ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೬೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


&cp ಶ್ರೀಮದ್ರಾಮಾಯಣದ [ಸರ್ಗ.GO ದೃನು, ಶೃಂಗಿಬೇರಪುರದ ಬೇಡರಿಗೆಲ್ಲಾ ಪ್ರಮುಖನಾದ ಗುಹನೆಂಬವ ನೊ ಬೃನು ರಾಮನಿಗೆ ಈ ಪ್ರಾಣಮಿತ್ರನು. ಆತನು ಬೇಡರ ಜಾತಿಯಲ್ಲಿ ಹುಟ್ಟಿದ ವನು. ಆತನಲ್ಲಿ ಚತುರಂಗಸೈನ್ಯವೂ ಇರುತಿತ್ತು. ಪುರುಷಶ್ರೇಷ್ಠನಾದ ರಾ ಮನು ತನ್ನ ದೇಶದ ಸಮೀಪಕ್ಕೆ ಬಂದಿರುವೆನೆಂಬ ಸುದ್ದಿಯನ್ನು ಕೇಳಿ ದೊಡನೆ ಅವನು, ತನ್ನ ವೃದ್ಯಮಂತ್ರಿಗಳೊಡನೆಯೂ, ಬಂಧುಗಳೊಡನೆ ಯೂಕೂಡಿ ರಾಮನಿದ್ದ ಕಡೆಗೆ ಬಂದನು. ಹೀಗೆ ಗುಹನು ಬರುತ್ತಿರುವುದನ್ನು ರಾಮನು ದೂರದಿಂದಲೇ ನೋಡಿ, ಲಕ್ಷಣನೊಡಗೂಡಿ ತಾನೂ ಆತನ ೩ ದಿರುಗೊಂಡುಬಂದನು.ಆಗ ಗುಹನು ನಾರುಬಟ್ಟೆಯನ್ನು ಟ್ಟಿದ್ದ ರಾಮನ +ಅಪೂರೈವೇಷವನ್ನು ನೋಡಿದೊಡನೆ ದುಃಖಿತನಾಗಿ, ಆತನನ್ನ ಪ್ಪಿಕೊಂಡು (ರಾಮಾ! ಈ ನನ್ನ ಪರವನ್ನು ನೀನು ಅಯೋಧ್ಯೆಯಂತೆಯೇ ನಿನ್ನ ದೆಂದು ತಿ ೪! ನನ್ನಿಂದ ನಿನಗೆ ಆಗಬೇಕಾದ ಕೆಲಸವನ್ನು ಆಜ್ಞಾಪಿಸು!ನಿನ್ನಂತಹಪ್ರಿಯ ನಾದ ಅತಿಥಿಯು ಮತ್ತಾರಿಗೆತಾನೇ ಸಿಕ್ಕುವನು?ನೀನು ಇಲ್ಲಿಗೆ ಬಂದುದು ನನ್ನ ಪೂರೈಪುಣ್ಯವೇಹೊರತು ಬೇರೆಯಲ್ಲ ಎಂದು ಹೇಳಿ, ಮೇಲಾದ ಬಹು ವಿಧದ ಅನ್ನಗಳನ್ನು ತಂದಿಟ್ಟು, ಅರ್ಭ್ಯುವನ್ನು ತರಿಸಿ ಮಹಾಬಾಹುವಾದ ಎಲೈ ರಾಮನೆ! ನಿನಗೆ ಸ್ವಾಗತವು! ಈ ಸಮಸ್ಯಭೂಮಿಯೂ ನಿನ್ನ ದೇ ಆಗಿ ರುವುದು. ನಾವೆಲ್ಲರೂ ನಿನಗೆ ಕಿಂಕರರು. ನೀನೇ ನನ್ನನ್ನು ಪೋಷಿಸತಕ್ಕ ಪ್ರಭು! ಇದೋ! ನಮ್ಮ ರಾಜ್ಯವನ್ನು ನಿನಗೇ ಒಪ್ಪಿಸಿರುವೆವು. ಇನ್ನು ಮೇಲೆ ನೀನೇ ಇದನ್ನು ರಕ್ಷಿಸು. ಇದೊ! ನಿನ್ನ ಭೋಜನಕ್ಕೆ ಬೇಕಾದ ಭ ಕಭೋಜ್ಯ ಪಾನೀಯಾದಿ ಸಮಸ್ತಭೋಜನಪದಾರ್ಥಗಳೂ ಸಿದ್ಧವಾಗಿ

  • ** ಹೀನಪ್ರೇಂ ಹೀನಸಖಂ ಹೀನಗೇಹನಿಷೇವಣಂ”ಎಂಬಂತೆ, ಹೀನರೊಡನೆ ಸಖ್ಯವೂ ಒಂದು ಉಪಪಾತಕವೆನಿಸುವುದು, ಹೀಗಿರುವಾಗ ಮಹಾಕುಲಪ್ರಸೂತನಾದ ರಾಮನಿಗೆ, ಬೇಡರ ಜಾತಿಯ ಗಹನೊಡನೆ ಸಖ್ಯವು ಉಚಿತವೇ ಎಂದರೆ, “ನ ಶೂ ದ್ರಾ ಭಗವದ್ಭಕ್ತಾ, ವಿಪ್ರಾ ಭಾಗವತಾಗೃತಾಃ | ಸರತ್ಯೇಷು ತೇ ಶೂದ್ರಾ ಯೇ ಹೃಭಕ್ತಾ ಜನಾರನೇ?” ಎಂಬಂತೆ, ಆತನು ರಾಮಭಕ್ತನಾದುದರಿಂದ ಉತ್ತಮನೇ ಹೊರತು ಹೀನನಲ್ಲವೆಂದು ಗ್ರಹಿಸಬೇಕು, - + ಇದರಿಂದ ರಾಮನಿಗೆ ಬೇಟೆ ಮೊದಲಾದ ವ್ಯಾಪಾರಗಳ ಮೂಲಕವಾಗಿ ಗು ಹನೊಡನೆ ಮೊದಲೇ ಸ್ನೇಹವಿತ್ತೆಂದೂ ಸೂಚಿತವಾಗುವದು