ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

© . ಸರ್ಗ, .] ಅಯೋಧ್ಯಾಕಾಂಡವು. ಕಂದಿರುವೆನು. ಈ ರಾಮನು ಸೀತೆಯೊಡಗೂಡಿ ಇಲ್ಲಿ ಮಲಗಿರುವ ಕಾಲ ದಲ್ಲಿ, ಆತನ ರಕ್ಷಣೆಗಾಗಿ ನಾನೇ ಧನುರ್ಧಾರಿಯಾಗಿ ಸುತ್ತಲೂ ಕಾವಲಿ ರುವೆನು. ನಾನೊಬ್ಬನೇ ಅಲ್ಲ! ನನ್ನ ಕಡೆಯವರನೇಕರೂ ಇಲ್ಲಿರುವರು. ಅವರ ಲ್ಲರೂ ನನಗೆ ಸಹಾಯಕರಾಗುವರು. ನಾನು ಬಹುಕಾಲದಿಂದ ಈ ಕಾಡಿನಲ್ಲಿ ಯೇ ಇದ್ದು ಬಳಿಕೆಯುಳ್ಳವನು. ಇಲ್ಲಿ ನನಗೆ ತಿಳಿಯದುದೊಂದೂ ಇಲ್ಲ. ಶತ್ರುಗಳು ಎಷ್ಟೇ ದೊಡ್ಡ ಚತುರಂಗಸೈನ್ಯವನ್ನು ಕಟ್ಟಿಕೊಂಡುಬಂದರೂ ನಾವು ತಡೆಯಬಲ್ಲೆವು. ಆದುದರಿಂದ ನೀನು ಸುಖವಾಗಿ ಮಲಗು"ಎಂದನು. ಇದನ್ನು ಕೇಳಿ ಲಕ್ಷಣನು ಗುಹನನ್ನು ಕುರಿತು 'ಎಲೈಮಿತ್ರನೆ ! ನೀನಿರು. ವಾಗ ನಮಗೆ ಭಯವೆಲ್ಲಿಯದು?ದೋಷರಹಿತನಾಗಿ, ಭರವನ್ನೇ ಮುಂದಿಟ್ಟು, ಕೊಂಡು ನಡೆಯುತ್ತಿರುವ ನೀನೇ ಇಲ್ಲಿ ನಮಗೆ ಬೆಂಬಲವಾಗಿರುವಾಗ, ನಾವು ಸುಖವಾಗಿ ನಿದ್ರಿಸಬಹುದೆಂಬುದರಲ್ಲಿ ಸಂದೇಹವಿಲ್ಲ. ಆದರೂ ಅಣ್ಣನಾದ ರಾಮನು ಸೀತಯೊಡನೆ ಹೀಗೆ ನೆಲದಮೇಲೆ ಮಲಗಿದ್ದರೆ, ಅದನ್ನು ನೋಡಿ ಹೇಗೆತಾನೇ ನನಗೆ ನಿದ್ರೆಯು ಬಂದೀತು? ಮನಸ್ಸಿಗೆ ನೆಮ್ಮದಿಯಿಲ್ಲದಮೇ ಲೆ ಸುಖದಾಸೆಯೇನು?ಯಾವನ ವೀರವನ್ನು ಯುದ್ಧ ಕಾಲದಲ್ಲಿ ದೇವಾಸು ರರೂ ತಡೆಯಲಾರರೋ, ಅಂತಹ ಮಹಾನುಭಾವನು ತನ್ನ ಪತ್ನಿಯೊಡನೆ ಹುಲ್ಲಿನಮೇಲೆ ಮಲಗಿರುವುದನ್ನು ನೋಡಿದೆಯಾ? ದಶರಥನು ಬಹುಕಾಲದ ವರೆಗೆ ಮಂತ್ರಗಳನ್ನು ನಡೆಸಿ, ಅನೇಕತಪಸ್ಸುಗಳನ್ನು ಮಾಡಿ, ಯಜ್ಞಾದಿ ಕಾರಗಳಿಂದ ಶ್ರಮಪಟ್ಟು ತನಗೆ ಸಮಾನವಾದ ಸುಲಕ್ಷಣಗಳುಳ್ಳ ಯಾವ ಸಿಯಪುತ್ರನನ್ನು ಪಡೆದನೋ, ಅಂತಹ ಪುತ್ರರತ್ನ ವೇಕಾಡಿಗೆಹೋದಮೇಲೆ, ಆ ದಶರಥನು ಇನ್ನು ಬಹುಕಾಲದವರೆಗೆ ಬದುಕಿರಲಾರನು.ಇನ್ನು ಈ ಭೂ ದೇವಿಯೂ ಶೀಘ್ರದಲ್ಲಿಯೇ ವಿಧವೆಯಾಗುವುದರಲ್ಲಿ ಸಂದೇಹವಿಲ್ಲ. ರಾಜ ಗೃಹದಲ್ಲಿರುವ ಸ್ತ್ರೀಯರೆಲ್ಲರೂ ಇದುವರೆಗೆ ಅನೇಕ ವಿಧದಲ್ಲಿ ಪ್ರಲಾಪಿಸಿ ಅದರಿಂದ ಬಳಲಿ ಸುಮ್ಮನಾಗಿರುವರು. ಈಗ ನಮ್ಮ ಮನೆಯಲ್ಲವೂ ನಿಶ್ಯಬ್ಬ ವಾಗಿರುವುದೆಂದೆಣಿಸುವೆನು. ಕಸಿಯಾಗಲಿ, ರಾಜನಾಗಲಿ, ನನ್ನ ತಾಯಿ ಯಾಗಲಿ ಬದುಕಿರುವರೆಂಬುದು ನನಗೆ ನಿಶ್ಚಯವಿಲ್ಲ! ಒಂದುವೇಳೆ ಬದುಕಿ Wರೂ ಈರಾತ್ರಿಮಾತ್ರವೇ ಬದುಕಿರಬಹುದೇಕೊರತು, ಆಮೇಲೆ ಪ್ರಾಣ'