ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Wes ಶ್ರೀಮದ್ರಾಮಾಯಣವು [ಸರ್ಗ, ೪೩. ಹೊರಳಿಸಿ, ಅವುಗಳ ಮೈಯ್ಯನ್ನು ಚೆನ್ನಾಗಿ ತೊಳೆದು, ಆ ನಡೀತಿರದಲ್ಲಿಯೇ ಮೇಯುವುದಕ್ಕೆ ಬಿಟ್ಟನು. ಇಲ್ಲಿಗೆ ನಾಲ್ವತ್ತೈದನೆಯ ಸರ್ಗವು. ರಾಮನು ತಮಸಾನದೀತೀರದಲ್ಲಿ ವಿಶ್ರಮಿಸಿಕೊಂ ) ಡಿದ್ದು, ರಾತ್ರಿಯಲ್ಲಿ ಪ್ರಜೆಗಳನ್ನು ವಂಚಿಸಿ ಮುಂ |

  • ದಕ್ಕೆ ಹೊರಟುದು ) ಹೀಗೆ ರಾಮನು ರಮಣೀಯವಾದ ತಮಸಾತೀರವನ್ನು ಸೇರಿದ ಮೇಲೆ *ಸೀತೆಯನ್ನು ನೋಡಿ, ಲಕ್ಷಣವನ್ನು ಕುರಿತು ವತ್ಸ ಲಕ್ಷಣಾ ! ನಾವು ವನವಾಸಕಾಲದಲ್ಲಿ ಕಳೆಯಬೇಕಾದ ರಾತ್ರಿಗಳಲ್ಲಿ ಇದೇ ಮೊದಲನೆ ಯ ರಾತ್ರಿಯು: ಈಗಲೇ ಈರಾತ್ರಿಯು ಸನ್ನಿಹಿತವಾಗುತ್ತಿರುವುದು. ಇದು ಮೊದಲ್ಗೊಂಡು ನೀನು ಮನೆಯನ್ನಾಗಲಿ, ತಂದೆತಾಯಿಗಳನ್ನಾಗಲಿ, ಈ ಸೀತೆಯ ಕಪದಶೆಯನ್ನಾಗಲಿ ನೆನೆಸಿಕೊಂಡು ಕಳವಳಪಡಕೂಡದು. ಇ ದೋ! ಮುಂದೆ ಶೂನ್ಯವಾಗಿ ಕಾಣುವ ಅರಣ್ಯ ಪ್ರದೇಶಗಳನ್ನು ನೋಡು ! ರಾತ್ರಿಯು ಸಮೀಪಿಸಿರುವುದರಿಂದ ಸಂಚಾರಾರ್ಥವಾಗಿ ಹೊರಗೆ ಹೋಗಿ ಈ ಮೃಗಪಕ್ಷಿಗಳೆಲ್ಲವೂ ತಮ್ಮ ತಮ್ಮ ಗೂಡುಗಳಿಗೆ ಸೇರುತ್ತಿರುವುವು. ಆ ಮೃಗಪಕ್ಷಿಗಳ ಕೂಗುಗಳಿಂದ ಈ ಅರಣ್ಯವೇ ರೋದನಮಾಡುವಂತಿರು ವುದು. * ಈಗ ನಮ್ಮ ತಂದೆಗೆ ರಾಜಧಾನಿಯಾದ ಅಯೋಧ್ಯಾಪಟ್ಟಣದಲ್ಲಿ ಸಿಪುರುಷರು ಮೊದಲಾಗಿ, ಅಲ್ಲಿನ ನಿವಾಸಿಗಳೆಲ್ಲರೂ ನಮಗಾಗಿ ದುಃಖಿ ಸುತ್ತಿರಬಹುದು. ಇದರಲ್ಲಿ ಸಂದೇಹವಿಲ್ಲ. ಪ್ರಜೆಗಳಿಗೆ ದಶರಥನಲ್ಲಿಯೂ, ನಿ ಇಲ್ಲಿಯೂ, ನನ್ನಲ್ಲಿಯೂ, ಭರತಶತ್ರುಘ್ನು ರಲ್ಲಿಯೂ ಸಂಪೂರವಾದ ಅನು ರಾಗವಿರುವುದು. ಮುಖ್ಯವಾಗಿ ನಮ್ಮ ತಂದೆಯಲ್ಲಿರುವ ಅನೇಕ ಸದ್ಗುಣಗಳು ಅವರ ಮನಸ್ಸನ್ನು ಆಕರ್ಷಿಸಿಬಿಟ್ಟಿರುವುವು. ನನಗೂ ಈಗ ತಂದೆಯನ್ನೂ,
  • ಇಲ್ಲಿ ಸೀತೆಯನ್ನು ನೋಡಿ ಲಕ್ಷಕನಿಗೆ ಹೇಳಿದುದಾಗಿರುವುದರಿಂದ, ಲಕ್ಷಣ ನಂತೆಯೇ ಸೀತೆಯ ಮನಸ್ಸುಗುಂದದಿರಬೇಕೆಂಬುದು ರಾಮನ ಅಭಿಪ್ರಾಯವು.

+ ಅ ಅಡವಿಯನ್ನು ನೋಡಿದಾಗಲೇ ರಾಮನಿಗೆ ಅಯೋಧ್ಯೆಯ ಸ್ಮರಣೆಯುಂಟಾ ಯಳಂದು ಗ್ರಹಿಸಬೇಕು. --

    • **