ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೫೭ ಸರ್ಗ, ೪೫.] ಅಯೋಧ್ಯಾಕಾಂಡವು. ಚತುರೆಯಾದುದರಿಂದ, ಆ ಕೌಸಲ್ಯಗೆ ಅನೇಕ ವಿಧದಲ್ಲಿ ಸಮಾಧಾನಗಳನ್ನು ಹೇಳಿ ಸುಮ್ಮನಾದಳು. ಇವೆಲ್ಲವನ್ನೂ ಕೇಳಿದಮೇಲೆ,” ಶರತ್ಕಾಲದಲ್ಲಿ ಮಿತ ವಾದ ನೀರಿನಿಂದ ಕೂಡಿದ ಮೇಘವು, ಇದ್ದಕ್ಕಿದ್ದ ಹಾಗೆ ಕಣ್ಮರೆಯಾಗಿ ಹೋಗುವಂತೆ, ಆಗ ಆ ಕೌಸಲ್ಯಯ ದೇಹದಲ್ಲಿ ದುಃಖವು ಹಾಗೆಯೇ ಅಡಗಿಹೋಯಿತು. ಇಲ್ಲಿಗೆ ನಾಲ್ವತ್ತು ನಾಲ್ಕನೆಯ ಸರವು. ( ರಾಮನು ತನ್ನನ್ನು ಹಿಂಬಾಲಿಸಿ ಬರುತಿದ್ದ ಪ್ರಜೆ ) ಗಳಿಗೆ ಸಮಾಧಾನವನ್ನು ಹೇಳಿದುದು. . SY ಸತ್ಯಪರಾಕ್ರಮನಾಗಿಯೂ, ಮಹಾತ್ಮನಾಗಿಯೂ ಇರುವ ರಾಮ ನು, ಅಯೋಧ್ಯೆಯನ್ನು ಬಿಟ್ಟು ಅತ್ತಲಾಗಿ ಹೋಗುತ್ತಿರುವಾಗ, ಅವನಲ್ಲಿ ವಿ ಶೇಷವಾದ ಅನುರಾಗವುಳ್ಳ ಅನೇಕಪ್ರಜೆಗಳು ಬಹುದೂರದವರೆಗೆ ಆತನನ್ನು ಹಿಂಬಾಲಿಸಿ ಹೋಗುತಿದ್ದರು. ರಾಮನು ತಂದೆಯಾದ ದಶರಥನನ್ನೂ, ಅಂತಃಪರಸ್ತ್ರೀಯರನ್ನೂ, ಇನ್ನೂ ಮಂತ್ರಿಗಳೇ ಮೊದಲಾದವರನ್ನೂ ಬ ಹಳವಾಗಿ ಬಲಾತ್ಕರಿಸಿ ಹಿಂತಿರುಗಿಸಿದರೂ, ಪ್ರಜೆಗಳು ಮಾತ್ರ ಆತನ ರಥ ವನ್ನು ಬಿಟ್ಟು ಹಿಂತಿರುಗಲೇ ಇಲ್ಲ. ಅಯೋಧ್ಯೆಯಲ್ಲಿ ವಾಸಮಾಡತಕ್ಕ ಸಮ ಸಸಿ ಪುರುಷರಿಗೂ, ಮಹಾಯಶಸ್ವಿಯಾಗಿ ಗುಣಸಂಪನ್ನನೆನಿಸಿಕೊಂಡಿ ರುವ ಈ ರಾಮನು, ಪೂರ್ಣಚಂದ್ರನಂತೆ ಬಹುಪ್ರೀತಿಗೆ ಪಾತ್ರನಾಗಿದ್ದನು. ಪ್ರಜೆಗಳೆಲ್ಲರೂ ಆತನನ್ನು ಎಷ್ಟೇ ಪ್ರಾದ್ಧಿಸಿಕೊಂಡರೂ, ತಂದೆಯ ಸತ್ಯವ ನ್ನು ಕಾಪಾಡುವುದಕ್ಕಾಗಿ ವನಪ್ರಯಾಣದಲ್ಲಿಯೇ ಉದ್ಯುಕ್ತನಾಗಿದ್ದನು. ಆಗ ತನ್ನ ಹಿಂದೆ ಬರುತ್ತಿದ್ದ ಪ್ರಜೆಗಳೆಲ್ಲರನ್ನೂ ಪ್ರೀತಿಪೂರೈಕವಾದ ಕಟಾ ಕ್ಷದಿಂದ ನೋಡುತ್ತಾ, ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಂತೆ ಅವರನ್ನು ಪ್ರೀತಿಸಿ, ಎಲೈ ಪ್ರಜೆಗಳಿರಾ ! ಅಯೋಧ್ಯಾವಾಸಿಗಳಾದ ನೀವು ನನ್ನಲ್ಲಿ ಎಷ್ಟು ಗೌರವವನ್ನೂ, ಪ್ರೀತಿಯನ್ನೂ ತೋರಿಸುತ್ತಿರುವಿರೋ, ಅಷ್ಟು. ಪ್ರೀತಿಗೌರವಗಳನ್ನು ನೀವು ಇನ್ನು ಮೇಲೆ ಭರತನಲ್ಲಿ ತೋರಿಸುತ್ತಿರಬೇಕು. ನನ್ನನ್ನು ನೀವು ನಿಜವಾಗಿ ಸಂತೋಷಪಡಿಸಬೇಕೆಂದಿದ್ದರೆ, ಮೊದಲು ಈ ಕೆಲಸವನ್ನು ಮಾಡಿ ! ಕೈಕೇಯಿಗೆ ಆನಂದವರ್ಧಕನಾದ ಆ ಭರತನು ಸಾ 37