ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೫೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಶ್ರೀಮದ್ರಾಮಾಯಂಕವು (ಸರ್ಗ, ೪೯. ಗ್ರಾಮಗಳನ್ನೂ, ಪಷಿತಗಳಾದ ತೋಟಗಳನ್ನೂ ನೋಡಿ ಆನಂದಿಸುತ್ತ, ತನ್ನ ರಥದ ಕುದುರೆಗಳು ಗತಿಚಾತುರದಿಂದ ವೇಗವಾಗಿ ಹೋಗುತ್ತಿದ್ದರೂ ತಾನು ಮೆಲ್ಲಗೆ ಹೋಗುತ್ತಿರುವಂತೆ ವಿನೋದದಿಂದಲೇ ಬಹುದೂರದವರೆಗೆ ಹೊರಟುಹೋದನು.ಅಲ್ಲಲ್ಲಿ ದೊಡ್ಡದೊಡ್ಡಗ್ರಾಮಗಳಲ್ಲಿಯೂ, ಸಣ್ಣಗ್ರಾ ಮಗಳಲ್ಲಿಯೂ ಜನರು ಗುಂಪುಗೂಡಿ,ಒಬ್ಬರಿಗೊಬ್ಬರು ಛೀ! ದಶರಥನ ಜ ವೇತಕ್ಕೆ?ಇಷ್ಟು ಮುಪ್ಪಿನಲ್ಲಿಯೂ ಕಾಮಾತುರನಾಗಿ ಎಂತಹ ಪಾಪಕೃ ವನ್ನು ಮಾಡಿದನು? ಹಾ! ಕೈಕೇಯಿಯು ಎಷ್ಟು ಕೊರಳು ! ಪಾಪ ಭಾವವುಳ್ಳವಳಾಗಿ, ಯಾವಾಗಲೂ ಪಾಪಕಾರವನ್ನೇ ನಡೆಸುತ್ತ, ಮ ರಾದೆಯನ್ನು ಮೀರಿಹೋಗುತ್ತಿರುವ ಆಕೆಯ ಈರಕಾರವನ್ನು ಹೇಳ ತಕ್ಕುದೇನು? ರಾಮನಾದರೋ ಪರಮಧಾರಿಕನು. ಲೋಕದಲ್ಲಿ ಆತನಿಗೆ ತಿಳಿಯದುದೊಂದೂ ಇಲ್ಲ. ಸಮಸ್ತಪ್ರಾಣಿಗಳಲ್ಲಿಯೂ ದಯೆಯುಳ್ಳ ವನು. ಮಹರ್ಷಿಗಳಂತೆ ಇಂದ್ರಿಯಗಳೆಲ್ಲವನ್ನೂ ಜಯಿಸಿದವನು. ಇಂತಹ ಪುತ್ರರತ್ನವನ್ನು ಊರಿನಿಂದ ಹೊರಡಿಸಿ ವನವಾಸದಲ್ಲಿರಿಸಬೇಕೆಂದಳಲ್ಲವೆ ? ಅಯ್ಯೋ!ಹುಟ್ಟಿದುದುಮೊದಲು ಸುಖದಲ್ಲಿಯೇ ಬಳೆದು ಮಹಾಭಾಗ್ಯಶಾಲಿ ನಿಯೆನಿಸಿಕೊಂಡಿರುವ ಜನಕರಾಜನ ಮಗಳಾದ ಆ ಸೀತೆಯು, ಕಾಡಿನಲ್ಲಿ ಹೇಗೆತಾನೇ ಕಷ್ಟವನ್ನನುಭವಿಸಬಲ್ಲಳು? ಆ8 ! ದಶರಥನಿಗೆ ತನ್ನ ಮಗ ನೆಂಬ ವಾತ್ಸಲ್ಯವಾದರೂ ಇರಬೇಡವೇ! ತನ್ನ ದೇಶದ ಪ್ರಜೆಗಳಿಗೆಲ್ಲಾ ಪ ರಮಪ್ರಿಯನಾಗಿ, ದೋಷರಹಿತನಾದ ತನ್ನ ಮುದ್ದು ಮಗನನ್ನೇ ತೊರೆದು ಬಿಟ್ಟನಲ್ಲಾ ! ಇದಕ್ಕಿಂತಲೂ ಲೋಕದಲ್ಲಿ ಆಶ್ಚರೈವೇನಿರುವುದು?” ಎಂದು ಮಾತಾಡಿಕೊಳ್ಳುತಿದ್ದರು. ಇವುಗಳನ್ನು ಕೇಳುತ್ತಾ ರಾಮನು ಕೋಸಲ ದೇಶವನ್ನು ದಾಟಿದನು. ಆಮೇಲೆ ಮುಂದೆ ಕಾಣುತ್ತಿದ್ದ ವೇದಶ್ರುತಿಯೆಂಬ ಮಂಗಳಕರವಾದ ನದಿಯನ್ನು ದಾಟಿ,ಅಗಸ್ಯ ದಿಕ್ಕಿಗೆ ಅಭಿಮುಖನಾಗಿಹೋ ಗುತ್ತಿದ್ದನು.ಹೀಗೆಯೇ ಬಹಳಹೊತ್ತಿನವರೆಗೆ ಪ್ರಯಾಣಮಾಡಿದಮೇಲೆ ಮರಿಯಂಬ ನದಿಯನ್ನು ಕಂಡನು. ಅನೇಕ ಗೋಸಮೂಹದಿಂದ ಕೂಡಿದ ಕೀರಪ್ರದೇಶವುಳ್ಳುದಾಗಿ, ಸಮುದ್ರಗಾಮಿನಿಯಾಗಿ ಹೋಗುತ್ತಿರುವ ಆ ಗೋಮವನಿಯನ್ನೂ ದಾಟಿ, ಇನ್ನೂ ಮುಂದೆ ಹೋಗುತ್ತಿರಲು, ಸಂದಿ