ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೬೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಶ್ರೀಮದ್ರಾಮಾಯಕರ [ಸರ್ಗ, ರಿ ಅನೇಕ ಮಹರ್ಷಿಗಳಿಂದ ಸೇವಿಸಲ್ಪಡುತ್ತಿರುವ ಆ ಪುಣ್ಯನದಿಯನ್ನು ದೂ ರದಿಂದಲೇ ನಮಸ್ಕರಿಸಿದನು. ಅದರ ತೀರಪ್ರದೇಶದಲ್ಲಿ ಥರ ಸಮೃದ್ಧಿಯು ಧೈ ಅನೇಕರ್ಪಣ್ಯಾಶ್ರಮಗಳು ಕಾಣುತಿದ್ದುವು. ಆ ನದಿಯ ಮಡುಗಳಲ್ಲಿ ಅಪ್ಪರಸಿಯರೆಲ್ಲರೂ ಸಂತೋಷದಿಂದ ಬಂದು ಜಲಕ್ರೀಡೆಯಾಡುತಿದ್ದ ರು. ದೇವತೆಗಳೂ, ದಾನವರೂ, ಗಂಧರರೂ, ಕಿನ್ನರರೂ ಗಂಥರೂಪ ಯರೂ ಬಂದು ಅದನ್ನು ಸೇವಿಸುತ್ತಿದ್ದರು. ಅದರ ತೀರದಲ್ಲಿ ದೇವತೆಗಳ ಕ್ರೀಡಾಪಕ್ವತಗಳೂ, ವಿಹಾರೋದ್ಯಾನಗಳೂ, ಅನೇಕವಾಗಿ ಕಂಗೊಳಿಸು ತಿದ್ದುವು. ದೇವತೆಗಳಿಗಾಗಿ ಆಕಾಶದಲ್ಲಿ ಪ್ರವಹಿಸಿ, ದೇವಯೋಗ್ಯವಾದ ಕಮಲಗಳುಳ್ಳುದಾಗಿ, ಲೋಕಪ್ರಸಿದ್ಧವಾದ ಆ ಪುಣ್ಯನದಿಯ ಮಹಿಮೆ ಯನ್ನು ಹೇಳತಕ್ಕುದೇನು ! ಆ ಗಂಗಾನದಿಯು ಜಲಪ್ರವಾಹರೂಪವಾಗಿ ರೂ ವ್ಯಕ್ತಿಯಂತೆಯೇ ಕಾಣುತ್ತ, ಅಲ್ಲಲ್ಲಿ ನೀರು ಧುಮ್ಮಿಕ್ಕುವುದೆ ರಿಂದ ಅಟ್ಟಹಾಸವನ್ನು ಮಾಡುವಂತೆಯೂ, ಬಿಳುಪಾದ ನೊರೆಗಳಿಂದ ನಗುವಂತೆಯೂ, ಹೆಣಿಕೆಯಂತಿರುವ ಸಣ್ಣ ಸಣ್ಣ ಪ್ರವಾಹಗಳಿಂದ ಜಡೆ ಯನ್ನು ತೋರಿಸುವಂತೆಯೂ ಕಾಣುತಿತ್ತು. ಅಲ್ಲಲ್ಲಿ ನಾಭಿಯಂತಿದ್ದ ಸುಳಿಗ ಳು ತೋರುತ್ತಿದ್ದುವು. ಒಂದೊಂದುಕಡೆಯಲ್ಲಿ ಸಿಮಿತವಾದ ಮತ್ತು ಗಂ ಭೀರವಾದ ಗತಿ! ಕೆಲವೆಡೆಗಳಲ್ಲಿ ಶೀಘ್ರಗತಿ ! ಕೆಲವುಕಡೆಯಲ್ಲಿ ಗಂಭೀರವಾ ದ ಧ್ವನಿ ! ಮತ್ತೆ ಕೆಲವು ಕಡೆಗಳಲ್ಲಿ ಭಯಂಕರವಾದ ಘೋಷ ! ಹೀಗೆ ವಿಚಿ ತ್ರಸ್ವರೂಪವುಳ್ಳುದಾಗಿ ತೋರುತಿತ್ತು. ಅಲ್ಲಲ್ಲಿ ದೇವತೆಗಳು ಸ್ನಾನಾರ್ಥ ವಾಗಿ ಬಂದಿಳಿದಿದ್ದರು. ಅಲ್ಲಲ್ಲಿ ನಿರ್ಮಲವಾದ ನೈದಿಲೆಗಳು ಕಂಗೊಳಿಸು ತಿದ್ದುವು. ಅಲ್ಲಲ್ಲಿ ವಿಸ್ತಾರವಾದ ಮಳಲುದಿಣ್ಣೆಗಳು ಕಾಣುತಿದ್ದುವು. ಕೆಲವುಕಡೆಗಳಲ್ಲಿ ಬಿಳುಪಾದ ಸಣ್ಣ ಮಳಲುಗಳಿದ್ದುವು. ಅಲ್ಲಲ್ಲಿ ಹಂಸಗಳೂ, ಸಾರಸಗಳೂ, ಚಕ್ರವಾಕಗಳೂ ಇನ್ನೂ ಇತರಜಲಚರಪಕ್ಷಗಳೂ ಮದ ರಿಂದ ಇಂಪಾದ ಧ್ವನಿಯನ್ನು ಮಾಡುತಿದ್ದುವು. ತೀರವೃಕ್ಷಗಳೆಲ್ಲವೂ ಮಾಲಾಕಾರವಾಗಿ ಶೋಭಿಸುತ್ತಿದ್ದುವು. ಕಲವುಕಡೆಯಲ್ಲಿ ಅರಳಿದ ನೈದಿ ಲೆಗಳೂ, ಕೆಲವುಕಡೆಯಲ್ಲಿ ತಾವರೆಬಳ್ಳಿಗಳೂ, ಕೆಲವುಕಡೆಗಳಲ್ಲಿ ಬಿಳಿ ನೈದಿಲೆಗಳೂ, ಕೆಲವುಕಡೆಗಳಲ್ಲಿ ಸಾಗಂಥಿಕಮೊದಲಾದ ಮೊಗ್ಗುಗಳೂ ಪ್ರಕಾಶಿಸುತ್ತಿದ್ದುವು. ಅನೇಕವಿಧವಾದ ಪುಷ್ಪಧೂಳಿಗಳಿಂದ ತುಂಬಿದ ಆ