ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೪೬.] ಅಯೋಧ್ಯಾಕಾಂಡವು. We ನ್ನು ಕೇಳಿ ಲಕ್ಷಣನು ಧರಸ್ವರೂಪನಾದ ರಾಮನನ್ನು ಕುರಿತು ಅಣ್ಣಾ! ನನಗೂ ಹಾಗೆಯೇ ತೋರುವುದು. ಬೇಗ ರಥವನ್ನೇರು.” ಎಂದು ಹೇಳಲು, ರಾಮನು ಆ ಜನರನ್ನು # ವಂಚಿಸಿ ಹೋಗಬೇಕೆಂದೇ ನಿಶ್ಚಯಿಸಿ, ಸುಮಂ ತ್ರನಿಗೆ ರಥವನ್ನು ಸಿದ್ದಿ ಪಡಿಸುವಂತೆ ಹೇಳಿ, ಆಸ್ಥಳವನ್ನು ಶೀಘ್ರದಲ್ಲಿಯೇ ಬಿಟ್ಟು, ಅರಣ್ಯಪ್ರದೇಶಕ್ಕೆ ಹೋಗುವಹಾಗೆ ಹೇಳಿದನು. ಆಕ್ಷಣವೇ ಸುಮಂತ್ರನು ರಥಕ್ಕೆ ಕುದುರೆಗಳನ್ನು ಕಟ್ಟಿ ಸಿದ್ಧಪಡಿಸಿ, ರಾಮನಬಳಿಗೆ ಬಂದು ಕೈಮುಗಿದು ನಿಂತು ( ಎಲೈ ಮಹಾಬಾಹುವಾದ ರಾಮನೆ ! ಇದೋ ರಥವು ಸಿದ್ಧವಾಗಿರುವುದು. ನೀನು ಸೀತಾಲಕ್ಷ್ಮಣರೊಡನೆ ಏರಬಹುದು” ಎಂದನು ರಾಮನು, ಬಿಲ್ಲು, ಕವಚ ಮೊದಲಾದ ಪರಿ ಕರಗಳೊಡನೆ ಆ ರಥವನ್ನೇರಿ, ವೇಗದಿಂದ ಪ್ರವಹಿಸುವುದಾಗಿಯೂ, ಬಹಳ ಸುಳಿಗಳುಳ್ಳುದಾಗಿಯೂ ಇರುವ ಆ ತಮಸಾನದಿಯನ್ನು ದಾಟಿದನು. ಆ ನದಿಯನ್ನು ದಾಟಿದಮೇಲೆ, ಮುಂದೆ ಒಂದು ದೊಡ್ಡದಾರಿಯನ್ನು ಸೇರಿ ಕ್ರೂರಮೃಗಗಳ ಬಾಧೆಯೊಂದೂ ಇಲ್ಲದೆ ನಿರ್ಭಯವಾಗಿರುವ ಆದಾರಿಯಲ್ಲಿ ರಥದಿಂದಿಳಿದು, ಕಾಲುನಡೆಯಿಂದಲೇ ಹೋಗುತಿದ್ದನು. ಅತ್ತಲಾಗಿ ಹಿಂದೆ ತನ್ನನ್ನು ಹಿಂಬಾಲಿಸಿ ಬರುತಿದ್ದ ಪರವಾಸಿಗಳಿಗೆ, ತಾನು ಹೋದ ದಾರಿಯು ತಿಳಿಯದಿರಬೇಕೆಂಬುದಕ್ಕಾಗಿ, ಸಾರಥಿಯನ್ನು ಕುರಿತು (ಎಲೈ ಸುಮಂತ್ರನೆ! ನೀನೊಬ್ಬನೇ ರಥದಲ್ಲಿ ಕುಳಿತು, ಅದನ್ನು ಈ ಉತ್ತರದಿಕ್ಕಿನಕಡೆಗೆ ಸ್ವಲ್ಪ ದೂರ ನಡೆಸಿಕೊಂಡುಹೋಗಿ ಹಿಂತಿರುಗಿ ಬಂದುಬಿಡು! ಆಗ ಈ ಪುರಜನರು ನಾನು ಪುನಃ ಅಯೋಧ್ಯೆಯಕಡೆಗೆ ಹೊರಟುಹೋದೆನೆಂದು ತಿಳಿದುಕೊಳ್ಳು

  • ದಯಾನಿಧಿಯಾದ ರಾಮನು, ತನ್ನಲ್ಲಿ ಪ್ರೀತಿಯಿಂದ ಹಿಂಬಾಲಿಸಿ ಬಂದವರನ್ನು ವಂಚಿಸಿಹೋದುದು ಅನುಚಿತವೆಂದು ಶಂಕೆಯುಂಟಾಗಬಹುದು, ಇದುವಂಚನೆಯೆಂದು ತಿಳಿಯಕೂಡದು ಆ ಪ್ರಜೆಗಳೊಡನೆ ತಾನು ಯಾವಾಗಲೂ ಕಲೆತಿದ ಕ, ಅವರಿಗೆ ಆ ಆನಂದವು ಉನ್ಮ ಸ್ತಕವಾಗಿ ಅವರ ಸತ್ಯವೇ ಹೋಗಿಬಿಡುವುದು, ಅವರಿಗೆ ಸ್ಮಾತ್ರಾನು ಭವವು ಚೆನ್ನಾಗಿ ಬೇರೂರಬೇಕೆಂಬುದಕ್ಕಾಗಿಯೇ, ಒಣಚಿಕಿತ್ಸೆಯಂತೆ, ವನವಾಸ ದಿಂದ ಅವರಿಗೆ ತನ್ನ ವಿಶ್ಲೇಷವನ್ನುಂಟುಮಾಡಿದುದಾಗಿ ಗ್ರಹಿಸಬೇಕು. ಇದು ಅವರಿಗೆ ಹಿತವೇಹೊರತು ವಂಚನೆಯಲ್ಲ. ರಾಮನಿಗೆ ಈ ಸಂಕಲ್ಪವಿಲ್ಲದಿದ್ದರೆ, ಆ ಜನರಲ್ಲಿ ಕೊನೆಗೆ ಯಾರಾದರೂ ಒಬ್ಬರು ಸುಮಂತ್ರಲಕ್ಷಕರಂತೆ ಎಚ್ಚರಗೊಂಡಿರುತ್ತಿದ್ದ ರಲ್ಲವೆ ? ಹಾಗಿಲ್ಲದುದರಿಂದ ಇದು ರಾಮನ ಸಂಕಲ್ಪವೆಂದೇ ತಿಳಿಯಬೇಕು.