ್ಲಿರತಕ್ಕ ಸಮಸ್ತ ಜನರೂ ವ್ಯಸನದಿಂದ ಆತನನ್ನು ನೋಡಿ ಕಣ್ಣೀರನ್ನು ಸುರಿಸುತ್ತಿದ್ದರಲ್ಲವೆ? ಅವರಿಗೆ ಇದೊಂದು ಕೇವಲಭಮವೇ ಹೊರತು ಬೇರೆಯಲ್ಲ, ಆ ರಾಮನು ದರ್ಭೆಗಳನ್ನು ಧರಿಸಿ, ನಾರುಮಡಿಯನ್ನು ಟ್ಟು, ತಾಪಸವೇಷದಿಂದಿದ್ದ ಮಾ ತ್ರಕ್ಕೆ ಆತನಿಗುಂಟಾದ ದುರವಸೆಯೇನು? ಅಥವಾ ಅವನ ಪರಾಕ್ರಮಕ್ಕೆ ಬಂದ ನ್ಯೂನತೆಯೇನು?ಆತನು ತಾಪಸವೇಷದಲ್ಲಿದ್ದರೂ ಆತನನ್ನು ಈ ಲೋಕದಲ್ಲಿ ಯಾರೂ ಜಯಿಸಲಾರರು, ಅವನು ಜಲಾವಲ್ಕಲಧಾರಿಯಾಗಿ ಈ ಪಟ್ಟಣದಿಂದ ಹೊರಟಾಗಲೇ * ಸೀತೆಯಂತೆ ರಾಜ್ಯಲಕ್ಷ್ಮಿಯೂ ಅವನ ನೇ ಹಿಂಬಾಲಿಸಿ ಹೋಗಿರುವಳೆಂದು ತಿಳಿ ! ಈ ಲೋಕದಲ್ಲಿ ನಿನ್ನ ಮಗನಿಗೆ ದುರಭವಾದುದೊಂದೂ ಇಲ್ಲವು ಇದರಮೇಲೆ ಮಹಾಧನುರ್ಧಾರಿಯಾದ ಲಕ್ಷಣನು, ಬಿಲ್ಲನ್ನೂ, ಬಾಣಗಳನ್ನೂ ಧರಿಸಿ, ರಾಮನಿಗೆ ಮುಂದಾಗಿಯೇ ಹೋಗುತ್ತಿರುವನಲ್ಲವೆ?ಇನ್ನು ರಾಮನಿಗೆ ದುರಭವಾದುದುಯಾವುದುಂಟು? ಮಾತಿನಲ್ಲಿ ಹೇಳುವುದಕ್ಕಾಗಿ (ತಸ್ಯ ತೇಹ್ಯಗುಣಾ:) 'ಅವನಿಗೆ ಯಾವ ಅವಗುಣಗಳ ಇಲ್ಲ'ವೆಂದು ಹೇಳಿದುದಾಗಿ ಗ್ರಹಿಸಬೇಕು. (ರಾಷ್ಟ್ರ ವಾಪಥವಾ ಪರೇ) ಇಲ್ಲಿ ರಾ ಈ ಪಟ್ಟಣಗಳೆರಡನ್ನೂ ಹೇಳಿರುವುದರಿಂದ, ಉಭಯವಿಭೂತಿಗಳಲ್ಲಿಯೂ ಆತನು ಅಜಹರೂಪನೆಂದು ವ್ಯಂಜಿತವಾಗುವುದು,

  • ಇಲ್ಲಿ ಸೀತೇವಾನುಗತಾ ?” ಎಂದು ಮೂಲವು. ರಾಜ್ಯಲಕ್ಷ್ಮಿಯ ಶೀತ ಯಂತೆ ರಾಮನನ್ನೇ ಹಿಂಬಾಲಿಸಿತೆಂದರು. ಇದರಿಂದ ಕೋಸಲರಾಜ್ಯಲಕ್ಷೆಯ ಇತರರನ್ನು ಪರಿಗ್ರಹಿಸಲಾರಳೆಂದು ಸೂಚಿತವಾಗುವುದು. ಆದರೆ ಸೀತಾರೂಪವಾಗಿ ಯೇ ರಾಜ್ಯಲಕ್ಷ್ಮಿಯು ಆತನನ್ನು ಹಿಂಬಾಲಿಸಿತಂದು ಮಹೇಶ್ವರರ ವ್ಯಾಖ್ಯಾನವು.