ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೬೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸರ್ಗ, ೫೦.] ಅಯೋಧ್ಯಾಕಾಂಡವು, ನದಿಯು ಮದದಿಂದ ಕೆಂಪೇರಿರುವಂತೆ ಕಾಣುತಿತ್ತು. ಕೊಳೆಯೆಂಬುದು ಸ್ವ ಲ್ಪವಾದರೂ ಇಲ್ಲದುದರಿಂದ, ವೈಡೂರಮಣಿಯಂತೆ ಸ್ವಚ್ಛವಾಗಿ ತೋರು ತಿತ್ತು. ತೀರಪ್ರದೇಶದ ಕಾಡುಗಳಲ್ಲಿ ಕೆಲವುಕಡೆಯಲ್ಲಿ ದೇವಲೋಕದ ಆನೆ ಗಳು, ಫೀಂಕಾರಧ್ವನಿಯನ್ನು ಮಾಡುತಿದ್ದುವು, ಹಣ್ಣುಗಳು, ಹೂಗಳು, ಚಿಗುರುಗಳು, ಹಸುರಾದ ಪೊದೆಗಳು, ವಿಚಿತ್ರವರ್ಣವುಳ್ಳ ಪಕ್ಷಿಗಳು, ಇವೆಲ್ಲವೂ ಅಲ್ಲಲ್ಲಿ ತುಂಬಿದ್ದುದರಿಂದ, ವಿಚಿತ್ರವಾದ ಆಭರಣಗಳಿಂದ ಅಲಂ ಕರಿಸಲ್ಪಟ್ಟ ಸಿಯಂತೆ ಕಾಣುತಿತ್ತು. ಅಲ್ಲಲ್ಲಿ ನೀರುಕೋಳಿಗಳೂ, ಮೊಸ ಳೆಗಳೂ ನೀರುಹಾವುಗಳೂ ಓಡಾಡುತ್ತಿದ್ದುವು. ಹೀಗೆ ವಿಷ್ಣು ಪಾದದಿಂದ ಹೊರಟು, ದಿವ್ಯಸ್ವರೂಪಿಣಿಯಾಗಿ, ಪಾಪದೂರೆಯಾಗಿ, ಪಾಪನಾಶಿನಿ ಯಾಗಿ, ಭಗೀರಥನ ಪ್ರಭಾವದಿಂದ ಶಿವನ ಜಟಾಜೂಟದಲ್ಲಿ ಬಿದ್ದು, ಅಲ್ಲಿಂ ದ ಭೂಮಿಗೆ ಅವತರಿಸಿದ ಸಮುದ್ರಮಹಿಷಿಯಾದ ಗಂಗೆಯನ್ನು ನೋಡಿ, ನಮಸ್ಕರಿಸಿ,ರಾಮನು ಅದರ ಸಮೀಪದಲ್ಲಿದ್ದ ಶೃಂಗಿಬೇರಪುರದ ಕಡೆಗೆ ಹೊ ರಟು ಬರುತ್ತ, ಅಲೆಗಳಿಂದಲೂ, ಸುಳಿಗಳಿಂದ ಕೂಡಿದ ಆ ಗಂಗಾಪ್ರ ವಾಹವನ್ನು ನೋಡಿ, ಸಾರಥಿಯಾದ ಸುಮಂತ್ರನನ್ನು ಕುರಿತು ಎಲೆ ಸೂ ತನೆ! ನಾವು ಈಗ ಇಲ್ಲಿಯೇ ಇಳಿದು ಬಿಡುವೆವು ಇದೋ ! ಇಲ್ಲಿ ಈ ಗಂ ಗಾನದಿಗೆ ಸಮೀಪವಾಗಿ ಅನೇಕ ಪುಷ್ಪಗಳಿಂದಲೂ, ಚಿಗುರುಗಳಿಂದಲೂ ಕೂಡಿದ ಒಂದುದೊಡ್ಡ ಇಂಗಳದ ಮರವು ಕಾಣುತ್ತಿರುವುದಲ್ಲವೆ?ಇಲ್ಲಿಯೇ ಇದ್ದು ಹೋಗುವೆವು. ದೇವದಾನವಗಂಧಯ್ಯರೇ ಮೊದಲಾದವರೂ ಈ ನ ದಿಯನ್ನು ಸನ್ಮಾನಿಸುವರು. ಅನೇಕ ಮೃಗಪಕ್ಷಿಗಳಿಗೂ ಇದು ಆಶ್ರಯ ವಾಗಿರುವುದು. ನಾನಾದೇಶದ ಮನುಷ್ಯರೂ ಇದನ್ನು ಸೇವಿಸುವರು. ಹೀಗೆ ಮಂಗಳಕರವಾದ ಈ ಪುಣ್ಯನದಿಯ ಪ್ರಭಾವವನ್ನು ನೋಡುತಿದ್ದು, ಆಮೇಲೆ ಮುಂದೆ ಹೋಗುವೆವು” ಎಂದನು. ಲಕ್ಷಣಸುಮಂತ್ರಂಬ್ಬ ರೂ ಹಾಗೆಯೇ ಆಗಲೆಂದು ಹೇಳಿ, ಆ ಇಂಗಳದ ಮವಿದ್ದ ಕಡೆಗೆ ರಥ ವನ್ನು ಬಿಟ್ಟುಕೊಂಡು ಹೋದರು. ಅಲ್ಲಿ ರಾಮನು ಸೀತಾಲಕ್ಷ್ಮಣರೊಡನೆ ರಥದಿಂದಿಳಿದಮೇಲೆ, ಸುಮಂತ್ರನೂ ರಥದಿಂದಿಳಿದು, ಕುದುರೆಗಳನ್ನು ಬಿಚ್ಚಿ, ಆ ಮರದಕೆಳಗೆ ವಿಶ್ರಮಿಸಿಕೊಂಡಿದ್ದ ರಾಮನನ್ನು ಉಪಚರಿಸುತ್ತ