ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೪೯.] ಅಯೋಧ್ಯಾಕಾಂಡನು.

  • ಆ ಅಯೋಧ್ಯೆಯಲ್ಲಿ ಆಗ ಅಗ್ನಿ ಕಾರಗಳಾಗಲಿ, ವೇದಾಧ್ಯಯನಗಳಾಗಲಿ, ಪುರಾಣಕಥೆಗಳಾಗಲಿ ಯಾವುದೊಂದೂ ನಡೆಯುತ್ತಿರಲಿಲ್ಲ. ಸುತ್ತಲೂ ಅಂ ಥಕಾರವನ್ನು ಸವರಿಟ್ಟಂತೆ, ಕತ್ತಲೆಯು ಆವರಿಸಿಹೋಯಿತು! ವರ್ತಕರು ತಮ್ಮ ತಮ್ಮ ಅಂಗಡಿಗಳೊಂದನ್ನಾದರೂ ತೆರೆಯಲಿಲ್ಲ. ಯಾರ ಮುಖದಲ್ಲಿ ಯೂ ಸಂತೋಷವೇ ಇರಲಿಲ್ಲ. ಆ ಅಯೋಧ್ಯೆಯು ನಿರಾಶ್ರಯವಾಗಿ, ಕಾಂ ತಿಹೀನವಾಗಿ, ನಕ್ಷತ್ರಗಳಿಲ್ಲದ ಆಕಾಶಪ್ರದೇಶದಂತೆ ಕೇವಲಶೂನ್ಯವಾಗಿ ಕಾ ಣುತ್ತಿತ್ತು.ಅಲ್ಲಿನ ಪರಸ್ತ್ರೀಯರೆಲ್ಲರೂ ತಮ್ಮ ತಮ್ಮ ಮಕ್ಕಳನ್ನೋ, ಅಥವಾ ಅಣ್ಣತಮ್ಮಂದಿರನ್ನೋ ಕಳೆದುಕೊಂಡವರಂತೆ,ರಾಮನಿಗಾಗಿ ದುಃಖಿಸುತ್ತ ಬಹುದೈನ್ಯದಿಂದ ನಾನಾ ವಿಧದಲ್ಲಿ ಪ್ರಲಾಪಿಸುತ್ತಿದ್ದರು. ಅವರಿಗೆ ರಾಮನು ಹೊಟ್ಟೆಯಲ್ಲಿ ಹುಟ್ಟಿದ ಮಗನಿಗಿಂತಲೂ ಹೆಚ್ಚು ಪ್ರೀತಿಗೆ ಪಾತ್ರನಾಗಿ ದ್ದುದರಿಂದ, ಆತನನ್ನು ಸ್ಮರಿಸಿಕೊಂಡಹಾಗೆಲ್ಲಾ ಮೂರ್ಛಬೀಳುತಿದ್ದರು, ಆ ಪಟ್ಟಣದಲ್ಲಿ ಉತ್ಸವಗಳಾಗಲಿ, ನೃತ್ಯಗೀತವಾದ್ಧಾದಿಗಳಾಗಲಿ, ಯಾವು ದೂ ನಡೆಯದೆ, ಯಾವ ಜನರಲ್ಲಿಯೂ ಹರ್ಷವಿಲ್ಲದೆ, ಅಂಗಡಿಗಳೊಂದೂ ತೆರೆಯದೆ ಇದ್ದುದರಿಂದ, ಅದು ನೀರೋಣಗಿದ ಮಹಾಸಮುದ್ರದಂತೆ ಕಾ ಣುತಿತ್ತು. ಇಲ್ಲಿಗೆ ನಾಲ್ವತ್ತೆಂಟನೆಯಸರ್ಗವು.

( ರಾಮನು ವೇದಶ್ರುತಿಗೊಮಶೀನದಿಗಳನ್ನು ದಾಟಿ ) . 1 ದುದು. ಸುಮಂತ್ರನೊಡನೆ ಸಂಭಾಷಣವು.. | ಅತ್ತಲಾಗಿ ರಾಮನು ತನ್ನನ್ನು ಹಿಂಬಾಲಿಸಿಬಂದ ಪ್ರಜೆಗಳನ್ನು ವಂಚಿಸಿಹೋದಮೇಲೆ, ಉಳಿದ ಆ ರಾತ್ರಿಯ ಸ್ವಲ್ಪ ಕಾಲದೊಳಗಾಗಿಯೇ ಬಹುದೂರದವರೆಗೆ ಹೊರಟುಹೋದನು. ಪುರುಷಶ್ರೇಷ್ಠನಾದ ಆತನು ಪಿತೃವಾಕ್ಯ ಪರಿಪಾಲನವೊಂದನ್ನೇ ಮನಸ್ಸಿನಲ್ಲಿಟ್ಟುಕೊಂಡು, ಮುಂದೆ ಮುಂದೆ ಪ್ರಯಾಣಮಾಡುತ್ತಿರುವಾಗಲೇ ಆ ರಾತ್ರಿಯು ನಿರಾಯಾಸ ವಾಗಿ ಕಳೆದುಹೋಯಿತು. ಬೆಳಗಾದಕೂಡಲೆ ಸಂಧೋಪಾಸನೆಯನ್ನು ಮಾಡಿ, ಕೋಸಲದೇಶದ ಎಲ್ಲೆಕಟ್ಟನ್ನು ಸೇರಿದನು. ಅಲ್ಲಲ್ಲಿ ಬೀಜಗಳನ್ನು ಬಿತ್ತುವುದಕ್ಕೆ ಅನೂಕೂಲಿಸುವಂತೆ ಸಿದ್ಧಪಡಿಸಿರುವ ಹೊಲಗದ್ದೆಗಳುಳ್ಳ 38