ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮L ಶ್ರೀಮದ್ರಾಮಾಯಣವು [ಸರ್ಗ, ೧ ಎಂದು ನಾನಾವಿಧವಾಗಿ ಯೋಚಿಸುತ್ತಾ,ಕೊನೆಗೆ ರಾಮನಲ್ಲಿ ಇತರರಾಜರಿಗೆ ದುರ್ಲಭವಾಗಿಯೂ, ಎಣಿಸುವುದಕ್ಕಸಾಧ್ಯವಾಗಿಯೂ, ಲೋಕೋತ್ತರ ಳಾಗಿಯೂ ಇರುವ ಗುಣಗಳು ತುಂಬಿರುವುದನ್ನು ನೋಡಿ, ತನ್ನ ಕೆಲವು. ಮುಖ್ಯಮಂತ್ರಿಗಳೊಡನೆ ಆಲೋಚಿಸಿ, ರಾಮನನ್ನು ಯುವರಾಜನ ನ್ನಾಗಿ ಮಾಡುವುದಾಗಿಯೇ ನಿಶ್ಚಯಿಸಿಕೊಂಡನು. ಮತ್ತು ಆ ಕಾಲಕ್ಕೆ ಸರಿಯಾಗಿ * ಆಕಾಶದಲ್ಲಿಯೂ, ಭೂಮಿಯಲ್ಲಿಯೂ, ಅಂತರಿಕ್ಷ ದಲ್ಲಿಯೂ ಭಯಂಕರವಾದ ಕೆಲವು ಮಹೋತ್ಸಾತಗಳನ್ನೂ ಕಂಡನು. ತನ್ನ ದೇಹದಲ್ಲಿ ದಿನದಿನಕ್ಕೆ ವಾರ್ಧಕವು ಹೆಚ್ಚು ತಿರುವುದನ್ನೂ ನೋಡಿ ದನು. ಕೊನೆಗೆ ಮಂತ್ರಿಗಳನ್ನು ಕರೆದು ಅವರಿಗೆ ಈ ವಿಷಯವನ್ನು ತಿಳಿಸಿ, {ಎಲೈ ಅಮಾತ್ಯರೆ ! ಈಗ ಅತಿಭಯಂಕರಗಳಾದ ಮಹೋತ್ಸಾತಗಳು ಕಾ ಣುತ್ತಿರುವುವು. ನನ್ನ ಈ ದೇಹವೂ ಜರೆಯಿಂದ ಬಹಳ ಝರ್ಝರಿತವಾ ಯಿತು.ಇದೆಲ್ಲವನ್ನೂ ನೋಡಿದರೆ, ಕೂಡಿದಮಟ್ಟಿಗೆ ಶಿಘ್ರದಲ್ಲಿಯೇ ರಾಮ ನಿಗೆ ಪಟ್ಟವನ್ನು ಕಟ್ಟುವುದು ಮೇಲೆಂದು ತೋರುವುದು.” ಎಂದನು. ಹೀಗೆ ದಶರಥನು, ಪೂರ್ಣಚಂದ್ರನಂತೆ ಸಮಸ್ತ ಸಂತಾಪಗಳನ್ನೂ ಹೋಗ ಲಾಡಿಸಿ, ನೋಡುವವರಿಗೆ ಆಹ್ಲಾದವನ್ನುಂಟುಮಾಡತಕ್ಕ ಮುಖ ವುಳ್ಳ ಮಹಾತ್ಮನಾದ ರಾಮನು, ಲೋಕದ ಜನಗಳಿಗೆ ಬಹಳ ಪ್ರಿಯನಾಗಿರುವುದನ್ನು ನೋಡಿ, ಮಂತ್ರಿಗಳೊಡನೆಯೂ ಆಲೋಚಿಸಿ, . * ಜ್ಯೋತಿಶ್ಯಾಸ್ತ್ರದಲ್ಲಿ ಇವರುವಿಧವಾದ ಉತ್ಪಾತಗಳೂ ವಿವರಿಸಲ್ಪಟ್ಟಿರುವುವು. ಹೇಗೆಂದರೆ ಸ್ವಾನುಕೇತು ನಕ್ಷತ್ರಗ್ರಹ ತಾರಾಹ್ಮಚಂದ್ರಜಂ | ದಿವಿ ಚೋತ್ಸದ್ಯತೇ ಯಕೃತದ್ದಿವ್ಯಮಿತಿ ಕೀರ್ತಿತಂ” ಗ್ರಹತಾರೆಗಳಲ್ಲಿ ಕಾಣತಕ್ಕ ಉತ್ಪಾತವು ದಿವ್ಯೂ ಕ್ಷಾತವೆನಿಸುವುದು, ವಾದ್ಯಘ್ರಸಂಧ್ಯಾ ದಿಗ್ವಾಹ ಪರಿವೇಷತಮಾಂಚ | ಪಪುರಂ ಜೇಂದ್ರಚಾಪಂ ಚ ತದ್ವಿದ್ಯಾದಂತರಿಕ್ಷಜಂ||"ಭಯಂಕರವಾದ ಗಾಳಿ, ಮೇಘಪರಂಪರೆ, ಕತ್ತಲೆ, ಇಂದ್ರಧನುಸ್ಸು, ಅಕಾಲಸಂಧ್ಯೆ, ಮುಂತಾದುವೆಲ್ಲವೂ ಅಂತರಿಕ್ಷಜನ್ಯವಾದ ಉತ್ಪಾತಗಳು, ಭೂಮಾವುತ್ಸದ್ಯತೇ ಯಚ್ಛಸ್ಥಾವರಂನಾಥ ಜಂಗಮಂ | ತದೇಕದೇ ಶಿಕಂ ಭೌಮಮುತ್ತಾತಂ ಪರಿಚಕ್ಷತೇ” ಭೂಮಿಯ ಮೇಲಿರತಕ್ಕ ಚರಾಚರಾತ್ಮಕಗಳಾ ದ ವಸ್ತುಗಳಲ್ಲಿ ಕಾಣತಕ್ಕ ಉತ್ಪಾತಗಳು ಭಮ್ಮುತ್ಸಾತತಗಳೆಂದು ಹೇಳಲ್ಪಡುವನು,