ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

& ಶ್ರೀಮದ್ರಾಮಾಯಣವು [ಸರ್ಗ' ೪೪ ಎಲೆ ಕೌಸಲ್ಯ ! ಚಿಂತಿಸಬೇಡ ! ಶೀಘ್ರದಲ್ಲಿಯೇ ವನವಾಸವನ್ನು ಮುಗಿಸಿ ಕೊಂಡುಬಂದ ರಾಮನನ್ನು ನಿನ್ನ ಕಣ್ಣಾರೆ ನೀನೇ ನೋಡುವೆ! ದುಃಖವನ್ನು ಬಿಡು!ಅಜ್ಞಾನದಿಂದುಂಟಾದ ಈ ನಿನ್ನ ಮಮತೆಯನ್ನು ಬಿಟ್ಟುಬಿಡು. ನನ್ನ ಮಾತನ್ನು ಸತ್ಯವೆಂದು ತಿಳಿ! ಆಗಲೇ ಉಯಿಸಿ ಬಂದ ಚಂದ್ರನಂತೆ,ನಿನ್ನ ಕಣ್ಣಿ ದಿರಿಗೆ ಬಂದು ನಿಂತು, ನಿನ್ನ ಈ ಪಾದಗಳೆರಡನ್ನೂ ಹಿಡಿದು ನಮಸ್ಕರಿಸುವ ಮಗನನ್ನು ನೀನು ಶೀಘ್ರದಲ್ಲಿಯೇ ನೋಡುವೆ.ಆತನು ಹಿಂತಿರುಗಿ ಈ ಪಟ್ಟ, ಣಕ್ಕೆ ಬಂದು ಪಟ್ಟಾಭಿಷಿಕ್ತನಾಗಿ, ರಾಜತೇಜಸ್ಸಿನಿಂದಜ್ವಲಿಸುತ್ತಿರುವುದನ್ನು ನೋಡಿ, ಈ ನಿನ್ನ ಕಣ್ಣುಗಳಿಂದಲೇ ಅನಂದಬಾಷ್ಪವು ತುಳುಕುವುದು. ಎಲೆ ದೇವಿ!ರಾಮನು ಎಲ್ಲಿದ್ದರೂ ಅವನಿಗೆ ಯಾವುದೊಂದು ದುಃಖವಾಗಲಿ ಅಪಾಯವಾಗಲಿ ಸಂಭವಿಸಲಾರದು. ಸೀತಾಲಕ್ಷ್ಮಣರೊಡಗೂಡಿ ಹಿಂತಿ ರುಗಿಬಂದ ಆತನನ್ನು ನೀನು ಶಿಘ್ರದಲ್ಲಿಯೇ ನೋಡುವೆ!ಇಲ್ಲಿರುವವರೆಲ್ಲರಿಗೂ ನೀನೇದೊಡ್ಡವಳು. ದುಃಖಿಸುತ್ತಿರುವಇತರಜನರನ್ನೂ ನೀನೇಸಮಾಧಾನಪಡಿ ಸಬೇಕು!ಹೀಗಿರುವಾಗ ನೀನೇ ಹೀಗೆ ದುಃಖಿಸುವುದುಂಟೆ? ಮಹಾನುಭಾವನಾ ದ ರಾಮನನ್ನು ಪುತ್ರನನ್ನಾಗಿ ಪಡೆದಿರುವ ಪರಮಭಾಗ್ಯಶಾಲಿನಿಯಾದನೀನು ಎಂದಿಗೂ ಹೀಗೆ ದುಃಖಿಸಬಾರದು.ಲೋಕದಲ್ಲಿ ರಾಮನಿಗಿಂತಲೂ ಮೇಲೆನಿಸಿ ಕೊಂಡ ಸನ್ಮಾರ್ಗಪ್ರವರ್ತಕನು ಒಬ್ಬನಾದರೂ ಇಲ್ಲವು? ರಾಮನು ತನ್ನ ಮಿತ್ರರೊಡಗೂಡಿ ಬಂದು ನಿನ್ನ ಪಾದಗಳಿಗೆ ನಮಸ್ಕರಿಸುತ್ತಿರುವಾಗ, ಆತ ನನ್ನು ನೋಡಿನೀನು,ಮಳೆಗಾಲದಮೇಘಪರಂಪರೆಯಂತೆ ಶೀಘ್ರದಲ್ಲಿಯೇ ಕಣ್ಣುಗಳಿಂದ ಆನಂದಬಾಷ್ಪವನ್ನು ಸುರಿಸುವುದರಲ್ಲಿ ಸಂದೇಹವಿಲ್ಲ!ಶೀಘ್ರು ದಲ್ಲಿಯೇ ನಿನ್ನ ಮಗನು ಈ ಆಯೋಧ್ಯೆಗೆ ಹಿಂತಿರುಗಿಬಂದು ಮೃದುವಾ ಗಿಯೂ, ಪಷಿಯುಳ್ಳುದಾಗಿಯೂ ಇರುವ ತನ್ನ ಕೈಗಳಿಂದ ನಿನ್ನ ಪಾದಗ ಇನ್ನೊತ್ತುವನು.ಹೀಗೆ ಶೂರನಾದ ರಾಮನು ಮಿತ್ರರೊಡಗೂಡಿ ನಿನ್ನ ಪಾ ದಕ್ಕೆ ನಮಸ್ಕರಿಸುತ್ತಿರುವಾಗ, ನೀನು ಪಕ್ವತದಮೇಲೆ ಮೇಘುಗಳು ಮಳೆಯ ನ್ನು ಸುರಿಸುವಂತೆ ಆತನ ದೇಹದಮೇಲೆ ನಿಜವಾಗಿ ಆನಂದಬಾಷ್ಪವನ್ನು ಸುರಿಸುವೆ” ಎಂದಳು. ಹೀಗೆ ನಿಷ್ಕಲ್ಮಷವಾದ ಸ್ವಭಾವವುಳ್ಳ ಆ ಸುಮಿತ್ರೆ ಯು, ಸಮಯೋಚಿತವಾದ ಉಪಚಾರ