ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೨ ಶ್ರೀಮದ್ರಾಮಾಯಕರ (ಸರ್ಗ ೪೮. ಮನು ಹೊರಟುಹೋದಮೇಲೆ ದಶರಥನಂತೂ ಬದುಕಿರಲಾರನು. ಆದಶ್ರ ಧನು ಸತ್ತಮೇಲೆ ರಾಜ್ಯಕ್ಕೆ ವಿನಾಶವೆಂಬುದೇ ಸಿದ್ದವು.ಮುಖ್ಯವಾಗಿ ನಮ್ಮ ಪುಣ್ಯವು ಇಂದಿಗೆ ತೀರಿತು. ನೀವೂ ದುರ್ಗತಿಗೀಡಾದಿರಿ ! ಎಲೈ ಪ್ರಿಯರೆ ! ಇದೆಲ್ಲವನ್ನೂ ನೀವು ಚೆನ್ನಾಗಿ' ಪದ್ಯಾಲೋಚಿಸಿದರೆ, ಈಗಲೇ ವಿಷವನ್ನು ಕುಡಿದು ಪ್ರಾಣವನ್ನು ಬಿಡುವುದುತ್ತಮವು, ಅಥವಾ ರಾಮನನ್ನು ಹಿಂಬಾ ಲಿಸಿಹೋಗಬೇಕು. ಅದೂ ಇಲ್ಲದಿದ್ದರೆ ನಿಮ್ಮ ಹೆಸರುಕೂಡ ತಿಳಿಯದಂತೆ ದೇಶಭ್ರಷ್ಟರಾಗಿ ಹೊರಟುಹೋಗಿರಿ ! ದಶರಥನು ಕಪಟಬುದ್ಧಿಯಿಂದಲೇ ಸೀತಾಲಕ್ಷ್ಮಣರೊಡನೆ ರಾಮನನ್ನು ಕಾಡಿಗೆ ಕಳುಹಿಸಿಬಿಟ್ಟಿರುವನೇ ಹೊ ರತು ಬೇರೆಯಲ್ಲ. ಪಶುಗಳನ್ನು ಕಟುಕರ ಕೈಗೆ ಕೊಟ್ಟಂತೆ ನಮ್ಮನ್ನು ಭರತ ನ ಕೈಗೆ ಕೊಟ್ಟಿರುವನು, ಈ ಅಕಾರವನ್ನು ದಶರಥನೇ ಮಾಡಿರುವನು. ಇದ ರಿಂದ ರಾಮನಿಗೆ ಯಾವುದೊಂದು ಹಾನಿಯೂ ಇಲ್ಲ. ಪೂರ್ಣಚಂದ್ರ ನಂತೆ ಮುಖವುಳ್ಳವನಾಗಿ, ಶ್ಯಾಮವರ್ಣನಾಗಿ, ಮಾಂಸಪುಷ್ಟಿಯಿಂದ ಈ ಬ್ಬಿದ ಹೆಗಲುಳ್ಳವನಾಗಿ, ಶತ್ರುಸಂಹಾರಕನಾಗಿ, ಮೊಳಕಾಲಿನವರೆಗೆ ನೀಡಿ ದ ತೋಳುಳ್ಳವನಾಗಿ, ಕಮಲದಂತೆ ಕಣ್ಣುಳ್ಳವನಾಗಿರುವ ಆ ರಾಮನುವ ಆದ್ದರೇನು?ಆತನ ಸಂಚಾರದಿಂದ ಆ ಅರಣ್ಯಕ್ಕೆ ಒಂದುಕಾಂತಿಯುಂಟಾಗು ವುದರಲ್ಲಿ ಸಂದೇಹವಿಲ್ಲ. ಆರಾಮನು ಎಲ್ಲರಲ್ಲಿಯೂ ಬಹುಸುಲಭವಾಗಿ ತಾನೇ ಸಲಿಗೆಯಿಂದ ಅವರವರನ್ನು ಮಾತನಾಡಿಸಿಕೊಂಡು ಹೋಗುವನು. ಯಾ ವಾಗಲೂ ಆತನ ಮಾತಿನಲ್ಲಿ!ಇಂಪು ಸೋರುತ್ತಿರುವುದು. ಆತನು ಎಂದಿಗೂ ಸತ್ಯವನ್ನು ಬಿಡತಕ್ಕವನಲ್ಲ. ಮಹಾಬಲಾಡ್ಯನು. ಬಹಳ ಸೌಮ್ಯ ಸ್ವಭಾವ ವುಳ್ಳವನು. ಚಂದ್ರನಂತೆ ಸಮಸ್ತಲೋಕಕ್ಕೂ ಪ್ರೀತಿಯನ್ನುಂಟುಮಾಡು ವವನು.ಹೀಗೆ ಪುರುಷಶ್ರೇಷ್ಠನೆನಿಸಿಕೊಂಡು, ಮದಿಸಿದ ಆನೆಯಂತೆ ಮಹಾಪ ರಾಕ್ರಮವುಳ್ಳ ಆಮಹಾರಥನು, ತಾನಿದ್ದ ಸ್ಥಳಕ್ಕೆ ಹಿಂದಲಂಕಾರವನ್ನು ಟುಮಾಡುವನು.”ಹೀಗೆಂದು ಆ ಅಯೋಧ್ಯೆಯಲ್ಲಿರತಕ್ಕ ಪರಸ್ತ್ರೀಯರೆಲ್ಲರೂ ಮರಣಯಭವನ್ನು ಹೊಂದಿದಂತೆ ವ್ಯಸನದಿಂದ ಬೆಂದವರಾಗಿ ಗೋಳಾಡು ತಿದ್ದರು. ಹೀಗೆ ರಾಮನನ್ನು ಕುರಿತು ಸ್ತ್ರೀಯರೆಲ್ಲರೂ ವಿಲಪಿಸುತ್ತಿರು ವಾಗಲೇ ಸೂರನು ಅಸ್ತಂಗತನಾದನು. ರಾತ್ರಿಯೂ ಪ್ರಾಪ್ತವಾಯಿತು.