ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದ್ರಾಮಾಯಣವು [ಸರ್ಗ KO ಟ್ಟುಕೊಳ್ಳದೆ, ಆಗಾಗ ಈ ಬೇಟೆಯಾಡುವುದರಿಂದ ಯಾವುದೊಂದು ದೋ ಷವೂ ಇರದು. ಅನೇಕರಾಜಋಷಿಗಳು ಇದೊಂದು ವಿನೋದವನ್ನಾಗಿ ಅಂ ಗೀಕರಿಸಿರುವರು” ಎಂದನು. ಹೀಗೆ ರಾಮನು ಆ ಸಾರಥಿಯೊಡನೆ ಇಂಪಾ ದ ಮಾತುಗಳಿಂದ * ಇನ್ನೂ ಅನೇಕ ವಿಷಯಗಳನ್ನು ಕುರಿತು ಸಲ್ಲಾಪಮಾ ಡುತ್ತ ಮುಂದೆ ಹೋಗುತ್ತಿದ್ದನು. ಇಲ್ಲಿಗೆ ನಾಲ್ವತ್ತೊಂಭತ್ತನೆಯಸರವು. (ರಾಮನು ಕೋಸಲದೇಶವನ್ನು ದಾಟಿ ಗಂಗಾತೀರ | ++1 ವನ್ನು ಸೇರಿದುದು. ವಿಶಾಲವಾದ ಮತ್ತು ಅತಿಮನೋಹರವಾದ ಕೋಸಲದೇಶವನ್ನು ದಾಟಿದಮೇಲೆ, ರಾಮನು ತನ್ನ + ಆಯೋಧ್ಯಾನಗರದಕಡೆಗೆ ತಿರುಗಿ,ಕೈಮು ಗಿರುನಿಂತು, (ಕಕುತ್ಸ್ಥವಂಶದ ರಾಜರಿಂದ ಪಾಲಿಸಲ್ಪಟ್ಟ ಎಲೆ ಪುರಿ ಇವೆ ! ಈಗ ವನವಾಸಕ್ಕಾಗಿ ನಿನ್ನ ಅನುಮತಿಯನ್ನು ಪ್ರಾರ್ಥಿಸುವೆನು, ನಿನ್ನಲ್ಲಿ ವಾಸಮಾಡುತ್ತಿರುವ ಯಾವ ಯಾವ ಪುರದೇವತೆಗಳುಂಟೋ, ನಿನ್ನನ್ನು ಪಾಲಿಸತಕ್ಕ ಯಾವಯಾವ ದೇವತೆಗಳುಂಟೋ ಅವರನ್ನೂ ಪ್ರಾ ರ್ಥಿಸಿ ಕೇಳಿಕೊಳ್ಳುವೆನು. ನಾನು ವನವಾಸನ್ನು ಮುಗಿಸಿಕೊಂಡು ತಂದೆ ಯ ಋಣವನ್ನು ತೀರಿಸಿ, ಹಿಂತಿರುಗಿ ಬಂದು, ತಂದೆತಾಯಿಗಳೊಡನೆ ಸೇರಿ ಪುನಃ ನಿನ್ನನ್ನು ನೋಡುವೆನು. ಈಗ ನನಗೆ ಅನುಜ್ಞೆಯನ್ನು ಕೊಡಬೇಕು” ಎಂದನು, ಅಮೇಲೆ ದಾರಿಯಲ್ಲಿ ನಿಂತಿದ್ದ ಜನರನ್ನು ನೋಡಿ, ಕಣ್ಣೀರು ಬಿಡುತ್ತ. ತನ್ನ ಬಲ ತೋಳನ್ನು ಮೇಲಕ್ಕೆ ನೀಡಿ, ದುಃಖದಿಂದ ಅವರನ್ನು ಕುರಿತು (ಎಲೈ ಪ್ರಜೆಗಳಿರಾ ! ನೀವು ನನ್ನಲ್ಲಿ ಯಥೋಚಿತವಾದ ಆದರ ವನ್ನೂ ಪ್ರೀತಿಯನ್ನೂ ತೋರಿಸುತ್ತಿರುವಿರಿ! ನನ್ನನ್ನು ನೋಡುತಿದ್ದಷ್ಟೂ

  • ಇವೆಲ್ಲವನ್ನೂ ಮುಂದೆ ಸುಮಂತ್ರನು ದಶರಥನಿಗೆ ತಿಳಿಸುವನು. - + ರಾಮನು ತಾನಾರಂಭಿಸಿದ ವನವಾಸವ್ರತವು ನಿರಿಕ್ಷ ಪರಿಸಮಸ್ತಿಯನ್ನು ಹೊಂದಬೇಕೆಂಬುದಕ್ಕಾಗಿ, ಶಿಷ್ಟಾಚಾರವನ್ನನುಸರಿಸಿ ತಾನು ಹೊರಡುವಾಗಲೇ ಶರ ಈಗ ನಮಸ್ಕಾರಮಾಡಬೇಕಾಗಿದ ರೂ, ಆಗಿನ ಕರಸಂಕಟದಿಂದ ಆಗಲೇ ಅದನು ಮರದ, ಈಗ ಆ ದೇಶದ ಎಲ್ಲಿ ಕಟ್ಟಿಗೆ ಬಂದಮೇಲೆ, ಪುರದೇವತೆಯನ್ನು ನಮಸ್ಕರಿಸಿ

ಜೆಯನ್ನು ಬೇಡುವನೆಂದು ಗ್ರಹಿಸಬೇಕು.