ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೬೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೬ds' ಮದ್ರಾಮಾಯದವು - [ಸರ್ಗ, ಜ೧ ಮುಂದೆ ತಂದಿಟ್ಟ, ಗಂಗಾನದಿಯ ನೀರನ್ನು ಕುಡಿದು, ಆ ಜಲಾಹಾರದಿಂದಲೇ ತೃಪ್ತನಾಗಿ,ಕೈಕಾಲುಗಳನ್ನು ತೊಳೆದು ಅಚಮನವನ್ನು ಮಾಡಿ ಸೀತೆಯೊಡ ನೆ ನೆಲದಮೇಲೆ ಮಲಗಿಬಿಟ್ಟನು. ಆಮೇಲೆ ಲಕ್ಷಣನು ಗುಹನಿಮ್ಮ ಕ ಡೆಗೆ ಬಂದು, ಆತನೊಡನೆ ಆ ಮರದಡಿಯಲ್ಲಿ ಕುಳಿತನು. ಆಗ ಗುಹ ಸುಮಂತ್ರರಿಬ್ಬರೂ ರಾಮನ ಗುಣಗಳನ್ನು ಪ್ರಸಂಗಿಸುತ್ತಾ, ಲಕ್ಷಣ ನನ್ನೂ ಆಗಾಗೆ ವಿಚಾರಿಸುತ್ತಿದ್ದರು. ಅಲ್ಲಿ ಗುಹನು ಧನುರ್ಧಾರಿಯಾಗಿ ಆ ರಾತ್ರಿಯೆಲ್ಲವೂ ಎಚ್ಚರಗೊಂಡು ಕಾವಲಿದ್ದನು. ಹೀಗೆ ಯಶಸ್ವಿಯಾಗಿಯೂ ಬುದ್ಧಿವಂತನಾಗಿಯೂ ಇರುವ ಮಹಾತ್ಮನಾದ ರಾಮನು, ನೆಲದಲ್ಲಿ ಮಲ ಗಿರಲು, ಹುಟ್ಟಿದುದು ಮೊದಲು ದುಃಖವೆಂಬುದನ್ನೇ ಕಾಣದೆ ಸುಖದಲ್ಲಿ ಯೇ ಬಳೆದ ಆತನಿಗೆ, ಸುಖನಿದ್ರೆಯ ಬಾರದುದರಿಂದ, ಆ ರಾತ್ರಿಯು ಬ ಹುದೀರ್ಘಕಾಲದಂತೆ ತೋರಿ, ಹಾಗೆಯೇ ಬಹುಕಷ್ಟದಿಂದ ಕಳೆದುಹೋ ಯಿತು. ಇಲ್ಲಿಗೆ ಐವತ್ತನೆಯ ಸರ್ಗವು. ++ಗುಹಲಕ್ಷಣರ ಸಂಭಾಷಣವು +++ ಆಗ ತನ್ನ ಅಣ್ಣನ ರಕ್ಷಣೆಗಾಗಿ ಮನಃಪೂರೈಕವಾದ ಪ್ರೀತಿಯಿಂದ ರಾತ್ರಿಯೆಲ್ಲವೂ ಎಚ್ಚರದಿಂದ ಕಾಯುತಿದ್ದ ಲಕ್ಷಣವನ್ನು ನೋಡಿ ಗುಹನು, ಮರುಕಗೊಂಡು, ಆತನನ್ನು ಕುರಿತು (ಅಯ್ಯ ಲಕ್ಷಣಾ! ಇದೋ ! ಇಲ್ಲಿನಿನ ಗಾಗಿಯೂ ಸುಖವಾದ ಹಾಸಿಗೆಯನ್ನು ಕಲ್ಪಿಸಿರುವೆನು. ನೀನೂ ಇದರಲ್ಲಿ ವಿಶ್ರಮಿಸಿಕೊಳ್ಳಬಹುದಲ್ಲವೆ? ಎಲೈ ರಾಜಕುಮಾರನೆ ! ನೀನೇಕೆ ಮಲಗ ಬಾರದು ? ಕಾಡಿನಲ್ಲಿ ವಾಸಮಾಡುವ ನಾವೆಲ್ಲರೂ ಯಾವಾಗಲೂ ಕಷ್ಟ ಜೀವಿಗಳು. ಎಷ್ಟು ಕಷ್ಟವಾದರೂ ಸಹಿಸಬಲ್ಲೆವು. ರಾಜಕುಮಾರನಾದ ನೀನು ಸುಖದಲ್ಲಿಯೇ ಬಳೆದವನಾದುದರಿಂದ, ಇಂತಹ ಕಷ್ಟಗಳಿಗೆ ಅರ್ಹ ನಲ್ಲ! ರಾಮನ ಕಾವಲಿಗಾಗಿ ನಾವೆಲ್ಲರೂ ಎಚ್ಚರಗೊಂಡಿರುವೆವು. ನನಗೆ ರಾಮನಿಗಿಂತಲೂ ಪ್ರಿಯನಾದವನು ಭೂಮಿಯಲ್ಲಿ ಬೇರೊಬ್ಬನೂ ಇಲ್ಲ. ಸತ್ಯವಾಗಿ ಆಣೆಯಿಟ್ಟು ಹೇಳುವೆನು. ಈ ಲೋಕದಲ್ಲಿ ನಾನು ಕೀರ್ತಿಯನ್ನಾ ಗಲಿ.ಧಮ್ಮವನ್ನಾಗಲಿ,ಅರವನ್ನಾಗಲಿ, ಈತನ ಅನುಗ್ರಹದಿಂದಲೇ ಪಡೆಯದೇ