ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೪೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೫೮೪ ಶ್ರೀಮದ್ರಾಮಾಯಣವು (ಸರ್ಗ, ೪೩. ಸಂಧ್ಯಾಕಾಲದಲ್ಲಿ ನಡೆಸಬೇಕಾದ ತನ್ನ ಉಪಾಸನಾಧಿಕಾರಗಳನ್ನು ಮು ಗಿಸಿ, ರಾತ್ರಿಯಾದುದನ್ನು ನೋಡಿ, ಲಕ್ಷಣನೊಡಗೂಡಿ ರಾಮನಿಗೆ ಹಾ ಸಿಗೆಯನ್ನು ಸಿದ್ಧಪಡಿಸಿಟ್ಟನು. ಹೀಗೆ ಆ ನದಿಯ ತೀರದಲ್ಲಿ ಮರದೆಲೆಗಳಿಂದ ತನಗೆ ಮಾಡಿಟ್ಟಿರುವ ಹಾಸಿಗೆಯನ್ನು ನೋಡಿ ರಾಮನು, ಸೀತಾಲಕ್ಷ ಇರೊಡನೆ ಮಲಗಿದನು, ಆಮೇಲೆ ಲಕ್ಷಣನು, ಸೀತೆಯೂ ರಾಮನೂ ಮಲಗಿರುವುದನ್ನು ನೋಡಿ,ತಾನು ಎಚ್ಚರವಾಗಿಯೇ ಇದ್ದು ಸುಮಂತ್ರನೆ ಡನೆ ನಾನಾವಿಧವಾದ ಸಲ್ಲಾಪಗಳನ್ನು ಮಾಡುತ್ತಾ, ರಾಮನ ಗುಣಗಳ ನ್ನು ಕೊಂಡಾಡುತ್ತಿದ್ದನು. ಹೀಗೆ ಅವರು ಮಾತಾಡುತ್ತಿರುವಾಗಲೇ ರಾತ್ರಿ ಯು ಕಳೆದು ಬೆಳಗಾಗಿ ಸೂರನೂ ಉದಿಸುತ್ತಿದ್ದನು. ರಾಮನು ತನ್ನನ್ನು ಹಿಂಬಾಲಿಸಿ ಬಂದ ಪುರಜನರೊಡನೆ ಸೇರಿ ಅನೇಕಗೋಸಮೂಹದಿಂದ ಈ ಡಿದ ಆ ತಮಸಾನದಿಯ ತೀರದಲ್ಲಿಯೇ ಆರಾತ್ರಿಯೆಲ್ಲವನ್ನೂ ಕಳೆದು, ಬೆಳ ಗಿನಜಾವದಲ್ಲಿ ಎದ್ದು, ತನ್ನ ಸುತ್ತಲೂ ಇದ್ದ ಪ್ರಜೆಗಳನ್ನು ನೋಡಿ, ಲಕ್ಷಣ ನನ್ನು ಕುರಿತು ವತ್ಸಲಕ್ಷಣಾ! ಈ ಜನರನ್ನು ನೋಡಿದೆಯಾ?ಇವರು ನಮ್ಮ ಸ್ಥಿರತಕ್ಕ ಪ್ರೀತಿವಿಶೇಷದಿಂದ ತಮ್ಮ ಮನೆಮಠಗಳಲ್ಲಿಯೂ ಆಸೆಯನ್ನು ಬಿಟ್ಟು ನಮ್ಮನ್ನು ಹಿಂಬಾಲಿಸಿ ಬಂದು, ಈ ಮರದಕೆಳಗೆಮಲಗಿರುವರು.ಇವರುನಮ್ಮ ನ್ನು ಹಿಂತಿರುಗಿಸುವುದಕ್ಕಾಗಿ ಪಡುವಕಷ್ಟವನ್ನು ನೋಡಿದರೆ, ತಮ್ಮ ಪ್ರಾಣ ವನ್ನಾದರೂ ಬಿಟ್ಟುಬಿಡುವರೇಹೊರತು, ತಾವು ಹಿಡಿದ ಪಟ್ಟನ್ನು ಬಿಡುವ ಹಾಗೆ ತೋರುವುದಿಲ್ಲ.ಇವರಿಂದ ತಪ್ಪಿಸಿಕೊಂಡುಹೋಗುವುದಕ್ಕೆ ನಮಗೆ ಬೇ ಉಪಾಯವಿಲ್ಲ. ಆದುದರಿಂದ ಈಗ ಇವರು ಮಲಗಿರುವಾಗಲೇ ನಾವು ರಥ ದಮೇಲೆ ಹತ್ತಿ, ನಮ್ಮ ದಾರಿಯನ್ನು ಹಿಡಿದು ಬೇಗನೆ ಹೊರಟುಹೋಗುವು ದತ್ತಮವು.ನಾವು ಹೀಗೆ ಮಾಡಿದರೆ ಪ್ರಜೆಗಳಿಗೆ ಇನ್ನು ಮೇಲೆ ಮರದಡಿ - ಯಲ್ಲಿ ಮಲಗುವ ಕಷ್ಟವನ್ನು ತಪ್ಪಿಸಿದಂತಾಗುವುದು.ಹಾಗಿಲ್ಲದಿದ್ದರೆ ಇವ ರು ನಾವು ಹೋದಕಡೆಗೆಲ್ಲಾ ನಮ್ಮನ್ನು ಹಿಂಬಾಲಿಸಿ ಬರುವರು. ನಮ್ಮ ತೆಯೇ ಮರದಕೆಳಗೆ ಮಲಗಿ ಕಷ್ಟಪಡುವರು. ಪ್ರಜೆಗಳು ಕಷ್ಟ ಪಡದಂತೆ ಮಾಡಬೇಕಾದುದೇ ರಾಜಕುಮಾರರಿಗೆ ಮುಖ್ಯಥರವು. ಆದುದ ರಿಂದ ನಮಗಾಗಿ ಅವರು ದುಃಖಪಡುವಂತೆ ಮಾಡಬಾರದು”ಎಂದನು. ಆಗ